ಯೂಟ್ಯೂಬ್‌ನಲ್ಲಿ ಪವರ್ ಸ್ಟಾರ್ ಹವಾ: ನಂಬರ್ 1, 2ರಲ್ಲೂ ಪುನೀತ್ ಟ್ರೆಂಡಿಂಗ್

ಎರಡು ದಿನದಿಂದ ಎಲ್ಲೆಲ್ಲೂ ಪವರ್ ಸ್ಟಾರ್ ಹವಾ ಜೋರಾಗಿದೆ. ಮಂಗಳವಾರವಷ್ಟೇ ಜನ್ಮದಿನ ಆಚರಿಸಿಕೊಂಡ ಪುನೀತ್ ರಾಜ್‌ಕುಮಾರ್ ದಿನ ಕಳೆದ ಬಳಿಕವೂ ಟ್ರೆಂಡಿಂಗ್‌ನಲ್ಲಿದ್ದಾರೆ. ಸೋಮವಾರದಿಂದಲೇ ಪುನೀತ್‌ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂದೇಶ ಹಂಚಿಕೊಂಡಿದ್ದರು. ಒಂದು ದಿನ ಕಳೆದರೂ ಪುನೀತ್‌ಗೆ ಇನ್ನೂ ಶುಭಾಶಯಗಳ ಮಹಾಪೂರ ಹರಿದುಬರುತ್ತಲೇ ಇದೆ.

ಜನ್ಮದಿನದ ಪ್ರಯುಕ್ತ ಶುಭ ಹಾರೈಸಲು ಅಭಿಮಾನಿಗಳು ಮನೆಯ ಬಳಿ ಬರಬಾರದು. ಎಲ್ಲರೂ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ, ಸುರಕ್ಷಿತವಾಗಿರಿ. ಅಂದು ನಾನು ಮನೆಯಲ್ಲಿ ಇರುವುದಿಲ್ಲ ಎಂದು ಪುನೀತ್ ತಿಳಿಸಿದ್ದರು. ಹೀಗಾಗಿ ಅವರ ಹುಟ್ಟುಹಬ್ಬದ ಆಚರಣೆಯ ಇಲ್ಲದಿದ್ದರೂ, ಅಭಿಮಾನಿಗಳ ಸಂಭ್ರಮ ಕಡಿಮೆಯಾಗದಂತೆ ಎರಡೆರಡು ಉಡುಗೊರೆಗಳು ಅವರಿಗೆ ಸಿಕ್ಕಿವೆ.

ಮೊದಲ ಎರಡೂ ಸ್ಥಾನದಲ್ಲಿ ಅಪ್ಪು

ಮೊದಲ ಎರಡೂ ಸ್ಥಾನದಲ್ಲಿ ಅಪ್ಪು

ಪುನೀತ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಭಾರತದ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಪುನೀತ್ ಅವರ 'ಯುವರತ್ನ' ಸಿನಿಮಾದ ಡೈಲಾಗ್ ಟೀಸರ್ ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿಯೂ ಪುನೀತ್ ಇರುವುದು ಮತ್ತೊಂದು ವಿಶೇಷ. ಎರಡನೆಯ ಸ್ಥಾನದಲ್ಲಿ 'ಜೇಮ್ಸ್' ಚಿತ್ರದ ರೇಸಿ ಮೋಷನ್ ಮೋಸ್ಟರ್ ಇದೆ.

ಯುವರತ್ನ ನಂಬರ್ ಒನ್

ಯುವರತ್ನ ನಂಬರ್ ಒನ್

ಪುನೀತ್ ಹುಟ್ಟುಹಬ್ಬದ ಮುನ್ನಾದಿನ ಸಂಜೆ 'ಯುವರತ್ನ'ದ ಡೈಲಾಗ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಲಕ್ಷ ವೀಕ್ಷಣೆ ಕಂಡ ಟೀಸರ್, ಈಗ ಎರಡು ಮಿಲಿಯನ್ ವೀಕ್ಷಣೆಯತ್ತ ದಾಪುಗಾಲು ಹಾಕಿದೆ. 1.30 ಲಕ್ಷ ಲೈಕ್‌ಗಳು ಈ ಟೀಸರ್‌ಗೆ ಬಂದಿವೆ. ಟೀಸರ್ ಬಿಡುಗಡೆಯಾಗಿ ಒಂದು ದಿನ ಕಳೆದರೂ ನಂಬರ್ ಒನ್ ಟ್ರೆಂಡಿಂಗ್‌ನಲ್ಲಿರುವುದು ವಿಶೇಷ.

ಟ್ವಿಟ್ಟರ್, ಯೂಟ್ಯೂಬ್ ಟ್ರೆಂಡ್

ಟ್ವಿಟ್ಟರ್, ಯೂಟ್ಯೂಬ್ ಟ್ರೆಂಡ್

1.39 ನಿಮಿಷದ ಈ ಟೀಸರ್‌ಗೆ ಕನ್ನಡ ಮಾತ್ರವಲ್ಲದೆ, ನೆರೆಯ ಭಾಷೆಗಳ ಸಿನಿಮಾ ಅಭಿಮಾನಿಗಳೂ ಲೈಕ್ ಕೊಟ್ಟಿದ್ದಾರೆ. 80 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಯೂಟ್ಯೂಬ್‌ನಲ್ಲಿ ದಾಖಲಾಗಿವೆ. 'ಯುವರತ್ನ ಡೈಲಾಗ್ ಟೀಸರ್' ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿತ್ತು.

ಮೋಷನ್ ಪೋಸ್ಟರ್ ಹವಾ

ಮೋಷನ್ ಪೋಸ್ಟರ್ ಹವಾ

ಪುನೀತ್ ಜನ್ಮದಿನದ ಪ್ರಯುಕ್ತ ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರ ತಂಡವೂ ಅಭಿಮಾನಿಗಳಿಗೆ ಖುಷಿಯ ಸಂಗತಿ ನೀಡಿತ್ತು. ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್‌ಅನ್ನು ಬಿಡುಗಡೆ ಮಾಡಿತ್ತು. 1.31 ನಿಮಿಷಗಳ ಈ ಪೋಸ್ಟರ್ ವಿಡಿಯೋ ಕೂಡ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ.

ನಾಲ್ಕು ಲಕ್ಷಕ್ಕೂ ಅಧಿಕ ವೀವ್ಸ್

ನಾಲ್ಕು ಲಕ್ಷಕ್ಕೂ ಅಧಿಕ ವೀವ್ಸ್

ಬಿಡುಗಡೆಯಾದ 18 ಗಂಟೆಗಳಲ್ಲಿಯೇ ಜೇಮ್ಸ್ ಮೋಷನ್ ಪೋಸ್ಟರ್‌ಅನ್ನು ನಾಲ್ಕು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ. 47 ಸಾವಿರ ಲೈಕ್‌ಗಳು ಬಂದಿವೆ. ಪೋಸ್ಟರ್‌ನಲ್ಲಿನ ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ. ಇದು ಯೂಟ್ಯೂಬ್‌ನಲ್ಲಿ ಎರಡನೆಯ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ

More from Filmibeat

English summary
Puneeth Rajkumar's upcoming movies Yuvarathnaa and Jemes teasers are trending in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X