»   » ನವನಿರ್ದೇಶಕರ ಸಿನಿಮಾ ನಿರ್ಮಾಣಕ್ಕೆ ಒಲವು ತೋರಿದ ಪುನೀತ್

ನವನಿರ್ದೇಶಕರ ಸಿನಿಮಾ ನಿರ್ಮಾಣಕ್ಕೆ ಒಲವು ತೋರಿದ ಪುನೀತ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೊತೆಗೆ ಗಾಯಕರಾಗಿಯೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ರಾಜರತ್ನ.

ಇಷ್ಟು ದಿನ ನಟನೆ, ಗಾಯನದಲ್ಲಿ ಮಾತ್ರ ತೊಡಗಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಈಗ ಸ್ಯಾಂಡಲ್ ವುಡ್ ನಲ್ಲಿ ನವನಿರ್ದೇಶಕರ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಆಸಕ್ತಿ ತೋರಿಸಿದ್ದು, ನಿರ್ಮಾಪಕರಾಗಿದ್ದಾರೆ.

ನವನಿರ್ದೇಶಕರ ಚಿತ್ರ ನಿರ್ಮಾಣಕ್ಕೆ ಆಸಕ್ತಿ ತೋರಿದ ಪುನೀತ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ನವನಿರ್ದೇಶಕರೇ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರಗಳನ್ನು ಚಿತ್ರಕಥೆ ಬರೆದು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ಹಲವು ಹೊಸ ನಿರ್ದೇಶಕರು ತಾವು ಆಕ್ಷನ್ ಕಟ್ ಹೇಳಿದ ಮೊದಲ ಚಿತ್ರಗಳಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತಹ ನಿರ್ದೇಶಕರ ಚಿತ್ರಗಳನ್ನು ನಿರ್ಮಾಣ ಮಾಡಲು ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಲವು ತೋರಿದ್ದಾರೆ.

ಸತ್ಯ ಪ್ರಕಾಶ್ ಚಿತ್ರ ನಿರ್ಮಾಣಕ್ಕೆ ಉತ್ಸುಕರಾದ ಪುನೀತ್

ಅಂದಹಾಗೆ ಕಳೆದ ವರ್ಷ ಬಿಡುಗಡೆಯಾದ ನವ ನಿರ್ದೇಶಕ ಸತ್ಯ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದ 'ರಾಮಾ ರಾಮಾ ರೇ' ಚಿತ್ರವನ್ನು ನೋಡಿ ಇಷ್ಟಪಟ್ಟು ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಸತ್ಯ ಪ್ರಕಾಶ್ ಅವರ ಚಿತ್ರವನ್ನು ನಿರ್ಮಾಣ ಮಾಡಲು ಆಸಕ್ತಿತೋರಿಸಿದ್ದಾರೆ. 'ರಾಮಾ ರಾಮಾ ರೇ' ಚಿತ್ರಕ್ಕೆ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ, ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ, 2016 ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳು ಲಭಿಸಿದ್ದವು.

ಪುನೀತ್ ನಿರ್ಮಾಣ ಮಾಡಲಿರುವ ಸತ್ಯ ಪ್ರಕಾಶ್ ಸಿನಿಮಾ ಯಾವುದು?

ಆದ್ರೆ ಚಿತ್ರ ಯಾವುದು, ಯಾವಾಗ ಚಿತ್ರೀಕರಣ ಆರಂಭವಾಗಲಿದೆ ಎಂಬುದು ಇನ್ನು ಫೈನಲೈಸ್ ಆಗಿಲ್ಲ. ಯಾಕಂದ್ರೆ ಪುನೀತ್ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ 'ರಾಮಾ ರಾಮ ರೇ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ನಿರ್ದೇಶಕರ ಜೊತೆ ಅಂತಹದೇ ಪ್ರಯೋಗಾತ್ಮಕ ಸಿನಿಮಾ ಮಾಡಬೇಕು ಎಂದಿದ್ದಾರೆ ಅಷ್ಟೆ. ಆದರೆ ಅಧಿಕೃತವಾಗಿ ಈ ಬಗ್ಗೆ ಇನ್ನೂ ಮಾತುಕತೆ ಆಗಿಲ್ಲ.

ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣ

ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ನವನಿರ್ದೇಶಕರ ಚಿತ್ರಗಳನ್ನು ನಿರ್ಮಾಣ ಮಾಡಲು ಬಯಸಿರುವ ಪುನೀತ್ ರಾಜ್ ಕುಮಾರ್, ತಮ್ಮ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಿದ್ದಾರೆ.

ಪುನೀತ್ ನಿರ್ಮಾಣದಲ್ಲಿ ಹೇಮಂತ್ ರಾವ್ ಚಿತ್ರ

ಪವರ್ ಸ್ಟಾರ್ ಈಗಾಗಲೇ ತಾವು ಅಂದುಕೊಂಡಂತೆ ಯುವ ನಿರ್ದೇಶಕರ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚೊಚ್ಚಲ ಸಿನಿಮಾಗೆ 'ಗೊಲ್ಲಪುಡಿ ಶ್ರೀನಿವಾಸ್' ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಹೇಮಂತ್ ರಾವ್ ರವರ 'ಅರ್ಧಸತ್ಯ' ಚಿತ್ರ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ.['ಗೋಧಿ ಬಣ್ಣ' ನಿರ್ದೇಶಕನ ಮುಂದಿನ ಚಿತ್ರದ 'ಅರ್ಧಸತ್ಯ']

English summary
Kannada Actor Puneeth Rajkumar shown interested to produce 'Rama Rama Re..' director D Satya Prakash movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada