'ಐ ಲವ್ ಯೂ, ಯೂ ಮಸ್ಟ್ ಲವ್ ಮಿ' ಎನ್ನುತ್ತಿದ್ದಾರೆ ಪುನೀತ್: ಮತ್ತೆ 'ಓಂ' ಚಿತ್ರ ಮಾಡ್ತಾರಾ ಅಪ್ಪು?
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ 'ಓಂ' ಮುಂಚೂಣಿಯಲ್ಲಿ ನಿಲ್ಲುತ್ತದೆ. ಬಿಡುಗಡೆಯಾಗಿ 25 ವರ್ಷಗಳಾದರೂ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈಗಲೂ ಆ ಚಿತ್ರವನ್ನು ಜನರು ಮುಗಿಬಿದ್ದು ನೋಡುವುದಕ್ಕೆ ಸಾಕ್ಷಿ. ಇತ್ತೀಚೆಗೆ ಚಿತ್ರಕ್ಕೆ 25 ವರ್ಷ ತುಂಬಿದ ಸಂಭ್ರಮವನ್ನು ಅಭಿಮಾನಿಗಳು ಮನೆಯ ಹಬ್ಬದಂತೆ ಆಚರಿಸಿದ್ದರು.
Recommended Video
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ 'ಓಂ' ಬೇರೆಯದೇ ಮಟ್ಟದಲ್ಲಿ ನಿಲ್ಲುತ್ತದೆ. ಶಿವಣ್ಣನಿಗೆ ಯಾರೂ ಸರಿಸಾಟಿಯಿಲ್ಲ. ಅವರಲ್ಲದೆ ಬೇರೆ ಯಾರೇ ಈ ಪಾತ್ರದಲ್ಲಿ ನಟಿಸಿದ್ದರೂ ಈ ಮಟ್ಟಿನ ಅಭಿನಯ ಸಾಧ್ಯವಾಗುತ್ತಿರಲಿಲ್ಲ. ಇಷ್ಟು ಕ್ರೇಜ್ ಕೂಡ ಹುಟ್ಟಿಸುತ್ತಿರಲಿಲ್ಲ ಎನ್ನುವ ಮಾತಿದೆ. ಆದರೆ 'ಓಂ' ಚಿತ್ರದಲ್ಲಿ ಪುನೀತ್ ಕಾಣಿಸಿಕೊಂಡರೆ? ಮುಂದೆ ಓದಿ...

'ಐ ಲವ್ ಯೂ...'
ನಿಜ. ಓಂ ಚಿತ್ರದಲ್ಲಿ ಹುಚ್ಚು ಹಿಡಿಸಿದ ಸಂಗತಿಗಳಲ್ಲಿ ಅದರ 'ಐ ಲವ್ ಯೂ... ಯೂ ಮಸ್ಟ್ ಲವ್ ಮಿ...' ಹಾಡೂ ಸೇರಿದೆ. ಆ ಸಾಲು ಕೇಳಿದಾಗ ಸನ್ನಿವೇಶಗಳೂ ಕಣ್ಣ ಮುಂದೆ ಬಂದು ಮೈ ಜುಂ ಎನ್ನಿಸುವಂತಿದೆ. ಈ ಸಾಲುಗಳನ್ನು ಪುನೀತ್ ರಾಜ್ ಕುಮಾರ್ ಕೂಡ ಗುನುಗಲು ಶುರುಮಾಡಿದ್ದಾರೆ.

'ಯುವರತ್ನ'ದಲ್ಲಿ 'ಓಂ' ಸೊಗಡು!
ಇದೇನು ಮತ್ತೊಂದು 'ಓಂ' ಚಿತ್ರ ಬರುತ್ತದೆಯಾ? ಪುನೀತ್ ನಟಿಸುತ್ತಾರಾ? ಎಂಬ ಗೊಂದಲ ಬೇಡ. 'ಓಂ' ಪ್ರಿಯರಿಗೆ ಪುನೀತ್ ಮಜಾ ನೀಡಲಿದ್ದಾರೆ. 'ಯುವರತ್ನ' ಚಿತ್ರದಲ್ಲಿ ಪುನೀತ್ 'ಓಂ' ಚಿತ್ರವನ್ನು ನೆನಪಿಸುವ ಸನ್ನಿವೇಶವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಿವಣ್ಣ ಜತೆ ಪವರ್‌ಸ್ಟಾರ್ ಮೋಡಿ
'ಐ ಲವ್ ಯೂ... ಯೂ ಮಸ್ಟ್ ಲವ್ ಮೀ...' ಎಂದು ಪುನೀತ್ ಹಾಡುವ ಡಬ್ಬಿಂಗ್ ಸಂದರ್ಭದ ವಿಡಿಯೋವೊಂದನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದಾರೆ. 'ಯುವರತ್ನ' ಚಿತ್ರದ ಸೆನ್ಸೇಷನಲ್ ಸೀನ್. ಶಿವಣ್ಣ ಜತೆ ಪವರ್ ಸ್ಟಾರ್ ಮೋಡಿ ಮಾಡಿದ್ದಾರೆ. ನಿಮ್ಮ ಹಾಗೆ ಅಭಿಮಾನಿಯಾಗಿ ಈ ದೃಶ್ಯವನ್ನು ನೋಡಲು ಕಾಯುತ್ತಿದ್ದೇನೆ ಎಂದು ಸಂತೋಷ್ ತಿಳಿಸಿದ್ದಾರೆ.

ವೈರಲ್ ಆದ ವಿಡಿಯೋ
ಯುವರತ್ನ ಚಿತ್ರತಂಡ ಶೇರ್ ಮಾಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪ್ಪು ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಮೂಡಿಸಿದೆ. ಶಿವಣ್ಣದ ಸೂಪರ್ ಹಿಟ್ ಚಿತ್ರ 'ಓಂ' ಅನ್ನು ನೆನಪಿಸುವ ದೃಶ್ಯದಲ್ಲಿ ಪುನೀತ್ ಅಭಿನಯಿಸುತ್ತಿರುವುದು 'ಯುವರತ್ನ' ಚಿತ್ರದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಈ ದೃಶ್ಯ ಹೇಗಿದೆ? ಅದರಲ್ಲಿ ಪುನೀತ್ ಹೇಗೆ ಅಭಿನಯಿಸಿದ್ದಾರೆ? ಈ ಕುತೂಹಲಗಳನ್ನು ಚಿತ್ರಮಂದಿರದಲ್ಲಿಯೇ ತಣಿಸಿಕೊಳ್ಳಬೇಕು.

'ಓಂ' ಚಿತ್ರದ ಪೋಸ್ಟರ್ ಇರುವ ಚಿತ್ರ
ಈ ಹಿಂದೆಯೂ ಸಂತೋಷ್ ಆನಂದ್ ರಾಮ್ 'ಓಂ' ಚಿತ್ರಕ್ಕೂ 'ಯುವರತ್ನ'ಕ್ಕೂ ಒಂದು ನಂಟು ಇದೆ ಎಂಬುದನ್ನು ತೋರಿಸಿದ್ದರು. 'ಓಂ' ಚಿತ್ರದ ಸತ್ಯ ಪಾತ್ರದ ಪೋಸ್ಟರ್‌ಗಳು ಇರುವ ಚಿತ್ರಮಂದಿರದ ಫೋಟೊವನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವ ಪುನೀತ್ ಅವರಿಗೂ 'ಓಂ' ಚಿತ್ರಕ್ಕೂ ನಂಟು ಇರುವ ಸನ್ನಿವೇಶ ಇರುವುದನ್ನು ಇದು ಖಚಿತಪಡಿಸಿತ್ತು.


Click it and Unblock the Notifications











