Appu Box Office:'ಅಪ್ಪು' ರಿ-ರಿಲೀಸ್ ಲಾಭನಾ? ನಷ್ಟನಾ? 7 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಇತ್ತೀಚೆಗಷ್ಟೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಪುನೀತ್ ಅಭಿಮಾನಿಗಳಿಗಾಗಿ 'ಅಪ್ಪು' ಸಿನಿಮಾವನ್ನು ರಿ ರಿಲೀಸ್ ಮಾಡಲಾಗಿತ್ತು. ಅಭಿಮಾನಿಗಳ ಆಸೆಯಂತೆಯೇ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಅಪ್ಪು' ಸಿನಿಮಾವನ್ನು ಸುಮಾರು 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು.

'ಅಪ್ಪು' ರಿ-ರಿಲೀಸ್‌ಗೆ ಕರ್ನಾಟಕದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ನಾಲ್ಕು ದಿನ ಪುನೀತ್ ಅಭಿಮಾನಿಗಳು 'ಅಪ್ಪು' ನೋಡುವುದಕ್ಕೆ ಥಿಯೇಟರ್‌ಗಳಿಗೆ ನುಗ್ಗಿದ್ದರು. ಮೊದಲ ನಾಲ್ಕು ದಿನ ಪುನೀತ್ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. ನಂತರದ ದಿನಗಳಲ್ಲಿ 'ಅಪ್ಪು' ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ.

Puneeth Rajkumar starrer Appu film re release 7 days Karnataka box office collection report

2002ರಲ್ಲಿ ಪುನೀತ್ ರಾಜ್‌ಕುಮಾರ್‌ ಅನ್ನು ಪವರ್‌ಸ್ಟಾರ್ ಮಾಡಿದ ಸಿನಿಮಾವಿದು. ಈಗ 23 ವರ್ಷಗಳ ಬಳಿಕ ರಿ ರಿಲೀಸ್ ಕಂಡಿದೆ. ಹಾಗಿದ್ದರೆ, ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾ ಮರು ಬಿಡುಗಡೆಯಾದಾಗ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಒಂದು ವಾರದಲ್ಲಿ ದಾಖಲೆ ಕಲೆಕ್ಷನ್ ಏನಾದರೂ ಆಗಿದೆಯಾ? ತಿಳಿಯಲು ಮುಂದೆ ಓದಿ.

ಮೊದಲ ವಾರ 'ಅಪ್ಪು' ಕಲೆಕ್ಷನ್ ಏನು?

ಪುನೀತ್ ರಾಜ್‌ಕುಮಾರ್ ನಟಿಸಿದ ಪವರ್‌ಫುಲ್ ಸಿನಿಮಾ 'ಅಪ್ಪು' ಮೊದಲ ನಾಲ್ಕು ದಿನ ಉತ್ತಮ ಕಲೆಕ್ಷನ್ ಮಾಡಿದೆ. ಈ ಸಿನಿಮಾ ರಿ-ರಿಲೀಸ್ ಆದ ದಿನ ಗ್ರ್ಯಾಂಡ್ ಓಪನಿಂಗ್ ಸಿಕ್ಕಿತ್ತು. ಸುಮಾರು 55 ರಿಂದ 60 ರೇಂಜ್‌ನಲ್ಲಿ ಕಲೆಕ್ಷನ್ ಆಗಿತ್ತು. ಅದು ಅಪ್ಪು ಹುಟ್ಟುಹಬ್ಬದ ವರೆಗೂ ಮುಂದುವರೆದಿತ್ತು. ನಂತರದ ದಿನಗಳಲ್ಲಿ ಕಲೆಕ್ಷನ್ ಡ್ರಾಪ್ ಆಗಿದೆ. ಒಟ್ಟು ಒಂದು ವಾರದಲ್ಲಿ 'ಅಪ್ಪು' ಕಲೆಕ್ಷನ್ ಉತ್ತಮವಾಗಿದೆ. ಹೊಸ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಮರು ಬಿಡುಗಡೆಯಾದ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಒಂದು ವಾರದಲ್ಲಿ ಈ ಸಿನಿಮಾ 1.50 ರಿಂದ 1.60 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕ.

Puneeth Rajkumar starrer Appu film re release 7 days Karnataka box office collection report


7 ದಿನಗಳ ಕಲೆಕ್ಷನ್ ಹೇಗಿದೆ?

ಆಕ್ಷನ್, ಡ್ಯಾನ್ಸ್ ವಿಷಯದಲ್ಲಿ ಅಪ್ಪು ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಸೆಟ್‌ ಮಾಡಿದ ಸಿನಿಮಾ. ಪುನೀತ್ ರಾಜ್‌ಕುಮಾರ್ ರಿಯಲ್ ಸ್ಟಂಟ್‌ಗಳನ್ನು ನೋಡಿ ಅಂದು ಸಿನಿಪ್ರಿಯರು ಥ್ರಿಲ್ ಆಗಿದ್ದರು. ಪುರಿ ಜಗನ್ನಾಥ್ ನಿರ್ದೇಶನ, ಹಾಡುಗಳು, ಪುನೀತ್ ಆಕ್ಷನ್, ಡ್ಯಾನ್ಸ್ ಎಲ್ಲವೂ ಪ್ರೇಕ್ಷಕರನ್ನು ಸೆಳೆದಿತ್ತು. ಕಳೆದ 7 ದಿನಗಳಲ್ಲಿ 'ಅಪ್ಪು' ಸಿನಿಮಾ ಗಳಿಸಿದ ಕಲೆಕ್ಷನ್ ರಿಪೋರ್ಟ್ ಹೀಗಿದೆ.

Take a Poll

ಅಪ್ಪು 7 ದಿನಗಳ ಕಲೆಕ್ಷನ್ (ಅಂದಾಜು)

ಮೊದಲ ದಿನ ₹60 ಲಕ್ಷ (ಅಂದಾಜು)
2ನೇ ದಿನ ₹35 ಲಕ್ಷ (ಅಂದಾಜು)
3ನೇ ದಿನ ₹25 ಲಕ್ಷ (ಅಂದಾಜು)
4ನೇ ದಿನ ₹20 ಲಕ್ಷ (ಅಂದಾಜು)
5ನೇ ದಿನ ₹10 ಲಕ್ಷ (ಅಂದಾಜು)
6ನೇ ದಿನ ₹05 ಲಕ್ಷ (ಅಂದಾಜು)
7ನೇ ದಿನ ₹04 ಲಕ್ಷ (ಅಂದಾಜು)
ಒಟ್ಟು ₹1.59 ಕೋಟಿ (ಅಂದಾಜು)

ರಿ-ರಿಲೀಸ್‌ಗೆ ಮಸ್ತ್ ರೆಸ್ಪಾನ್ಸ್

ರಿಲೀಸ್ ಆದ ಹೊಸ ಸಿನಿಮಾಗಳೇ ಬಿಡುಗಡೆಗೆ ಒದ್ದಾಡುತ್ತಿರುವಾಗ ರಿ ರಿಲೀಸ್‌ ಆದ 'ಅಪ್ಪು' ಕಲೆಕ್ಷನ್ ಸಿನಿಮಾ ಮಂದಿಗೆ ಸಮಾಧಾನ ತಂದಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿಯೇ ಹೆಚ್ಚು ಕಲೆಕ್ಷನ್ ಆಗಿದೆ. ಇಲ್ಲಿನ ಐದಾರು ಚಿತ್ರಮಂದಿರಗಳು ಹೆಚ್ಚು ಕಲೆಕ್ಷನ್ ಅನ್ನು ಮಾಡಿವೆ. ಉಳಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ 'ಅಪ್ಪು' ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನುತ್ತಾರೆ ವಿತರಕರು.

ಇನ್ನೂ ಹೆಚ್ಚು ಕಲೆಕ್ಷನ್ ಆಗಿಬಹುದಿತ್ತೇ?

ಅಪ್ಪು ಸಿನಿಮಾ ಥಿಯೇಟರ್‌ನಲ್ಲಿ ರಿ ರಿಲೀಸ್ ಆಗುವುದಕ್ಕೂ ಮುನ್ನವೇ ಹಲವು ಬಾರಿ ಕಿರುತೆರೆಯಲ್ಲಿ ಪ್ರಸಾರ ಆಗಿತ್ತು. ತಿಂಗಳಿಗೆ ಒಂದೆರಡು ಬಾರಿಯಾದರೂ ಈ ಸಿನಿಮಾ ಟಿವಿಯಲ್ಲಿ ಟೆಲಿಕಾಸ್ಟ್ ಆಗುತ್ತಲೇ ಇರುತ್ತೆ. ಅಲ್ಲದೆ, ಸಿನಿಮಾದ ತುಣುಕುಗಳು ಯೂಟ್ಯೂಬ್‌ನಲ್ಲಿಯೂ ಲಭ್ಯವಿದೆ. ಹೀಗಿದ್ದರೂ, ಪುನೀತ್ ಮೇಲಿನ ಅಭಿಮಾನಕ್ಕಾಗಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಗೆಲ್ಲಿಸಿದ್ದಾರೆ.

ಸೂಚನೆ: ಅಪ್ಪು ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ನಿರ್ಮಾಣ ಸಂಸ್ಥೆ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

More from Filmibeat

English summary
Puneeth Rajkumar starrer Appu film re release 7 days Karnataka box office collection report:
Read more about: puneeth rajkumar appu box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X