Appu Box Office Day 2: 2ನೇ ಅಪ್ಪು ಸಿನಿಮಾ ಕಲೆಕ್ಷನ್ ಎಷ್ಟು? 'ಜಾಕಿ' ದಾಖಲೆ ಉಡೀಸ್ ಮಾಡುತ್ತಾ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿಯಿದೆ. ಈ ಪವರ್‌ಫುಲ್ ಆಗಿ ಬರ್ತ್‌ಡೇ ಮಾಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಂಭ್ರಮ ಶುರುವಾಗುವುದಕ್ಕೆ ಮೊದಲೇ ಪುನೀತ್ ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾ 'ಅಪ್ಪು' ಮರುಬಿಡುಗಡೆಯಾಗಿದೆ. ಮೊದಲ ದಿನ ಭರ್ಜರಿ ಓಪನಿಂಗ್ ಪಡೆದಿದ್ದ ಸಿನಿಮಾಗೆ 2ನೇ ದಿನ ಹೇಗಿದೆ ರೆಸ್ಪಾನ್ಸ್? ಅನ್ನೋದು ಕುತೂಹಲ.
'ಅಪ್ಪು' ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ಸಿನಿಮಾ. ಪುನೀತ್ ರಾಜ್‌ಕುಮಾರ್ ರಿಯಲ್ ಸ್ಟಂಟ್‌ಗಳನ್ನು ನೋಡಿ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದರು. ಅಣ್ಣಾವ್ರ ಕುಡಿಗೆ ಅಭಿಮಾನಿಗಳಾಗಿದ್ದರು. ಇಲ್ಲಿಂದ ಅಪ್ಪು ಕೂಡ ತಿರುಗಿ ನೋಡಲಿಲ್ಲ. ಫೈಟ್, ಡ್ಯಾನ್ಸ್ ಅಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಿದ್ದು ಪುನೀತ್ ರಾಜ್‌ಕುಮಾರ್. ಇಂದಿನ ಪೀಳಿಗೆಯ ಅದೆಷ್ಟೋ ಮಂದಿಗೆ 'ಅಪ್ಪು' ಸಿನಿಮಾನೇ ಪ್ರೇರಣೆ.

ಪ್ರತಿ ಹುಟ್ಟುಹಬ್ಬಕ್ಕೂ ಒಂದೊಂದು ಸಿನಿಮಾ ರಿ ರಿಲೀಸ್ ಆಗುತ್ತಿದೆ. 49ನೇ ಬರ್ತ್‌ಡೇಗೆ ಮರು ಬಿಡುಗಡೆಯಾಗಿದ್ದ 'ಜಾಕಿ' ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಅದೇ 50ನೇ ಹುಟ್ಟುಹಬ್ಬಕ್ಕೆ 'ಅಪ್ಪು' ರಿಲೀಸ್ ಆಗಿದೆ. ಎರಡನೇ ದಿನ ಈ ಸಿನಿಮಾಗೆ ಕಲೆಕ್ಷನ್ ಹೇಗಿದೆ? ಎರಡು ದಿನಗಳ ಒಟ್ಟು ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಅಪ್ಪು' ಸಂಭ್ರಮ ಹೇಗಿದೆ?
ಪುನೀತ್ ರಾಜ್‌ಕುಮಾರ್ ಹೀರೋ ಆಗಿ ಎಂಟ್ರಿ ಕೊಟ್ಟ ಚೊಚ್ಚಲ ಸಿನಿಮಾ 'ಅಪ್ಪು' ಇದೇ ಮೊದಲ ಬಾರಿಗೆ ರಿ ರಿಲೀಸ್ ಆಗಿದೆ. 23 ವರ್ಷಗಳ ಬಳಿಕ ಮರು ಬಿಡುಗಡೆಯಾದ ಸಿನಿಮಾಗೆ ರೆಸ್ಪಾನ್ಸ್ ಮಸ್ತ್ ಆಗಿ ಸಿಕ್ಕಿದೆ. ಅಪ್ಪು ಅಭಿಮಾನಿಗಳು ಫ್ಯಾಮಿಲಿ ಸಮೇತ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರುತ್ತಿದ್ದಾರೆ. 153 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿರುವ ಸಿನಿಮಾಗೆ ಬೆಂಗಳೂರಿನಲ್ಲಿ ಹೆಚ್ಚು ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಎರಡನೇ ದಿನ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್.
2 ದಿನಕ್ಕೆ 38 ಸಾವಿರ ಟಿಕೆಟ್
ಪುನೀತ್ ರಾಜ್‌ಕುಮಾರ್ ಸಿನಿಮಾ 'ಅಪ್ಪು' ಎರಡು ದಿನಗಳಲ್ಲಿ ಕೇವಲ ಬುಕ್ ಮೈ ಶೋ ವೇದಿಕೆಯಿಂದ 38 ಸಾವಿರ ಟಿಕೆಟ್‌ಗಳನ್ನು ಸೇಲ್ ಆಗಿದೆ ಎನ್ನಲಾಗಿದೆ. ಹೊಸ ಸಿನಿಮಾಗಳೇ ಥಿಯೇಟರ್‌ನಲ್ಲಿ ಸದ್ದು ಮಾಡುವುದಕ್ಕೆ ಪರದಾಡುತ್ತಿರುವ ಈ ಸಂದರ್ಭದಲ್ಲಿ ರಿ ರಿಲೀಸ್ ಆಗಿರುವ ಸಿನಿಮಾದ ಇಷ್ಟೊಂದು ಟಿಕೆಟ್‌ಗಳನ್ನು ಸೇಲ್ ಆಗಿರುವುದು ಪುನೀತ್ ಫ್ಯಾನ್ಸ್‌ಗೆ ಹೊಸ ಹುರುಷು ಸಿಕ್ಕಿದೆ.

ಎರಡು ದಿನಗಳ ಕಲೆಕ್ಷನ್ ಎಷ್ಟು?
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹೊಸ ಸಿನಿಮಾ ಹೇಗೆ ರಿಲೀಸ್ ಆಗುತ್ತಿತ್ತೋ ಹಾಗೇ ಸಂಭ್ರಮಿಸುತ್ತಿದ್ದಾರೆ. ಥಿಯೇಟರ್‌ನಲ್ಲಿ ಪುನೀತ್ ಅನ್ನು ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ. ಎಮೋಷನಲ್ ಆಗಿ ಕನೆಕ್ಟ್ ಆಗಿರುವ 'ಅಪ್ಪು' ಮೊದಲ ದಿನ 65 ರಿಂದ 70 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳಿಂದ ಲೆಕ್ಕ ಸಿಕ್ಕಿತ್ತು. ಅದೇ ಎರಡು ದಿನ ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆ ಕಂಡಿದ್ದು, ಕರ್ನಾಟಕದಾದ್ಯಂತ 40 ರಿಂದ 45 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ. ಒಟ್ಟು ಎರಡು ದಿನಗಳಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಭಾನುವಾರ ಭರ್ಜರಿ ಕಲೆಕ್ಷನ್?
ಇಂದು (ಮಾರ್ಚ್ 16) ಭಾನುವಾರ ಈ ಸಿನಿಮಾ ಕಲೆಕ್ಷನ್ ದುಪ್ಪಟ್ಟಾಗಬಹುದು ಎಂಬ ನಿರೀಕ್ಷೆಯಿದೆ. ಪುನೀತ್ ಅಭಿಮಾನಿಗಳು ಥಿಯೇಟರ್ ಮುಂದೆ ಸೆಲೆಬ್ರೆಷನ್ ಇಟ್ಟಕೊಂಡಿದ್ದಾರೆ. ಅಲ್ಲದೆ ರಜೆ ಇರುವುದರಿದ ಭಾನುವಾರ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಭಾನುವಾರ 1 ಕೋಟಿ ರೂ. ಕಲೆಕ್ಷನ್ ಆದರೆ, 'ಜಾಕಿ' ರಿ ರಿಲೀಸ್ ಅನ್ನು ಮೀರಿಸುವುದರಲ್ಲಿ ಅನುಮಾನವಿಲ್ಲ.
ಸೂಚನೆ: ಅಪ್ಪು ಸಿನಿಮಾದ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ನಿರ್ಮಾಣ ಸಂಸ್ಥೆ ಇನ್ನೂ ಅಧಿಕೃತ ಮಾಹಿತಿ ನೀಡಬೇಕಿದೆ.


Click it and Unblock the Notifications











