Appu Box Office Day 3: 3ನೇ ದಿನ 'ಅಪ್ಪು' ಸಿನಿಮಾದ ಕಲೆಕ್ಷನ್ ಎಷ್ಟು? ವೀಕೆಂಡ್‌ನಲ್ಲಿ ಹೇಗಿತ್ತು ಕ್ರೇಜ್?
ಇಂದು (ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿಅಪ್ಪು ಅಭಿಮಾನಿಗಳು ತಮ್ಮ ಶಕ್ತಿಯ ಅನುಸಾರ ಬರ್ತ್‌ಡೇಯನ್ನು ಆಚರಿಸುತ್ತಿದ್ದಾರೆ. ಥಿಯೇಟರ್‌ಗಳಲ್ಲಿ, ಹೋಟೆಲ್‌ಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.
ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟಹಬ್ಬದ ಈ ಸಂಭ್ರಮದಲ್ಲಿಯೇ 'ಅಪ್ಪು' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಪುನೀತ್ ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದ ಈ ಸಿನಿಮಾ 23 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಚೊಚ್ಚಲ ಸಿನಿಮಾದಲ್ಲಿಯೇ ಸದ್ದು ಮಾಡಿದ್ದ ಪುನೀತ್ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಇದೇ ಮೊದಲ ಬಾರಿಗೆ 'ಅಪ್ಪು' ರಿ-ರಿಲೀಸ್ ಆಗಿದ್ದು, ಅಭಿಮಾನಿಗಳ ಹರ್ಷ ದುಪ್ಪಟ್ಟಾಗಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ 'ಅಪ್ಪು' ಮರು ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಕಳೆದ ಮೂರು ದಿನಗಳಿಂದ ಜನರು ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರಿ-ರಿಲೀಸ್ ಆದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಮೂರು ದಿನಗಳಿಂದ ಪುನೀತ್ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹಾಗಿದ್ದರೆ, ಮೂರನೇ ದಿನ 'ಅಪ್ಪು' ಗಳಿಸಿದ್ದೆಷ್ಟು? ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ.
'ಅಪ್ಪು' 3ನೇ ದಿನದ ಕಲೆಕ್ಷನ್ ಎಷ್ಟು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಕೆಲವು ಸೆಂಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಅಪ್ಪು' ಸಿನಿಮಾ ಹಾಡುಗಳು, ಸ್ಟಂಟ್ಸ್, ಡೈಲಾಗ್‌ಗಳಿಗೆ ಮಾರು ಹೋಗಿದ್ದಾರೆ. ಕರ್ನಾಟಕದ ವಿತರಕರ ಪ್ರಕಾರ, ಮೂರನೇ ದಿನ ಅಂದರೆ ಭಾನುವಾರ (ಮಾರ್ಚ್ 16) 30 ರಿಂದ 40 ಲಕ್ಷ ರೂ. ಕಲೆಕ್ಷನ್ ಆಗಿದೆ. ಅಪ್ಪು ರಿಲೀಸ್ ಆಗಿದ್ದ ಅಪ್ಪಟ ಕನ್ನಡದ ಸಿನಿಮಾ ಮಂದಿಗಳಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ ₹11 ಲಕ್ಷ, ವೀರೇಶ್ ₹11 ಲಕ್ಷ, ಸಿದ್ದೇಶ್ವರ ₹6 ಲಕ್ಷ, ಮೈಸೂರಿನ ಗಾಯತ್ರಿ ಚಿತ್ರಮಂದಿರ ₹5.5 ಲಕ್ಷ, ತುಮಕೂರಿನ ಗಾಯತ್ರಿ ಚಿತ್ರಮಂದಿರ ₹1 ಲಕ್ಷ, ಬಳ್ಳಾರಿಯ ನಟರಾಜ ಕಾಂಪ್ಲೆಕ್ಸ್ ₹2 ಲಕ್ಷ, ಹಾಸನದ ಎಸ್‌ಪಿಜಿ ₹1 ಲಕ್ಷ ಕಲೆಕ್ಷನ್ ಆಗಿದೆ ಎಂದು ವಿತಕರ ವಲಯದಲ್ಲಿ ಹರಿದಾಡುತ್ತಿರುವ ಲೆಕ್ಕ.
ಒಂದು ಕೋಟಿ ಕ್ಲಬ್ ಸೇರಿತೇ?
ರಿ ರಿಲೀಸ್ ಆದ ಸಿನಿಮಾಗಳು ಒಂದು ಕೋಟಿ ಸಂಪಾದನೆ ಮಾಡುವುದೇ ದೊಡ್ಡ ವಿಷಯ. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಸಿನಿಮಾಗಳೇ ಕೋಟಿ ಕಲೆಕ್ಷನ್ ಮಾಡುವುದಕ್ಕೆ ಪರದಾಡುತ್ತುರುವಾಗ 'ಅಪ್ಪು' ಸಿನಿಮಾ ಕೇವಲ ಮೂರು ದಿನಗಳಲ್ಲಿಯೇ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅದೂ 23 ವರ್ಷಗಳ ಬಳಿಕ ರಿ ರಿಲೀಸ್ ಆದ ಸಿನಿಮಾ ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದು ಕಿಕ್ ಕೊಟ್ಟಿದೆ.

ಬರ್ತ್‌ಡೇ ದಿನ ಕಲೆಕ್ಷನ್ ಹೇಗಿದೆ?
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಇಂದು (ಮಾರ್ಚ್ 17) ಸಂಭ್ರಮವೋ ಸಂಭ್ರಮ. ರಾಜ್ಯದ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಸೆಲೆಬ್ರೆಷನ್ ಮೂಡ್‌ನಲ್ಲಿ ಇದ್ದಾರೆ. ಹೀಗಾಗಿ ಮಾರ್ನಿಂಗ್ ಶೋ ಕಲೆಕ್ಷನ್ ಡ್ರಾಪ್ ಆಗುವ ಸಾಧ್ಯತೆಯಿದೆ. ಇನ್ನು ಉಳಿದ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ನಾಲ್ಕನೇ ದಿನ ಬಾಕ್ಸಾಫೀಶ್‌ನಲ್ಲಿ ಉತ್ತಮ ಕಲೆಕ್ಷನ್ ಆದರೆ, ಒಂದೂವರೆ ಕೋಟಿ ದಾಟುವ ಸಾಧ್ಯತೆಯಿದೆ.
ಐದನೇ ದಿನದ ಭವಿಷ್ಯ ಏನು?
ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಜೋಷ್‌ನಲ್ಲಿ ಥಿಯೇಟರ್‌ಗೆ ನುಗ್ಗಿದ ಅಭಿಮಾನಿಗಳು ಐದನೇ ದಿನದಿಂದಲೂ ಅದೇ ಸಂಭ್ರಮವನ್ನು ಮುಂದುವರೆಸುತ್ತಾರಾ? ಅನ್ನೋ ಪ್ರಶ್ನೆ ಅಂತೂ ಇದೆ. 'ಜಾಕಿ' ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾ ಒಂದು ವಾರ ಉತ್ತಮ ಕಲೆಕ್ಷನ್ ಮಾಡಿದರೆ, ಎರಡು ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಸೂಚನೆ: ಅಪ್ಪು ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ನಿರ್ಮಾಪಕರು ಅಧಿಕೃತ ಮಾಹಿತಿಯನ್ನು ಇನ್ನೂ ನೀಡಿಲ್ಲ. ಹೀಗಾಗಿ ಬಾಕ್ಸಾಫೀಸ್ ಅಂಕಿ ಅಂಶಗಳಲ್ಲಿ ಹೆಚ್ಚು ಕಡಿಮೆ ಆಗಬಹುದು.


Click it and Unblock the Notifications











