Jackie Box Office:ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ಗಳಿಸಿದ್ದು ಕೋಟಿನಾ? ಲಕ್ಷನಾ?

ಪವರ್‌ಸ್ಟಾರ್ ಬರ್ತ್‌ಡೇಗೆ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿದೆ. ಅಭಿಮಾನಿಗಳ ಒತ್ತಾಸೆಯ ಮೇರೆಗೆ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದ ಈ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ಇಂದು (ಮಾರ್ಚ್ 15) ಮರು ಬಿಡುಗಡೆ ಮಾಡಿತ್ತು. ಆದರೆ, ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಈ ಸಿನಿಮಾಗೆ ಸಿಕ್ಕಿದೆ.

ಕರ್ನಾಟಕದಾದ್ಯಂತ 'ಜಾಕಿ' ಸಿನಿಮಾವನ್ನು ಸುಮಾರು 120ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕೊನೆ ಹಂತದಲ್ಲಿ ಸಿನಿಮಾಗಿರುವ ಕ್ರೇಜ್ ಅನ್ನು ಮನಗಂಡ ಕೆಆರ್‌ಜಿ ಸ್ಟುಡಿಯೋ ಸ್ಕ್ರೀನ್‌ಗಳ ಸಂಖ್ಯೆಯನ್ನು ಏರಿಕೆ ಮಾಡಿತ್ತು. ಇಂದು ಫ್ಯಾನ್ಸ್ ಶೋನಿಂದ ಶುರುವಾಗಿದ್ದ ಪ್ರದರ್ಶನಕ್ಕೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು.

Puneeth Rajkumar starrer Jackie Re Release day 1 Box office Collection

'ಜಾಕಿ' ಮರುಬಿಡುಗಡೆಯಾದ ಮೊದಲ ದಿನವೇ ಸಿನಿಮಾಗೆ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. ಇದನ್ನು ಗಮನಿಸಿದ ಟ್ರೇಡ್ ಎಕ್ಸ್‌ಪರ್ಟ್‌ಗಳು ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. 'ಜಾಕಿ' ಸಿನಿಮಾ ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಹೀಗಾಗಿ ಸಿನಿಮಾ ಮರು ಬಿಡುಗಡೆಯಾದರೂ ಬಾಕ್ಸಾಫೀಸ್ ಹಿಟ್ ಅಂತಲೇ ಲೆಕ್ಕಾಚಾರ ಹಾಕಿದ್ದಾರೆ. ಹಾಗಿದ್ದರೆ, ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ತಿಳಿಯಲು ಮುಂದೆ ಓದಿ..

'ಜಾಕಿ' ಕಲೆಕ್ಷನ್ ಎಲ್ಲೆಲ್ಲಿ ಹೇಗಿದೆ?

ಪವರ್‌ಸ್ಟಾರ್ ಸಿನಿಮಾ 'ಜಾಕಿ' 14 ವರ್ಷಗಳ ಬಳಿಕ ಮರುಬಿಡುಗಡೆಯಾದರೂ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಇದೂವರೆಗೂ ಮರುಬಿಡುಗಡೆಯಾಗಿರುವ ಸಿನಿಮಾಗಳ ಪೈಕಿ 'ಜಾಕಿ'ಗೆ ಹೆಚ್ಚು ಕ್ರೇಜ್ ಸಿಕ್ಕಿದೆ ಅನ್ನೋ ಮಾತು ಟ್ರೇಡ್ ಎಕ್ಸ್‌ಪರ್ಟ್‌ಗಳ ವಲಯದಲ್ಲಿ ಕೇಳಿ ಬರುತ್ತಿದೆ. ವಿತರಕರ ವಲಯದಲ್ಲಿ ಮಧ್ಯಾಹ್ನದವರೆಗೂ ಸಿಕ್ಕಿರುವ ಮಾಹಿತಿ ಪ್ರಕಾರ, ಬೆಂಗಳೂರು, ಹಾಸನ, ಮಂಡ್ಯ, ಬಳ್ಳಾರಿಗಳಲ್ಲಿ ಮೊದಲ ಎರಡು ಶೋಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

Puneeth Rajkumar starrer Jackie Re Release day 1 Box office Collection

ಮೊದಲ ಎರಡು ಶೋ ಕಲೆಕ್ಷನ್ ಎಷ್ಟು?

'ಜಾಕಿ' ಸಿನಿಮಾದ ಮೊದಲ ಎರಡು ಶೋಗಳ ಕಲೆಕ್ಷನ್ ಚೆನ್ನಾಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ. ಅದರಂತೆ, ಪುನೀತ್ ರಾಜ್‌ಕುಮಾರ್ ಬಗ್ಗೆ ಕ್ರೇಜ್ ಹೆಚ್ಚಿರುವ ಜಿಲ್ಲೆಗಳಲ್ಲಿ ಸಿನಿಮಾಗೆ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲೆಲ್ಲಿ ಅಂದಾಜು ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ.

  • ಹಾಸನ: 46 ಸಾವಿರ ( ಎರಡು ಶೋ) ಅಂದಾಜು
  • ಮಂಡ್ಯ: 55 ಸಾವಿರ (ಎರಡು ಶೋ) ಅಂದಾಜು
  • ಬಳ್ಳಾರಿ: 82 ಸಾವಿರ (ಎರಡು ಶೋ) ಅಂದಾಜು
  • ಹೊಸಪೇಟೆ: 84 ಸಾವಿರ (ಎರಡು ಶೋ) ಅಂದಾಜು
  • ಬೆಂಗಳೂರು: ಅಂದಾಜು ಕಲೆಕ್ಷನ್ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.

ಮೊದಲ ದಿನದ ಕರ್ನಾಟಕ ಕಲೆಕ್ಷನ್ ಎಷ್ಟು?

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕರ್ನಾಟಕದಾದ್ಯಂತ ಒಂದು ಕೋಟಿ ಗಳಿಸುವ ಸಾಧ್ಯತೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ ಶನಿವಾರ ಹಾಗೂ ಭಾನುವಾರ ಕೂಡ ಉತ್ತಮ ಕಲೆಕ್ಷನ್ ಮಾಡಬಹುದೆಂದು ಭವಿಷ್ಯ ನುಡಿದ್ದಾರೆ. ಮೊದಲ ಮೂರು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 2.5 ಕೋಟಿ ರೂಪಾಯಿಂದ 3 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

'ಜಾಕಿ' ಸಾಧನೆ ಏನು?

'ಜಾಕಿ' ಸಿನಿಮಾದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಕಂಡು ಸಿನಿಮಾ ಮಂದಿ ದಂಗಾಗಿದ್ದಾರೆ. ಮರುಬಿಡುಗಡೆಯಾದ ಸಿನಿಮಾಗಳ ಪೈಕಿ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ, ಅತೀ ಹೆಚ್ಚು ಓಪನಿಂಗ್ ಪಡೆದ ಸಿನಿಮಾ, ಅಲ್ಲದೆ ಅತೀ ಹೆಚ್ಚು ಕ್ರೇಜ್ ಇದ್ದ ಸಿನಿಮಾ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. ಒಟ್ನಲ್ಲಿ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಜಾಕಿ' ಮರುಬಿಡುಗಡೆಯಾದ ಬಳಿಕವೂ ಹಿಟ್ ಲಿಸ್ಟ್ ಸೇರಿದೆ.

More from Filmibeat

English summary
Puneeth Rajkumar movie Jackie day 1 Box office Collection repoert
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X