'ಜೇಮ್ಸ್' ಟ್ರೈಲರ್, ಟೀಸರ್ ಬಗ್ಗೆ ನಿರ್ದೇಶಕ ಚೇತನ್ ಪ್ರತಿಕ್ರಿಯೆ: ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್

ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್'. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಅಪ್ಪು ಅಭಿಮಾನಿಗಳು ಕಾತರರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದಿಂದ ಶತಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ಸಿನಿಮಾರಂಗದಿಂದಲೇ 'ಜೇಮ್ಸ್' ಸಿನಿಮಾ ನೇರವಾಗಿ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತೆ. ಟೈಲರ್ ಹಾಗೂ ಟೀಸರ್ ರಿಲೀಸ್ ಮಾಡುವುದಿಲ್ಲ ಎಂಬ ಸುದ್ದಿ ಹರಿದಾಡಿತ್ತು.

ಚಿತ್ರರಂಗದ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಆಧರಿಸಿ, 'ಜೇಮ್ಸ್' ಸಿನಿಮಾ ಟ್ರೈಲರ್, ಟೀಸರ್ ಬಿಡುಗಡೆಯಾಗುವುದಿಲ್ಲ. ಬದಲಾಗಿ, ನೇರವಾಗಿ ಸಿನಿಮಾವನ್ನೇ ತೋರಿಸಲು ಚಿತ್ರತಂಡ ಮುಂದಾಗಿದ್ದಾರೆ ಎಂಬ ಸುದ್ದಿಯನ್ನು ಫಿಲ್ಮಿ ಬೀಟ್ ಬಿತ್ತರಿಸಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್' ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಬಗ್ಗೆ ಫಿಲ್ಮಿ ಬೀಟ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

 ಟ್ರೈಲರ್, ಟೀಸರ್ ರಿಲೀಸ್ ಮಾಡುತ್ತೇವೆ

ಟ್ರೈಲರ್, ಟೀಸರ್ ರಿಲೀಸ್ ಮಾಡುತ್ತೇವೆ

ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಅಭಿಮಾನಿಗಳ ಕನಸು. ಈ ಸಿನಿಮಾ ಕಣ್ತುಂಬಿಕೊಳ್ಳುವುದಕ್ಕೆ ಕಾತರರಾಗಿದ್ದಾರೆ. ಆದರೆ ಸಿನಿಮಾ ನೋಡುವುದಕ್ಕೂ ಮುನ್ನ 'ಜೇಮ್ಸ್' ಚಿತ್ರದ ಟ್ರೈಲರ್ ಹಾಗೂ ಟೀಸರ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಟ್ರೈಲರ್ ಹಾಗೂ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಚೇತನ್ ಪ್ರತಿಕ್ರಿಯಿಸಿದ್ದಾರೆ. 'ಜೇಮ್ಸ್' ಜೊತೆ ಅಪ್ಪು ಅಭಿಮಾನಿಗಳು ಜೊತೆ ಭಾವನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಈ ಹೀಗಾಗಿ ಟ್ರೈಲರ್ ಹಾಗೂ ಟೀಸರ್ ಎರಡೂ ರಿಲೀಸ್ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

 ಜೇಮ್ಸ್ ಟ್ರೈಲರ್, ಟೀಸರ್ ರಿಲೀಸ್ ಆಗುತ್ತೆ

ಜೇಮ್ಸ್ ಟ್ರೈಲರ್, ಟೀಸರ್ ರಿಲೀಸ್ ಆಗುತ್ತೆ

"ಅಪ್ಪು ಸರ್ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದೇ ಸಿನಿಮಾ ತೋರಿಸಬೇಕು ಅನ್ನುವ ಮಹಾದಾಸೆ ಇದೆ. ಅದಕ್ಕಾಗಿಯೇ ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ. ಇಡೀ ಸಿನಿಮಾ ತಂಡದ ಮೇಲೆ ಒತ್ತಡ ಹೆಚ್ಚಿದೆ. ಪುನೀತ್ ಸರ್ ಅಭಿಮಾನಿಗಳಿಗೆ ಫೆಬ್ರವರಿಯಲ್ಲಿ ಟ್ರೈಲರ್ ಹಾಗೂ ಟೀಸರ್ ಬಿಡುಗಡೆ ಮಾಡುತ್ತೇವೆ. ಆದರೆ, ಯಾವ ದಿನಾಂಕ ಅನ್ನುವುದು ಮಾತ್ರ ಇನ್ನೂ ನಿಗದಿಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸಲಾಗುತ್ತದೆ." ಎಂದು ಚೇತನ್ ಫಿಲ್ಮಿ ಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

 ಎಂದೂ ನೋಡಿರದ ಪೋಸ್ಟರ್ ರಿಲೀಸ್

ಎಂದೂ ನೋಡಿರದ ಪೋಸ್ಟರ್ ರಿಲೀಸ್

" ಜನವರಿ 26ಕ್ಕೆ ರಿಪಬ್ಲಿಕ್ ಡೇಯಂದು ಅಪ್ಪು ಅಭಿಮಾನಿಗಳಿಗೆ ಅಂತಲೇ 'ಜೇಮ್ಸ್' ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ. ಹಿಂದೆಂದೂ ಅಪ್ಪು ಸರ್ ಅನ್ನು ಈ ರೀತಿ ನೋಡಿರಲು ಸಾಧ್ಯವೇ ಇಲ್ಲ. ಇದು ವಿಶೇಷವಾದ ಪೋಸ್ಟರ್. ಇದನ್ನು ವಿಶೇಷವಾದ ದಿನವೇ ಬಿಡುಗಡೆ ಮಾಡುತ್ತಿದ್ದೇವೆ. ಈ ಪೋಸ್ಟರ್ ಅನ್ನು ಅಪ್ಪು ಅಭಿಮಾನಿಗಳಿಗೆ ಖಂಡಿತಾ ಇಷ್ಟ ಆಗುತ್ತೆ." ಅಂತ ಫಿಲ್ಮಿ ಬೀಟ್‌ಗೆ ನಿರ್ದೇಶಕ ಚೇತನ್ ತಿಳಿಸಿದ್ದಾರೆ.

 ಅಪ್ಪು ಅಭಿಮಾನಿಗಳಿಗಾಗಿ ಮೆಗಾ ಇವೆಂಟ್

ಅಪ್ಪು ಅಭಿಮಾನಿಗಳಿಗಾಗಿ ಮೆಗಾ ಇವೆಂಟ್

ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ 'ಜೇಮ್ಸ್' ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಬೇಕು ಅಂತ ತೀರ್ಮಾನಿಸಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗಾಗಿಯೇ ಈ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚಿತ್ರತಂಡ ತೀರ್ಮಾನಿಸಿದೆ. ಇದು ಪ್ರೀ- ರಿಲೀಸ್ ಇವೆಂಟ್ ಆಗಿದ್ದು, ಅಪ್ಪು ಅಭಿಮಾನಿಗಳಿಗಾಗಿಯೇ ರೂಪಿಸಲಾಗುತ್ತಿದೆ.

 ಫಿಲ್ಮಿ ಬೀಟ್‌ಗೆ ಚೇತನ್ ಸ್ಪಷ್ಟನೆ

ಫಿಲ್ಮಿ ಬೀಟ್‌ಗೆ ಚೇತನ್ ಸ್ಪಷ್ಟನೆ

'ಜೇಮ್ಸ್'ತಂಡ ಟ್ರೈಲರ್ ಹಾಗೂ ಟೀಸರ್ ರಿಲೀಸ್ ಮಾಡುತ್ತಿಲ್ಲ. ನೇರವಾಗಿ ಥಿಯೇಟರ್‌ನಲ್ಲಿಯೇ ಸಿನಿಮಾ ತೋರಿಸಲು ಮುಂದಾಗಿದೆ ಎಂಬ ಸುದ್ದಿ ಲಭ್ಯವಾಗಿತ್ತು. ಆ ಬಳಿಕ ಫಿಲ್ಮಿ ಬೀಟ್‌ನಲ್ಲಿ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ನಿರ್ದೇಶಕ ಚೇತನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಅಭಿಮಾನಿಗಳಿಗಾಗಿ ಟ್ರೈಲರ್ ಹಾಗೂ ಟೀಸರ್ ಬಿಡುಗಡೆ ಮಾಡುತ್ತೆ ಎಂದು ಫಿಲ್ಮಿ ಬೀಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
Puneeth Rajkumar Starrer James movie director Chethan Kumar Clarification about Trailer and teaser. The teaser and trailer will be releasing on Febraury special poste will be in January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X