ಪುನೀತ್ ಧ್ವನಿ ಅಳವಡಿಸಿ 'ಜೇಮ್ಸ್' ಸಿನಿಮಾ ಮರುಬಿಡುಗಡೆ: ಮತ್ತೆ ಸಂಭ್ರಮಿಸಿದ ಅಪ್ಪು ಫ್ಯಾನ್ಸ್?

ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್'. ಈ ಸಿನಿಮಾ ರಿಲೀಸ್‌ಗಾಗಿ ಕಾದು ಕೂತಿದ್ದ ಅಪ್ಪು ಅಭಿಮಾನಿಗಳಿಗೆ ಒಂದು ಕೊರತೆ ಎದುರಾಗಿತ್ತು. ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಅವರ ಧ್ವನಿ ಇಲ್ವಲ್ಲ ಅನ್ನುವ ಕೊರಗು ಇತ್ತು. ಅಭಿಮಾನಿಗಳ ಆ ಕೊರತೆಯನ್ನು ಚಿತ್ರತಂಡ ಇಂದು ( ಏಪ್ರಿಲ್ 22) ನೀಗಿಸಿದೆ.

ಪವರ್‌ಸ್ಟಾರ್ ಹುಟ್ಟುಹಬ್ಬದಂದೇ ಅವರು ಅಭಿನಯಿಸಿದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆಯಾಗಿತ್ತು. ಅಭಿಮಾನಿಗಳು ಒಂದು ವಾರಪೂರ್ತಿ ಹಬ್ಬದಂತೆ ಸಂಭ್ರಮಿಸಿದ್ದರು. ಕರ್ನಾಟಕದ ಉದ್ದಗಲಕ್ಕೂ 'ಜೇಮ್ಸ್' ಜಾತ್ರೆಯನ್ನೇ ಮಾಡಿದ್ದರು. ಯಾಕಂದ್ರೆ, ಇದು ಅಪ್ಪು ಅಭಿಮಾನಿಗಳಿಗೆ ಭಾವನಾತ್ಮಕ ಸಿನಿಮಾವಾಗಿತ್ತು.

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನಟನೆ ಕೊನೆಯ ಸಿನಿಮಾವನ್ನುಅಪ್ಪು ಧ್ವನಿಯಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಹರಸಾಹಸ ನಡೆಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಸಮಯ ಕಡಿಮೆ ಇದ್ದಿದ್ದರಿಂದ 'ಜೇಮ್ಸ್' ಸಿನಿಮಾವನ್ನು ತರಾತುರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಅಪ್ಪು ಧ್ವನಿಯಲ್ಲಿಯೇ 'ಜೇಮ್ಸ್'ವನ್ನು ಅಭಿಮಾನಿಗಳಿಗೆ ತೋರಿಸಲು ಚಿತ್ರ ಮುಂದಾಗಿದೆ.

'ಜೇಮ್ಸ್' ಸಿನಿಮಾ ಮರುಬಿಡುಗಡೆ

'ಜೇಮ್ಸ್' ಸಿನಿಮಾ ಮರುಬಿಡುಗಡೆ

ಆಂಧ್ರ ಮೂಲದ ತಂತ್ರಜ್ಞರು 'ಜೇಮ್ಸ್'ದಲ್ಲಿ ಅಪ್ಪು ಪಾತ್ರಕ್ಕೆ ಧ್ವನಿ ಅಳವಡಿಸುವ ಕೆಲಸಕ್ಕೆ ಮುಂದಾಗಿದ್ದರು. ಇದೇ ತಂಡ ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರಕ್ಕೂ ಕೆಲಸ ಮಾಡುತ್ತಿದ್ದರು. ಅದೇ ತಂಡ ಹಲವು ದಿನಗಳಿಂದ ಅಪ್ಪು ಧ್ವನಿಯನ್ನು ಈ ಸಿನಿಮಾ ಅಳವಡಿಸುವ ಪ್ರಯತ್ನ ಮಾಡುತ್ತಿದ್ದರು. ಆ ಕೆಲಸ ಕೆಲವು ದಿನಗಳ ಹಿಂದಷ್ಟೆ ಪೂರ್ಣಗೊಂಡಿದ್ದು, ಇಂದು (ಏಪ್ರಿಲ್ 22) 'ಜೇಮ್ಸ್' ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ.

ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮ

ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮ

'ಜೇಮ್ಸ್' ಸಿನಿಮಾಗೆ ಅಪ್ಪು ವಾಯ್ಸ್ ಅಳವಡಿಸಿದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಇಂದು (ಏಪ್ರಿಲ್ 22) ಹೊಸ 'ಜೇಮ್ಸ್' ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಹೀಗಾಗಿ ಬೆಳಗ್ಗೆಯಿಂದ 'ಜೇಮ್ಸ್' ಸಿನಿಮಾ ರಿ-ರಿಲೀಸ್ ಆದ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ನೆಚ್ಚಿನ ನಟನ ಧ್ವನಿಯಲ್ಲಿಯೇ ಸಿನಿಮಾ ನೋಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

'ಜೇಮ್ಸ್' 65 ಥಿಯೇಟರ್‌ನಲ್ಲಿ ರಿಲೀಸ್

'ಜೇಮ್ಸ್' 65 ಥಿಯೇಟರ್‌ನಲ್ಲಿ ರಿಲೀಸ್

'ಜೇಮ್ಸ್' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿತ್ತು. ಪುನೀತ್ ರಾಜ್‌ಕುಮಾರ್ ಪೋಷನ್ ಶೇ.90ರಷ್ಟು ಕಂಪ್ಲೀಟ್ ಆಗಿತ್ತು. ಆದರೆ, ಡಬ್ಬಿಂಗ್ ಮಾಡಿರಲಿಲ್ಲ. ಹೀಗಾಗಿ ಅವರ ಧ್ವನಿಯನ್ನು ಉಳಿಸಿಕೊಳ್ಳಲು ಹಲವು ತಿಂಗಳುಗಳೇ ಹಿಡಿದಿತ್ತು. ಆದರೆ, ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್ ಆಗಬೇಕು ಎನ್ನುವ ಒತ್ತಡವಿದ್ದಿದ್ದರಿಂದ ಸುಮಾರು 65 ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ.

ಅಪ್ಪುಗೆ ಶಿವಣ್ಣ ಧ್ವನಿ

ಅಪ್ಪುಗೆ ಶಿವಣ್ಣ ಧ್ವನಿ

ಚೇತನ್ ಕುಮಾರ್ ನಿರ್ದೇಶಿಸಿದ್ದ 'ಜೇಮ್ಸ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಮಾಡುವಂತೆ ಶಿವಣ್ಣ ಬಳಿ ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ ಶಿವಣ್ಣ ಡಬ್ ಮಾಡಿಕೊಟ್ಟಿದ್ದರು. ಇವರು ಡಬ್ ಮಾಡಿದ ಬಳಿಕವೇ 'ಜೇಮ್ಸ್' ಸಿನಿಮಾ ರಿಲೀಸ್ ಆಗಿತ್ತು. ಈಗ ಒರಿಜಿನಲ್ ಧ್ವನಿಯಲ್ಲಿ 'ಜೇಮ್ಸ್' ರಾಜ್ಯಾದ್ಯಂತ 65ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

More from Filmibeat

English summary
Puneeth Rajkumar Starrer James Released with Puneeth Voice From April 22nd, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X