James Teaser Records : ರೆಕಾರ್ಡ್ ಬರೆದೇ ಬಿಡ್ತು 'ಜೇಮ್ಸ್' ಟೀಸರ್!
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ 'ಜೇಮ್ಸ್' ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ಈ ಚಿತ್ರದ ಮೂಲಕ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಮಾರ್ಚ್ 17, ಪುನೀತ್ ಹುಟ್ಟುಹಬ್ಬದಂದೇ 'ಜೇಮ್ಸ್' ಬಿಡುಗಡೆಯಾಗಲಿ ಎಂದು ಚಿತ್ರತಂಡ ಪ್ರಕಟ ಮಾಡಿದೆ. ಸದ್ಯ ಜೇಮ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಪ್ಪು ಅವರನ್ನು ಈ ಟೀಸರ್‌ನಲ್ಲಿ ನೋಡಿ ಅಭಿಮಾನಿ ಬಳಗ, ಸಿನಿಮಾರಂಗ ಭಾವುಕತೆಯನ್ನು ವ್ಯಕ್ತ ಪಡಿಸುತ್ತಿದೆ.
ಬಹು ನಿರೀಕ್ಷೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಕಾಯುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಬೇರೆಯದ್ದೇ ಲೆವೆಲ್ ಸಿನಿಮಾವಿದು ಅಂತ ಟೀಸರ್ ನೋಡಿದ ಮೇಲೆ ಅನಿಸಿದೆ. ಪುನೀತ್ ರಾಜ್‌ಕುಮಾರ್ ಖಡಕ್ ಎಂಟ್ರಿ. ಪವರ್‌ಫುಲ್ ಅ್ಯಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿ ಹೇಗೆ ಇರಲಿದೆ ಎನ್ನುವ ಬಗ್ಗೆ ಈ ಟೀಸರ್ ಹೇಳಿದೆ.
James teaser : ಅಪ್ಪುಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ: ಹೆಂಗೈತೆ ಜೇಮ್ಸ್ ಟೀಸರ್
ಟೀಸರ್‌ನಲ್ಲಿ ಒಂದು ಡೈಲಾಗ್ ಇದೆ. ನನಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎನ್ನುವ ಡೈಲಾಗ್. ಅಪ್ಪು ಅವರಿಗೆ ಶಿವಣ್ಣ ಧ್ವನಿ ನೀಡಿದ್ದಾರೆ. ಈ ಡೈಲಾಗ್ ಪುನೀತ್ ರಾಜ್‌ಕುಮಾರ್ ಅವರ ವಿಚಾರದಲ್ಲಿ ನಿಜ ಆಗಿ ಬಿಟ್ಟಿದೆ. ಟೀಸರ್ ರಿಲೀಸ್ ಆದ 60 ನಿಮಿಷದಲ್ಲಿ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಜೊತೆಗೆ 60 ನಿಮಿಷದೊಳಗೆ 1ಮಿಲಿಯನ್ ವೀವ್ಸ್ ಮತ್ತು 180 ಸಾವಿರ ಲೈಕ್ಸ್ ಪಡೆದುಕೊಂಡಿದೆ.

ಟೀಸರ್ ರಿಲೀಸ್ ಆಗುತ್ತಿದ್ದ ಹಾಗೆ ಕನ್ನಡದ ಬಹುತೇಕ ಎಲ್ಲಾ ಕಲಾವಿದರು ಈ ಟೀಸರ್ ಹಂಚಿಕೊಂಡಿದ್ದಾರೆ. ಜೊತೆಗೆ ಅಪ್ಪು ಅವರನ್ನು ನೆನೆದು ತಮಗನ್ನಿಸಿದನ್ನು ಬರೆದು ಪೊಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ ನಿರ್ದೇಶಕ ಚೇತನ್ ಕುಮಾರ್, ಸಂತೋಷ್ ಆನಂದ್ ರಾಮ್, ಶಿವರಾಜ್ ಕುಮಾರ್, ಯುವ ರಾಜ್‌ಕುಮಾರ್, ಪವನ್ ಒಡೆಯರ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಇದ್ದಾರೆ.
'ಜೇಮ್ಸ್' ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ 'ಜೇಮ್ಸ್' ಚಿತ್ರದ ಟೀಸರ್ ಅನ್ನು ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೂರು ಭಾಷೆಯಲ್ಲೂ ರಿಲೀಸ್ ಆಗಿರುವ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.


Click it and Unblock the Notifications











