»   » ವಿದೇಶಗಳಲ್ಲಿ ಪ್ರದರ್ಶನಕ್ಕಾಗಿ ಹಾರಿದ 'ರಾಜಕುಮಾರ'

ವಿದೇಶಗಳಲ್ಲಿ ಪ್ರದರ್ಶನಕ್ಕಾಗಿ ಹಾರಿದ 'ರಾಜಕುಮಾರ'

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಅನ್ನೋ ಕ್ರೇಜ್ ನಿಂದಾಗಿ, ಈಗಾಗಲೇ ಹಲವು ಥಿಯೇಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಕರ್ನಾಟಕದಲ್ಲಿ ಅಂತು ಸ್ವಲ್ಪ ಲೇಟಾದ್ರು ಫಸ್ಟ್ ಡೇ ಟಿಕೆಟ್ ಸಿಗೋದು ಕಷ್ಟಾನೆ.['ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!]

ಅಂದಹಾಗೆ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸ್ಟೈಲ್, ಸಿನಿಮಾದಲ್ಲಿ ಅವರು ಮಾಡಿರುವ ಡ್ಯಾನ್ಸ್ ಸಖತ್ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ವಿದೇಶಗಳಲ್ಲೂ ಕ್ರೇಜ್ ಹೆಚ್ಚಿದೆ. ಮಾರ್ಚ್ 24 ರಂದು ಸ್ಯಾಂಡಲ್ ವುಡ್ ನಲ್ಲಿ ತೆರೆಕಾಣಲಿರುವ 'ರಾಜಕುಮಾರ', ನಂತರದಲ್ಲಿ ಹಲವು ದೇಶಗಳಲ್ಲಿಯೂ ಬಿಡುಗಡೆ ಆಗಲು ಸಜ್ಜಾಗಿದೆ.


Puneeth Rajkumar Starrer 'Rajakumara' to release in Other Countries

'ರಾಜಕುಮಾರ' ಚಿತ್ರ ಅಮೆರಿಕ ಮತ್ತು ಸಿಂಗಾಪುರ್ ನಲ್ಲಿ ಮಾರ್ಚ್ 29 ರಂದು, ಕೆನಡಾ ದಲ್ಲಿ ಏಪ್ರಿಲ್ 1 ಕ್ಕೆ, ಬ್ರಿಟನ್ ಮತ್ತು ಯೂರೋಪ್ ನಲ್ಲಿ ಏಪ್ರಿಲ್ 7 ರಂದು ತೆರೆಕಾಣಲಿದೆ.[ಸ್ವಲ್ಪ ಲೇಟಾದ್ರು 'ರಾಜಕುಮಾರ' ಟಿಕೆಟ್ ನಿಮಗೆ ಸಿಗಲ್ಲ! ಈಗಲೇ ಬುಕ್ ಮಾಡಿ]


ಸ್ಯಾಂಡಲ್ ವುಡ್ ನ ಹಲವು ದಾಖಲೆಗಳನ್ನು ಧೂಳಿಪಟ ಮಾಡಿರುವ 'ರಾಜಕುಮಾರ ' ಚಿತ್ರಕ್ಕೆ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ನಿರ್ದೆಶಕರಾದ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಇದೆ. ಬಹುದೊಡ್ಡ ತಾರಾಬಳಗ ಇರುವ ಚಿತ್ರವನ್ನು ಈ ವಾರದಿಂದ ಥಿಯೇಟರ್ ನಲ್ಲಿ ಎಲ್ಲರೂ ಕಣ್ತುಂಬಿಕೊಳ್ಳಬಹುದು.

English summary
Santhosh AnandRam Directorial, Puneeth Rajkumar starrer 'Rajakumara' has set to release in USA, Canada, Sigapore, UK.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada