'ಹರೀಶ ವಯಸ್ಸು 36' ಕೊನೆ ಹಾಡು ಹಾಡಿದ್ದಾರೆ ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನೂ ಅಗಲಿ ಎರಡು ತಿಂಗಳ ಮೇಲಾಗಿದೆ. ಆದರೂ, ಪವರ್‌ಸ್ಟಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆರಾಧನೆ ಮಾಡುತ್ತಲೇ ಇದ್ದಾರೆ. ಪುನೀತ್ ರಾಜ್‌ಕುಮಾರ್ ಮಾಡಿದ ಒಳ್ಳೆ ಕೆಲಸಗಳ ಗುಣಗಾನ ಮಾಡುತ್ತಿದ್ದಾರೆ. ಈ ಮಧ್ಯೆ ಅಪ್ಪು ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿದ್ದರು. ಇಂತಹದ್ದೇ ಒಂದು ಸಿನಿಮಾಗಾಗಿ ಪುನೀತ್ ಹಾಡಿದ್ದ ಒಂದು ಹಾಡನ್ನು ಹೊಸಬರ ತಂಡ ಅನಾವರಣಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ 'ಹರೀಶ ವಯಸ್ಸು 36'. ಈ ಸಿನಿಮಾಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಟೈಟಲ್ ಸಾಂಗ್ ಒಂದನ್ನು ಹಾಡಿದ್ದರು. ಅದೇ ಹಾಡಿನ ಬಗ್ಗೆ ಹೊಸಬರ ತಂಡ ಮಾಹಿತಿಯನ್ನು ಹಂಚಿಕೊಂಡಿದೆ. ಸದ್ಯ ಈ ಸಿನಿಮಾ ಬಿಡುಗಡೆ ಸಜ್ಜಾಗಿದ್ದು, ಅಪ್ಪು ಹಾಡಿನ ಬಗ್ಗೆ, ಸಿನಿಮಾ ಕಥೆ, ಚಿತ್ರಕತೆಯ ಬಗ್ಗೆ ಇಡೀ ಚಿತ್ರತಂಡ ಮಾಹಿತಿಯನ್ನು ಹಂಚಿಕೊಂಡಿದೆ.
'ಹರೀಶ ವಯಸ್ಸು 36' ಚಿತ್ರಕ್ಕೆ ಪುನೀತ್ ಟೈಟಲ್ ಸಾಂಗ್
ಸ್ಯಾಂಡಲ್‌ವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗುರುರಾಜ್ ಜ್ಯೇಷ್ಠ 'ಹರೀಶ ವಯಸ್ಸು 36' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹಾಸ್ಯ ಪ್ರದಾನ ಕಥೆ ಹೊಂದಿರುವ ಈ ಚಿತ್ರದ ಹೈಲೈಟ್ ಅಂದರೆ, ಈ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಟೈಟಲ್‌ಸಾಂಗ್‌ನ್ನು ಹಾಡಿದ್ದಾರೆ. ಅಪ್ಪು ಹಾಡಿದ ಈ ಶೀರ್ಷಿಕೆ ಹಾಡನ್ನು ಚಿತ್ರತಂಡ ಪತ್ರಿಕಾಗೋಷ್ಟಿ ನಡೆಸಿ ಪ್ರದರ್ಶನ ಮಾಡಿದೆ. ವಿಶೇಷ ಅಂದರೆ, ಇದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಡಿದ ಕೊನೆಯ ಹಾಡು.

ಹಗಲು ಗನಸು ಕಾಣುವ ನಾಯಕನ ಸುತ್ತ ಸಾಗುವ ಹಾಸ್ಯ ಪ್ರಸಂಗಗಳೇ ಈ ಚಿತ್ರದ ಕಥೆ. ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಹಾಗೂ ಯೋಗೀಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅರೆಹೊಳೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಇದಾಗಿದೆ.
ನೈಜ ಘಟನೆಗಳೇ ಸಿನಿಮಾದ ಕಥಾವಸ್ತು
ನಿರ್ದೇಶಕ ಗುರುರಾಜ್ ಜೇಷ್ಠ ಅವರ ಸಂಬಂಧಿಯಿದ ಈ ಚಿತ್ರದ ಕಥೆ ಹುಟ್ಟಿತ್ತು. ಆತನಿಗೀಗ 37 ವರ್ಷ, ವೃತ್ತಿಪರ ನಾಟಕಗಳನ್ನು ಮಾಡುತ್ತಿದ್ದರು. ಆತ ಮದುವೆ ಮಾಡಿಕೊಳ್ಳಬೇಕೆಂದು ಹೊರಟಾಗ ಹುಡುಗಿಯ ಹುಡುಕಾಟದಲ್ಲಿ ನಡೆದ ಪ್ರಸಂಗಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಒಂದು ಬೀದಿ ಹಾಗೂ ಮನೆಯಲ್ಲಿ ಇಡೀ ಸಿನಿಮಾದ ಕಥೆ ನಡೆಯುತ್ತದೆ.

ಉಮೇಶ್ ಬಿಟ್ಟರೆ ಇಳಿದ ಎಲ್ಲರೂ ಹೊಸಬರು. ಈ ಸಿನಿಮಾದ ನಾಯಕ ಹರೀಶ ಲ್ಯಾಂಡ್ ಬ್ರೋಕರ್, ಅದರ ಜೊತೆ ಹುಡುಗಿ ನೋಡುವ ಕೆಲಸ. ಯಾವ ಹುಡುಗಿಯೂ ಈತನನ್ನು ಇಷ್ಟಪಡುವುದಿಲ್ಲ. ಕೊನೆಗೂ ಸಿನಿಮಾದಲ್ಲಿ ನಾಯಕ ಹರೀಶನನ್ನು ಪ್ರೀತಿಸುವ ಹುಡುಗಿ ಸಿಕ್ತಾಳಾ? ಮದುವೆ ಆಗುತ್ತಾ ಅನ್ನುವುದೇ ಸಿನಿಮಾದ ಕಥೆ.

ದಕ್ಷಿಣ ಕನ್ನಡದ ಕರಾವಳಿ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು 'ಹರೀಶ ವಯಸ್ಸು 36' ಹಾಸ್ಯಮಯವಾಗಿ ಹೇಳಲಾಗಿದೆ. ಧರ್ಮಸ್ಥಳದ ಬಳಿ 105 ವರ್ಷದಷ್ಟು ಹಳೆಯದಾದ ಗುತ್ತೆಮನೆಯಲ್ಲಿ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದೆ. ಚಿತ್ರದ ನಾಯಕ ಯೋಗೀಶ್ ಶೆಟ್ಟಿ ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಬಾಡಿಗೆ ಮನೆ ತೋರಿಸುವ ಬ್ರೋಕರ್ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications










