Raghavendra Rajkumar: "ನನ್ನಿಂದ ಮನೆಗೆ ಆದಾಯ ಇರಲಿಲ್ಲ.. ಮನೆ ಕಟ್ಟಿಸಿ, ನಮ್ಮ ಕೈಗೆ ಕೊಟ್ಟು ಹೋದ"-ರಾಘಣ್ಣ

ಅಣ್ಣಾವ್ರ ಮಕ್ಕಳೇ ಹಾಗೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಪ್ರೀತಿ. ಅದರಲ್ಲೂ ರಾಘವೇಂದ್ರ ರಾಜ್‌ಕುಮಾರ್, ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ನಡುವಿನ ಬಾಂಧವ್ಯವೇ ಬೇರೆ. ಒಬ್ಬರನ್ನು ಬಿಟ್ಟರೆ ಮತ್ತೊಬ್ಬರು ಇರುತ್ತಿರಲಿಲ್ಲ.

ರಾಘವೇಂದ್ರ ರಾಜ್‌ಕುಮಾರ್ ಈಗ ಸಿನಿಮಾಗಳಲ್ಲಿ ಆಕ್ವೀವ್ ಆಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ '13' ಅನ್ನೋ ಸಿನಿಮಾವೊಂದು ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಸಾಕಷ್ಟು ಸಂದರ್ಶನಗಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಭಾಗಿಯಾಗುತ್ತಿದ್ದಾರೆ.

raghavendra-rajkumar-puneeth-house

ಈ ವೇಳೆ ರಾಘಣ್ಣ ತಮ್ಮ ಪುನೀತ್ ರಾಜ್‌ಕುಮಾರ್ ಮನೆ ಕಟ್ಟಿಸಿಕೊಟ್ಟ ವಿಷಯವನ್ನು ಮತ್ತೊಂದು ಹೇಳಿಕೊಂಡಿದ್ದಾರೆ. ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಘಣ್ಣ ತನ್ನ ದುಡಿಮೆ ಹಾಗೂ ಅಪ್ಪು ಕಟ್ಟಿಸಿಕೊಟ್ಟ ಮನೆ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರ ಪ್ರಮುಖ ಸಾರಾಂಶ ಇಲ್ಲಿದೆ.

ಅಪ್ಪು ನನಗೆ ಮಗನಂತೆ

ಅಣ್ಣಾವ್ರ ಕುಟುಂಬದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಕಂಡರೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಇನ್ನು ರಾಘಣ್ಣ ಮಗನೇ ಅಂತಲೇ ಕರೆಯುತ್ತಾರೆ. "ನನ್ನ ಮಕ್ಕಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೋ, ಅಷ್ಟೇ ಅವನನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲರೂ ಅವನನ್ನು ತಮ್ಮ ಅಂತ ಕರೀತಾರೆ. ನಾನು ಮಾತ್ರ ಅವನನ್ನು ಮಗನೇ ಅಂತಾನೇ ಕರೆಯೋದು. ನನಗೂ ಅವನಿಗೂ 10 ವರ್ಷ ಅಂತರವಿದೆ. ಚಿಕ್ಕ ಮಗುವಾದಗಿನಿಂದ ಅವನನ್ನು ಶೂಟಿಂಗ್ ಕರೆದುಕೊಂಡು ಹೋಗುವುದು. ಸ್ನಾನ ಮಾಡಿಸುವುದು ಎಲ್ಲದಕ್ಕೂ ಅವಕಾಶ ಸಿಕ್ಕಿತು. ಕೊನೆಯ ಸಿನಿಮಾಗೂ ಸೇವೆ ಮಾಡಿದೆ. ಒಂಥರಾ ಅಪ್ಪ ಮಗನ ನಂಟೇ ಅಲ್ಲವೇ.." ಎಂದು ರಾಘಣ್ಣ ತಮ್ಮನ್ನನು ನೆನೆದಿದ್ದಾರೆ.

raghavendra-rajkumar-puneeth-house

"ಈ ಕಡೆ ಅಪ್ಪು.. ಆ ಕಡೆ ನಾನು"

"ಬಂದ ತಮ್ಮನಾಗಿ ಬಂದ. ಹೋಗುತ್ತಾ ಅಪ್ಪನಾಗಿ ಹೋದ. ಅಂದರೆ ಒಳ್ಳೆಯ ಸಂದೇಶಗಳನ್ನು ಕೊಟ್ಟು ಹೋದ ಅಂತ. ಚಿಕ್ಕವನಾದರೂ ಒಳ್ಳೆಯ ಸಂದೇಶವನ್ನು ಕೊಟ್ಟು ಹೋದ. ಅಪ್ಪಾಜಿ ಇದ್ದಾಗ ಇದ್ದ ಮನೆನೇ ಬೇರೆ. ಇವೆರಡೂ ಒಂದು ಮನೆಯಾಗಿತ್ತು. ಅವರು ಹೋದ ನಂತರ ನಮ್ಮ ತಾಯಿನೇ ರಾಘಣ್ಣನಿಗೊಂದು ಅಪ್ಪುಗೊಂದು ಮನೆ ಮಾಡಿಕೊಂಡು ಬಿಡು ಅಂತ ಹೇಳಿದ್ದರು. ದೊಡ್ಡ ಸೈಟ್ ಇದು. ಆ ಕಡೆ ಅಪ್ಪು ಇದ್ದಾರೆ. ಈ ಕಡೆ ನಾನು ಇದ್ದೇನೆ." ಎಂದು ರಾಘಣ್ಣ ಹೇಳಿದ್ದಾರೆ.

ರಾಘಣ್ಣನ ಮನೆ ಕಟ್ಟಿಸಿಕೊಟ್ಟಿದ್ದೆ ಅಪ್ಪು

ಇನ್ನು ಇಬ್ಬರು ಪ್ರತ್ಯೇಕವಾಗಿ ಮನೆ ಕಟ್ಟಿಸಿಕೊಳ್ಳುವುದು ಅಂತ ನಿರ್ಧಾರ ಆಗಿದ್ದಾಗ ಸ್ವತ: ಅಪ್ಪುನೇ ರಾಘಣ್ಣನಿಗೆ ಮನೆಯನ್ನು ಕಟ್ಟಿಸಿಕೊಟ್ಟಿದ್ದರು. ಆ ಮನೆಯ ಬಗ್ಗೆ ರಾಘಣ್ಣ ಓಪನ್ ಮಾತಾಡಿದ್ದಾರೆ. "ಈ ಮನೆಯನ್ನು ಅಪ್ಪುನೇ ಕಟ್ಟಿಸಿ, ನಮ್ಮ ಕೈಗೆ ಕೊಟ್ಟು ಹೋದ. ಇದು ಸತ್ಯವಾದ ಮಾತು. ಅವನ ಮನೆಗಿಂತ ಹೆಚ್ಚು ಮಾಡಿಕೊಟ್ಟು ಹೋದ. ಇಲ್ಲಾ ಅಂದಿದ್ದರೆ ನನಗೆ ಖಂಡಿತಾ ಈ ಮನೆ ಮಾಡುವುದಕ್ಕೆ ಆಗುತ್ತಿರಲಿಲ್ಲ." ಎಂದು ರಾಘಣ್ಣ ಹೇಳಿದ್ದಾರೆ.

"ನನ್ನಿಂದ ಮನೆಗೆ ಆದಾಯವಿರಲಿಲ್ಲ"

"ನಾನು ಆ ಕಾಲದಲ್ಲೇ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟಿದ್ದೆ. ನನ್ನಿಂದ ಮನೆಗೆ ಅಂತಹ ಆದಾಯವೇನೂ ಆಗುತ್ತಿರಲಿಲ್ಲ. ಅವನೊಬ್ಬನೇ ಆಕ್ಟ್ ಮಾಡುತ್ತಿದ್ದ. ಅವನಿಂದ ನಮ್ಮ ಮನೆ, ವಜ್ರೇಶ್ವರಿ ಕಂಬೈನ್ಸ್ ನಡೆಯುತ್ತಿತ್ತು. ಇದು ಸತ್ಯ. ಅವನು ಯಾವುದೇ ಸಿನಿಮಾ ಮಾಡಿದರೂ, ಎಲ್ಲಿಗೇ ಹೋದರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ನನಗೆ ಅಣ್ಣನ ಸ್ಥಾನ ಕೊಟ್ಟಿದ್ದ. ಅದಕ್ಕೆ ಬರುವಾಗ ತಮ್ಮನಾಗಿ ಬಂದ ಹೋಗುವಾಗ ಅಪ್ಪನಾಗಿ ಹೋದ." ಎಂದು ರಾಘಣ್ಣ ಓಪನ್ ಆಗಿ ಹೇಳಿದ್ದಾರೆ.

More from Filmibeat

English summary
Raghavendra Rajkumar house built by Puneeth Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X