ಅಪ್ಪುವಿನಂತೆಯೇ ಅಶ್ವಿನಿ ವರ್ಕ್‌ಔಟ್: ವಿಡಿಯೋ ನೋಡಿ ಪುನೀತ್ ನೆನೆದ ಫ್ಯಾನ್ಸ್!
ಪವರ್‌ಸ್ಟಾರ್ ಅನ್ನೋ ಬಿರುದಿಗೆ ತಕ್ಕಂತೆ ಬಾಳಿ ಬದುಕಿದವರು ಪುನೀತ್ ರಾಜ್‌ಕುಮಾರ್. ಅದೆಷ್ಟೇ ವರ್ಕ್ ಲೋಡ್ ಇರಲಿ. ಪ್ರತಿದಿನ ವರ್ಕ್‌ಔಟ್ ಮಾಡುವುದನ್ನು ಮಾತ್ರ ಪುನೀತ್ ರಾಜ್‌ಕುಮಾರ್ ನಿಲ್ಲಿಸುತ್ತಿರಲಿಲ್ಲ. ಆ ಮಟ್ಟಿಗೆ ಪುನೀತ್ ರಾಜ್‌ಕುಮಾರ್ ಶಿಸ್ತಿನ ಜೀವನ ನಡೆಸುತ್ತಿದ್ದರು.
ಅಪ್ಪು ವರ್ಕ್ ಔಟ್ ಮಾಡುವ ವಿಡಿಯೋ ನೋಡಿ ಅದೆಷ್ಟೊ ಮಂದಿ ಪ್ರೇರಣೆ ಹೊಂದಿದವರು ಇದ್ದಾರೆ. ಜಿಮ್‌ನಲ್ಲಿ, ಮನೆಯಲ್ಲಿ, ಬೀಚ್‌ನಲ್ಲಿ ಎಲ್ಲಿ ನೋಡಿದರೂ ಅಪ್ಪು ವರ್ಕ್‌ಔಟ್ ಇಲ್ಲವೇ ಸ್ಟಂಟ್ ಮಾಡಿ ಜನರ ಮೆಚ್ಚುಗೆ ಗಳಿಸುತ್ತಿದ್ದರು. ಅವರು ದಿಢೀರನೇ ಅಗಲಿದ ಬಳಿಕ ಆ ಪವರ್‌ಫುಲ್ ವಿಡಿಯೋವನ್ನು ಅಪ್ಪು ಫ್ಯಾನ್ಸ್ ಮಿಸ್ ಮಾಡಿಕೊಂಡಿದ್ದರು.
ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹಾದಿಯನ್ನೇ ಮುಂದುವರೆಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇಂಟರ್‌ನೆಟ್‌ಗೆ ಕಿಡಿ ಹಚ್ಚಿದೆ.

ಅಪ್ಪುಗೆ ಸಮನಾಗಿ ಅಶ್ವಿನಿ ವರ್ಕ್‌ಔಟ್
ಅಪ್ಪು ಅಗಲಿದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಕ್ಟಿವ್ ಆಗಿದ್ದಾರೆ. ಅಪ್ಪುವಿನ ಜವಾಬ್ದಾರಿಯನ್ನು ಅವರೇ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮುಂದೆ ಸಾಗುತ್ತಿದ್ದಾರೆ. ಸಿನಿಮಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿ ಅಪ್ಪುನಂತೆಯೇ ವರ್ಕ್ ಔಟ್ ಮಾಡುವುದನ್ನು ಅಭಿಮಾನಿಗಳು ನಿರೀಕ್ಷೆ ಮಾಡಿರಲಿಲ್ಲ.

'ಫೀಲ್ ದಿ ಪವರ್' ಎಂದ ಅಶ್ವಿನಿ
ವೈರಲ್ ಆಗಿರೋ ವಿಡಿಯೋದಲ್ಲಿ ಆಶ್ವಿನಿ ಪುನೀತ್ ರಾಜ್‌ಕುಮಾರ್ ವರ್ಕ್‌ಔಟ್ ನೋಡಿ ಥ್ರಿಲ್ ಆಗಿದ್ದಾರೆ. ಅಪ್ಪು ಅಭಿನಯದ 'ಯುವರತ್ನ' ಸಿನಿಮಾದ 'ಫೀಲ್ ದಿ ಪವರ್' ಸಾಂಗ್ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿದೆ. ಇನ್ನು ಹಾಡನ್ನು ಕೇಳಿದ ಮೇಲಂತೂ ಪವರ್‌ಸ್ಟಾರ್ ಅಭಿಮಾನಿಗಳು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.ಜೊತೆಗೆ ಭಾವುಕರಾಗಿಯೂ ಇದ್ದಾರೆ.
ಅಪ್ಪು ಜೊತೆಗೆ ಫಿಟ್‌ನೆಸ್ ಫ್ರೀಕ್
ಪುನೀತ್ ರಾಜ್‌ಕುಮಾರ್ ಸುಮ್ಮನೆ ಕೂರುವ ವ್ಯಕ್ತಿತ್ವದವರೇ ಆಗಿರಲಿಲ್ಲ. ಶೂಟಿಂಗ್ ಇಲ್ಲದ ವೇಳೆ ದೇಹವನ್ನು ದಂಡಿಸುತ್ತಿದ್ದರು. ಅಪ್ಪು ಲೈಫೇ ವರ್ಕ್‌ಔಟ್ ಅನ್ನುವ ಹಾಗಿತ್ತು. ಇವರೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಫಿಟ್‌ನೆಸ್ ಕಡೆ ಗಮನ ಹರಿಸುತ್ತಿದ್ದರು. 'ಗಂಧದಗುಡಿ' ಡಾಕ್ಯೂ ಸಿನಿಮಾ ಮೇಕಿಂಗ್ ವೇಳೆ ಅಪ್ಪು ಜೊತೆ ಟ್ರಕ್ಕಿಂಗ್ ಹೋಗಿದ್ದರು. ಇದು ಮೇಕಿಂಗ್ ವಿಡಿಯೋದಲ್ಲಿ ಸೆರೆಯಾಗಿದೆ.

ಅಶ್ವಿನಿ ವರ್ಕ್‌ಔಟ್ ನೋಡಿ ಏನಂತಿದ್ದಾರೆ ಫ್ಯಾನ್ಸ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ವರ್ಕ್‌ಔಟ್ ವಿಡಿಯೋ ನೋಡಿ ಅಪ್ಪು ಫ್ಯಾನ್ಸ್ ಖುಷಿಯಾಗಿದ್ದಾರೆ. ಕೆಲವರು ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಧೈರ್ಯ ತುಂಬುತ್ತಿದ್ದಾರೆ. ಮತ್ತೆ ಕೆಲವರು ಒತ್ತಡದಿಂದ ಆಚೆ ಬರಲು ಇದು ಒಳ್ಳೆ ಮಾರ್ಗ ಅಂತ ಸಲಹೆಯನ್ನೂ ನೀಡಿದ್ದಾರೆ. ಮತ್ತೆ ಕೆಲವರು ಅಪ್ಪು ವರ್ಕ್‌ಔಟ್ ವಿಡಿಯೋ ಬಗ್ಗೆನೂ ಮಾತಾಡುತ್ತಿದ್ದಾರೆ.


Click it and Unblock the Notifications











