ಲೋಕ ಮಾಯಾಬಜಾರು: ಬ್ಲ್ಯಾಕ್ ಆಂಡ್ ವೈಟ್‌ನಲ್ಲಿ ಪವರ್ ಸ್ಟಾರ್ ಪುನೀತ್ ಮಿಂಚು

ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಪ್ರೊಡಕ್ಷನ್‌ನ ಎರಡನೆಯ ಸಿನಿಮಾ 'ಮಾಯಾಬಜಾರ್ 2016' ಉತ್ತಮ ಮಾತುಗಳನ್ನು ಪಡೆಯುತ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಚೊಚ್ಚಲ ಸಿನಿಮಾ ಜನರ ಮನಗೆದ್ದಿದೆ. ರಾಜ್‌ ಬಿ. ಶೆಟ್ಟಿ, ವಸಿಷ್ಟ ಸಿಂಹ, ಅಚ್ಯುತ್ ಕುಮಾರ್, ಪ್ರಕಾಶ್ ರೈ, ಸುಧಾರಾಣಿ ಮುಂತಾದವರು ನಟಿಸಿರುವ ಈ ಚಿತ್ರದ ಕೊನೆಯಲ್ಲಿ ವಿಶೇಷ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದಾರೆ.

Recommended Video

ಈ ದಿನ ರಿಲೀಸ್ ಆಗುತ್ತೆKGF 2..? | kgf2 | Yash | kgf2 release date | Prashanth neel

ಮಿಥುನ್ ಮುಕುಂದನ್ ಸಂಗೀತ ನೀಡಿರುವ 'ಲೋಕ ಮಾಯಾಬಜಾರ್' ಹಾಡನ್ನು ಯೋಗರಾಜ್ ಭಟ್ ರಚಿಸಿದ್ದರು. ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯಂ ಈ ಹಾಡಿಗೆ ದನಿಯಾಗಿರುವುದು ವಿಶೇಷ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಈ ಹಾಡು ಸಾಕಷ್ಟು ವೈರಲ್ ಆಗಿತ್ತು. ಅದರಲ್ಲಿಯೂ ಅದರ ನೃತ್ಯವನ್ನು ಅನುಕರಿಸಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಮೆರಿಕದಲ್ಲಿ ತಂಡವೊಂದು ನರ್ತಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಾಡಿನ ಮೂಲ ವಿಡಿಯೋ ಬುಧವಾರ ಬಿಡುಗಡೆಯಾಗಿದೆ.

ವಿಭಿನ್ನ ಗೆಟಪ್‌ನಲ್ಲಿ ಪುನೀತ್

ವಿಭಿನ್ನ ಗೆಟಪ್‌ನಲ್ಲಿ ಪುನೀತ್

ಪುನೀತ್ ಸಹನೃತ್ಯಪಟುಗಳೊಂದಿಗೆ ನರ್ತಿಸುವ ಈ ವಿಡಿಯೋ ಸಂಪೂರ್ಣ ಕಪ್ಪು-ಬಿಳುಪಿನಲ್ಲಿದೆ. ಇದರಲ್ಲಿ ಪುನೀತ್ ಅವರ ದಿರಿಸು ವಿಶೇಷವಾಗಿದೆ. ದಪ್ಪನೆಯ ಮೀಸೆಯ ಹೊಸ ಲುಕ್‌ನಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ. ಹಳೆಯ ಕಾಲದ ಸಿನಿಮಾಗಳನ್ನು ನೆನಪಿಸುವ ನೃತ್ಯ ಶೈಲಿ ಸಕತ್ತಾಗಿ ಮೂಡಿಬಂದಿದೆ.

ಪುನೀತ್ ಅದ್ಭುತ ನೃತ್ಯ

ಪುನೀತ್ ಅದ್ಭುತ ನೃತ್ಯ

ಜನಪ್ರಿಯ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಧರಿಸುತ್ತಿದ್ದಂತಹ ಸಣ್ಣ ಬೌಲರ್ ಹ್ಯಾಟ್, ಕೋಟ್ ಧರಿಸಿರುವ ಪುನೀತ್, ಕೈಯಲ್ಲಿ ಕೋಲು ಹಿಡಿದು ಆರಂಭದಲ್ಲಿ ಚಾಪ್ಲಿನ್ ಅವರಂತೆಯೇ ಕಾಣಿಸುತ್ತಾರೆ. ಇಡೀ ಹಾಡಿನ ನೃತ್ಯ ಸರಳ ಹಾಗೂ ಆಕರ್ಷಕ ಸಂಯೋಜನೆಯಿಂದ ಗಮನ ಸೆಳೆಯುತ್ತದೆ. ಅಲ್ಲಲ್ಲಿ ಅಪ್ಪು ಮೈಕಲ್ ಜಾಕ್ಸನ್ ನೃತ್ಯ ಶೈಲಿಯನ್ನು ಅನುಕರಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್

ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್

ಈ ಹಾಡಿನ ಲಿರಿಕಲ್ ವಿಡಿಯೋ ಜನವರಿ 17ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಇಲ್ಲಿಯವರೆಗೂ ಈ ವಿಡಿಯೋ 5 ಲಕ್ಷ ವೀಕ್ಷಣೆಗೆ ಒಳಪಟ್ಟಿದೆ. ಸಿನಿಮಾದಲ್ಲಿ ಪ್ರದರ್ಶಿಸಿರುವ ಲೋಕ ಮಾಯಾಬಜಾರು ಹಾಡಿನ ಅಧಿಕೃತ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ ಅರ್ಧಗಂಟೆಯಲ್ಲಿಯೇ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ.

ಮೆಚ್ಚುಗೆ ಪಡೆದ ನೃತ್ಯ

ಚಿತ್ರದ ಟೈಟಲ್ ಸಾಂಗ್‌ಗೆ ಪುನೀತ್ ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅಮೆರಿಕದ ಮಿನ್ನೆಪೊಲಿಸ್‌ನಲ್ಲಿ ಸಾತ್ ಕೊರಿಯೋಗ್ರಫಿ ತಂಡ ಈ ಹಾಡಿಗೆ ಕುಣಿದು ಮೆಚ್ಚುಗೆ ಗಳಿಸಿತ್ತು. ಪುನೀತ್ ಈ ನೃತ್ಯದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

More from Filmibeat

English summary
Puneeth Rajkumar's PKR productions Maya Bazar 2016 movie title song Loka Maya Bazaru official video is released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X