ಅಂದು ಅಪ್ಪುಗೆ ಅಣ್ಣಾವ್ರು ವಿಮಾನ ತೋರಿಸಿ ಹೇಳಿದ ಮಾತು ನಿಜವಾಗಿಬಿಡ್ತು

ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳುಗಳು ಕಳೆದಿವೆ. ಪುನೀತ್ ಕುಟುಂಬ, ಶಿವರಾಜ್‌ಕುಮಾರ್, ರಾಘಣ್ಣ ಸೇರಿದಂತೆ ಎಲ್ಲರೂ ಈ ನೋವಿನಿಂದ ನಿದಾನವಾಗಿ ಹೊರಬರುತ್ತಿದ್ದಾರೆ ಅಂದುಕೊಳ್ಳಲಾಗಿತ್ತು. ಆದರೆ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಣ್ಣ ಸೇರಿದಂತೆ ಶ್ರೀಮುರಳಿ, ವಿಜಯ್ ರಾಘವೇಂದ್ರ ಎಲ್ಲರೂ ಭಾವುಕರಾಗಿದ್ದರು. ಒಳಗೆ ಹುದುಗಿದ್ದ ದು:ಖ ಉಮ್ಮಳಿಸಿ ಬಂದಿತ್ತು.

ಪುನೀತ್ ರಾಜ್‌ಕುಮಾರ್‌ರನ್ನು ತುಂಬಾನೇ ಇಷ್ಟ ಪಡುತ್ತಿದ್ದ ಮಾವ ಚಿನ್ನೇಗೌಡರು ಕೂಡ ವೇದಿಕೆ ಮೇಲೆ ಭಾವುಕರಾಗಿದ್ದರು. ಅಪ್ಪುವನ್ನು ಆಡಿ ಬೆಳೆಸಿದ್ದ ಚಿನ್ನೇಗೌಡರು ಅಪ್ಪು ಜೊತೆಗೆ ಕಳೆದ ಕೆಲವು ನೆನಪುಗಳನ್ನು ಹಂಚಿಕೊಂಡರು ಈ ವೇಳೆ ಪುನೀತ್‌ಗೆ ತಂದೆಯಂತೆ ನಾಟಿ ಕೋಳಿ ಊಟ ಅಂದರೆ ಇಷ್ಟ ಅಂತ ಹೇಳಿದ್ದರು. ಅಲ್ಲದೆ ಅಣ್ಣಾವ್ರು ಅಪ್ಪುಗೆ ವಿಮಾನ ತೋರಿಸಿದ ಹೇಳಿದ ಮಾತನ್ನು ನೆನೆದು ಭಾವುಕರಾದರು.

ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬರಲಿಲ್ಲ

ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬರಲಿಲ್ಲ

"ಅಕ್ಟೋಬರ್ 17ನೇ ತಾರೀಕು. ಅವತ್ತು ನನ್ನ ಹುಟ್ಟಿದ ದಿನ. ಅವನು ಯಾವಾಗಲೂ ಕೂಡ ನನ್ನ ಹುಟ್ಟಿದ ಹಬ್ಬದ ದಿನ ಬಂದು ವಿಶ್ ಮಾಡುವುದು ರೂಢಿ. 17ನೇ ತಾರೀಕು ಅವನಿಗೆ ಬರುವುದಕ್ಕೆ ಆಗಲಿಲ್ಲ. 18ನೇ ತಾರೀಕು ಬೆಳಗ್ಗೆ ಫೋನ್ ಮಾಡಿ ಹೇಳುತ್ತಾನೆ. ಮಾಮಾ ನಾನು ನಿನ್ನೆ ಬರಲಿಲ್ಲ ಬೇಜಾರು ಮಾಡಿಕೊಳ್ಳಬೇಡ. ಭಾನುವಾರ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದ." ಎಂದು ಆ ದಿನವನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.

ಅವನಿಗಾಗಿ ನಾಟಿ ಕೋಟಿ ಊಟ ಮಾಡಿಸಿದ್ದೆ

ಅವನಿಗಾಗಿ ನಾಟಿ ಕೋಟಿ ಊಟ ಮಾಡಿಸಿದ್ದೆ

"ಅವನಿಗೆ ಇಷ್ಟವಾದ ಊಟ ನನಗೆ ಗೊತ್ತು. ನಮ್ಮ ಭಾವ ರಾಜ್‌ಕುಮಾರ್ ತರ ನಾಟಿ ಕೋಳಿ ಅಂದರೆ ಇಷ್ಟ. ನನ್ನ ಹೆಂಡತಿ ಚೆನ್ನಾಗಿ ಮಾಡುತ್ತಾಳೆ. ಅದನ್ನು ಮಾಡಿಸು ಮಾಮಾ ನಾನು ಬರ್ತೀನಿ ಅಂದಿದ್ದ. ನಾನು ಆ ಭಾನುವಾರದಿಂದ ಕಾಯುತ್ತಲೇ ಇದ್ದೀನಿ. ಆ ಭಾನುವಾರ ಬರ್ತಾನೆ ಪುನೀತ್ ಅಂತ, ಆ ಪುನೀತ್ ಇವತ್ತು ಕಾಣದಂತೆ ಹೊರಟು ಹೋಗಿದ್ದಾನೆ." ಎಂದು ವೇದಿಕೆ ಘಟನೆಯನ್ನು ವಿವರಿಸಿದ್ದಾರೆ.

ನಮ್ಮ ಪುನೀತ್ ಕೈಲಾಸ ಸೇರಿಕೊಂಡನು

ನಮ್ಮ ಪುನೀತ್ ಕೈಲಾಸ ಸೇರಿಕೊಂಡನು

"ಕಾಣದಂತೆ ಮಾಯವಾದನು ನಮ್ಮ ಪುನೀತ್ ಕೈಲಾಸ ಸೇರಿಕೊಂಡನು ಅಂತ ಹೇಳಿ, ನಮ್ಮನ್ನೆಲ್ಲಾ ಬಿಟ್ಟು, ಅವನು ತಂದೆ-ತಾಯಿ ಜಾಗಕ್ಕೆ ಸೇರಿಕೊಂಡಿದ್ದಾನೆ. ಒಂದಾ ಎರಡಾ ಅವನ ಗುಣಗಳನ್ನು ಹೇಳಬೇಕು ಅಂದರೆ, ಗಂಟೆಗಟ್ಲೆ ಆಗುವುದಿಲ್ಲ. ದಿನ ಸಾಲುವುದಿಲ್ಲ." ಎಂದು ಅಪ್ಪು ನೆನೆದು ಮರುಗಿದ್ದಾರೆ.

ಅಪ್ಪುಗೆ ಅಣ್ಣಾವ್ರು ವಿಮಾನ ತೋರಿಸಿ ಹೇಳಿದ ಮಾತು ನಿಜವಾಯ್ತು

ಅಪ್ಪುಗೆ ಅಣ್ಣಾವ್ರು ವಿಮಾನ ತೋರಿಸಿ ಹೇಳಿದ ಮಾತು ನಿಜವಾಯ್ತು

"ಮದ್ರಾಸ್‌ನ ಮನೆಯಲ್ಲಿ ನಮ್ಮ ಭಾವ ಮಲಗಿದ್ರು. ಅಲ್ಲೇ ಪುನೀತ್ ಕೂಡ ಮಲಗಿದ್ರು. ಆ ಮನೆ ಮೇಲೆ ವಿಮಾನ ಹಾರಾಡುತ್ತಿತ್ತು. ಆಗ ಪುನೀತ್ ಅಳುತ್ತಿದ್ದ. ಆಗ ರಾಜ್‌ಕುಮಾರ್ ಹೇಳ್ತಾರೆ, ಮಗನೇ ಅಳಬೇಡ ಕಣೋ ಸುಮ್ಮನಿರೋ ಇನ್ಮುಂದೆ ನೀನು ಈ ವಿಮಾನದಲ್ಲಿಯೇ ಹಾರಾಡುತ್ತೀಯ ಅಂತ ಹೇಳಿದ್ದರು. ಅದು ಏನಕ್ಕೆ ಹೇಳಿದರೋ ನನಗಂತೂ ಗೊತ್ತಿಲ್ಲ. ಅಂದು ಅವರು ಹೇಳಿದ ಮಾತು ಇಂದಿಗೂ ಸತ್ಯವೇ ಆಗಿ ಹೋಯ್ತು. ಅಲ್ವಾ? ನೀವೇ ಹೇಳಿ ಯೋಚನೆ ಮಾಡಿ." ಎಂದು ಪುನೀತ್ ನೆನೆದು ಕಣ್ಣೀರು ಹಾಕಿದರು.

More from Filmibeat

English summary
Puneeth Supposed to meet his uncle chinnegowda birthday and like to have nati koli. He like noti koli food like his Father.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X