For Quick Alerts
  ALLOW NOTIFICATIONS  
  For Daily Alerts

  ವಿನಯ್ ರಾಜ್‌ಕುಮಾರ್ ಸಿನಿಮಾ 'ಅಂದೊಂದಿತ್ತು ಕಾಲ' ಟೈಟಲ್ ಕೇಳಿ ಅಪ್ಪು ಹಾಡು ಹಾಡಿದ್ದೇಕೆ?

  |

  'ಅಂದೊಂದಿತ್ತು ಕಾಲ' ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ ನಮ್ಮ ಬಸವ ಸಿನಿಮಾದ ಹಾಡಿನ ಒಂದು ಸಾಲು. ಈ ಹಾಡಿನ ಸಾಲನ್ನೇ ಟೈಟಲ್ ಆಗಿಟ್ಟುಕೊಂಡು ಸಿನಿಮಾ ರೆಡಿಯಾಗಿದೆ. ಚಿತ್ರೀಕರಣ ಕೂಡ ಮುಗಿಸಿದೆ. ವಿನಯ್ ರಾಜ್‌ಕುಮಾರ್ ಹಾಗೂ ಅದಿಪ್ರಭುದೇವ ನಟಿಸಿರುವ ಈ ಸಿನಿಮಾ ಬಿಡುಗಡೆಗೆ ಬೇಕಾಗಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

  'ಅಂದೊಂದಿತ್ತು ಕಾಲ' ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದು ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌. ಈ ಸಿನಿಮಾಗೆ ನಿರ್ದೇಶಕ ಜೋಗಿ ಪ್ರೇಮ್‌ ಕ್ಯಾಮೆರಾ ಚಾಲನೆಗೆ ನೀಡಿದ್ದರು. ತೊಂಭತ್ತರ ದಶಕದ ಸುಂದರ ಕತೆಗೆ ವಿನಯ್ ರಾಜ್‌ಕುಮಾರ್ ಹಾಗೂ ಅದಿತಿ ಪ್ರಭುದೇವ ಪ್ರೀತಿಯ ಹೆಜ್ಜೆಗಳು ಸಿನಿಮಾದಲ್ಲಿವೆ. ವಿಶೇಷ ಅಂದರೆ, ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ಟೈಟಲ್ ಕೇಳಿ ತಮ್ಮ ಸಿನಿಮಾದ ಹಾಡು ಹಾಡಿ ನಿರ್ದೇಶಕರಿಗೆ ವಿಶ್ ಮಾಡಿದ್ದರು.

  ಹಾಡಿ ಶುಭ ಕೋರಿದ್ದ ಪುನೀತ್

  ಹಾಡಿ ಶುಭ ಕೋರಿದ್ದ ಪುನೀತ್

  ವಿನಯ್ ರಾಜ್‌ಕುಮಾರ್ ಅಭಿನಯದ 'ಅಂದೊಂದಿತ್ತು ಕಾಲ' ಸಿನಿಮಾದ ಮುಹೂರ್ತಕ್ಕೆ ಪುನೀತ್ ಗೆಸ್ಟ್ ಆಗಿ ಬಂದಿದ್ದರು. ಮುಹೂರ್ತಕ್ಕೂ ಮುನ್ನ ಪುನೀತ್ ಕ್ಯಾರವ್ಯಾನ್‌ನಲ್ಲಿ ಕೂತಿದ್ದರು. ಆಗ ನಿರ್ದೇಶಕ ಕೀರ್ತಿ ಅಪ್ಪು ಬಳಿಕ ಹೋಗಿದ್ದರು. ಆಗ ಪುನೀತ್ ಸಿನಿಮಾದ ಟೈಟಲ್ ಕೇಳಿ ಖುಷಿ ಪಟ್ಟಿದ್ದರು. ನನ್ನ ಸಿನಿಮಾದ ಹಾಡನ್ನೇ ಟೈಟಲ್ ಮಾಡಿದ್ದೀರಲ್ಲಾ ಅಂತ ಹರ್ಷ ವ್ಯಕ್ತಪಡಿಸಿದ್ದರು. ಬಳಿಕ ನಮ್ಮ ಬಸವ ಸಿನಿಮಾ 'ಅಂದೊಂದಿತ್ತು ಕಾಲ' ಹಾಡನ್ನು ಹಾಡಿದ್ದರು.

  ಟೈಟಲ್ ಕೇಳಿ ಹಾಡಿದ್ದ ಅಪ್ಪು

  ಟೈಟಲ್ ಕೇಳಿ ಹಾಡಿದ್ದ ಅಪ್ಪು

  " ಈ ಸಿನಿಮಾ ಲಾಂಚ್ ಮಾಡಿದ್ದೇ ಪುನೀತ್ ಸಾರ್. ಆ ದಿನ ನಾನು ಅವರ ಕ್ಯಾರವ್ಯಾನ್‌ಗೆ ಹೋಗಿದ್ದೆ. ಅವತ್ತು ಏನಮ್ಮಾ ಟೈಟಲ್ ಅಂದರು. 'ಅಂದೊಂದಿತ್ತು ಕಾಲ' ಅಂದೆ. ಅದಕ್ಕೆ ಏನಮ್ಮಾ ನಮ್ಮ ಸಿನಿಮಾ ದ ಹಾಡನ್ನೇ ಟೈಟಲ್ ಆಗಿ ಇಟ್ಟುಕೊಂಡಿದ್ದೀಯಾ ಅಂತ ಹಾಡನ್ನೇ ಹಾಡಿಬಿಟ್ಟರು. ಒಳ್ಳೆಯದಾಗುತ್ತೆ ಮಾಡು ಅಂತ ಹೇಳಿದ್ರು." ಎಂದು ಆ ದಿನವನ್ನು ಮತ್ತೆ ನೆನಪಸಿಕೊಂಡಿದ್ದಾರೆ ನಿರ್ದೇಶಕ ಕೀರ್ತಿ.

  ವಿನಯ್ ರಾಜ್‌ಕುಮಾರ್ ಸಿನಿಮಾ ನಿರ್ದೇಶಕ

  ವಿನಯ್ ರಾಜ್‌ಕುಮಾರ್ ಸಿನಿಮಾ ನಿರ್ದೇಶಕ

  ವಿನಯ್ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಫಿಲ್ಮ್ ಡೈರೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು 90 ದಶಕದ ಕಥೆಯಾಗಿದ್ದರಿಂದ ಪ್ರೀತಿ- ಪ್ರೇಮ ಭಾವನೆಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. " ಈ ಹಿಂದೆ ನಾಲ್ಕರಿಂದ ಐದು ಸಿನಿಮಾ ಮಾಡಿದ್ದಾರೆ. ಆ ಸಿನಿಮಾದಲ್ಲಿ ಇಂತಹ ಪಾತ್ರವನ್ನು ಮಾಡಿಲ್ಲ. ನಾನು ಪಾತ್ರ ಬರೆಯುವಾಗ ಅವರೇ ತಲೆಗೆ ಬಂದಿದ್ದು. ಈ ಸಿನಿಮಾದಲ್ಲಿ ಅವರಿಗೆ ಒಂದು ಆಸೆ ಇರುತ್ತೆ. ಏನೇ ನೋಡಿದರೂ ಕಲ್ಪನೆ ಮಾಡಿಕೊಂಡು ಬರೆಯುವುದಕ್ಕೆ ಶುರುಮಾಡುತ್ತಾರೆ. ಆಗ ಅವರಿಗೆ ಸಿನಿಮಾ ಡೈರೆಕ್ಟರ್ ಆಗಬೇಕು ಅಂತ ಬೆಂಗಳೂರಿಗೆ ಬರುತ್ತಾರೆ. ಆಗ ಏನೆಲ್ಲಾ ಆಗುತ್ತೆ ಎನ್ನುವುದೇ ವಿನಯ್ ರಾಜ್‌ಕುಮಾರ್ ಅವರ ಕಥೆ." ಅಂತಾರೆ ನಿರ್ದೇಶಕ ಕೀರ್ತಿ.

  ಅದಿತಿ ಪ್ರಭುದೇವಾಗೆ ಇದು ಹೊಸ ಪಾತ್ರ

  ಅದಿತಿ ಪ್ರಭುದೇವಾಗೆ ಇದು ಹೊಸ ಪಾತ್ರ

  ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್‌ಗೆ ಇಬ್ಬರು ನಾಯಕಿಯರಿದ್ದಾರೆ. ಅದಿತಿ ಪ್ರಭುದೇವಾ ಹಾಗೂ ಗಟ್ಟಿಮೇಳ ಖ್ಯಾತಿಯ ನಿಶಾ ಮಿಲನ. ಅದಿತಿ ಹಿಂದೆ ಯಾವ ಸಿನಿಮಾದಲ್ಲೂ ಮಾಡಿರದ ಪಾತ್ರದಲ್ಲಿ ನಟಿಸಿದ್ದಾರೆಂತೆ " ಅದಿತಿ ಪ್ರಭುದೇವ ಮ್ಯೂಸಿಕ್ ಟೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೂ ಕೂಡ ಈ ಹಿಂದೆ ಎಲ್ಲೂ ಈ ಪಾತ್ರವನ್ನು ಮಾಡಿಲ್ಲ. ಅದಿತಿ ಅವರನ್ನು ನೋಡಿದರೆ, ಪಕ್ಕಾ ಹಳ್ಳಿ ನಾಟಿ ಹುಡುಗಿ ಪಾತ್ರ. ಇಬ್ಬರ ಪೇರ್ ಹಳ್ಳಿಯವರ ಹಾಗೆಯೇ ಕಾಣಿಸಿಕೊಳ್ಳುತ್ತಾರೆ." ಅಂತಾರೆ ನಿರ್ದೇಶಕರು.

  ಗಟ್ಟಿಮೇಳ ನಿಶಾ ಮಿಲನಾ ನಟನೆ

  ಗಟ್ಟಿಮೇಳ ನಿಶಾ ಮಿಲನಾ ನಟನೆ

  'ಅಂದೊಂದಿತ್ತು ಕಾಲ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅದಿತಿ ಪ್ರಭುದೇವಾ ಒಂದು ಪಾತ್ರದಲ್ಲಿ ನಟಿಸಿದ್ರೆ, ಗಟ್ಟಿಮೇಳ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಿಶಾ ಮಿಲನಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರ ಕೂಡ ಸಿನಿಮಾದಲ್ಲಿ ವಿಶೇಷ ರೋಲ್ ಅನ್ನು ಪ್ಲೇ ಮಾಡುತ್ತಿದೆ.

  ರಾಘಣ್ಣನ ಮನಗೆದ್ದ ಸಿನಿಮಾ

  ರಾಘಣ್ಣನ ಮನಗೆದ್ದ ಸಿನಿಮಾ

  "ಈ ಸಿನಿಮಾ ನೋಡಿದಾಗ, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಮಂಗಳಾ ಮೇಡಂ ಅವರಿಗೆ ಹತ್ತಿರ ಅಂತ ಅನಿಸಿದೆ. ಅವರಿಗೆ ಅವರ ಬಾಲ್ಯ ನೆನಪಾಯ್ತು ಅಂತ ಹೇಳಿದ್ರು. ನಾವು ಹೀಗೆ ಇದ್ವಿ ಅಂತ ಅನಿಸಿದೆ. ರಾಘಣ್ಣ ಹೀಗೆ ಹೇಳಿದಾಗ, ನನ್ನ ಸಿನಿಮಾ ಬಗ್ಗೆ ನನಗೆ ತುಂಬಾ ಖುಷಿಯಾಯ್ತು." ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪತ್ನಿ ಮಂಗಳಾ ಅವರು ಅಂದೊಂದಿತ್ತು ಕಾಲ ಸಿನಿಮಾ ನೋಡಿ ತಮ್ಮ ಬಾಲ್ಯವನ್ನು ಮೆಲುಕು ಹಾಕಿದ್ದಕ್ಕೆ ನಿರ್ದೇಶಕ ಕೀರ್ತಿ ಥ್ರಿಲ್ ಆಗಿದ್ದಾರೆ.

  ಖ್ಯಾತ ಗಾಯರೇ ಸಿನಿಮಾಗೆ ಧ್ವನಿ ನೀಡಿದ್ದಾರೆ

  ಖ್ಯಾತ ಗಾಯರೇ ಸಿನಿಮಾಗೆ ಧ್ವನಿ ನೀಡಿದ್ದಾರೆ

  " ಅಂದೊಂದಿತ್ತು ಕಾಲ ಸಿನಿಮಾ ಸಂಪೂರ್ಣ ಮುಗಿದಿದೆ. ಇನ್ನೊಂದು ನಾಲ್ಕು ದಿನ ಪ್ಯಾಚ್ ವರ್ಕ್ ಇದೆ ಅಷ್ಟೆ. ಡಬ್ಬಿಂಗ್ ಎಲ್ಲಾ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ. ಹಾಡುಗಳ ಚಿತ್ರೀಕರಣ ಕೂಡ ಮುಗಿದಿದೆ. ಒಂದು ಹಾಡನ್ನು ತೆಲುಗಿನ ಸಿದ್ ಶ್ರೀರಾಮ್ ಹಾಡಿದ್ದಾರೆ. ಹಾಯಾಗಿದೆ ಎದೆಯೊಳಗೆ ಎನ್ನುವ ಹಾಡನ್ನು ಅರ್ಮಾನ್ ಮಲಿಕ್ ಹಾಡಿದ್ದಾರೆ. ಒಂದು ಹಾಡನ್ನುವಿಜಯ ಪ್ರಕಾಶ್ ಹಾಡುತ್ತಾರೆ. ಇನ್ನೊಂದು ಜೋಗಿ ಪ್ರೇಮ್ ಹಾಡುತ್ತಾರೆ. ರಾಘವೇಂದ್ರ ವಿ. ಅನ್ನುವವರು ಸಂಗೀತ ನೀಡಿದ್ದಾರೆ."

  English summary
  Vinay Rajkumar playing film director Aditi Prabhudeva as dancer in Andondittu Kaala movie. When Puneeth Rajkumar heard about title he sung his own film song.
  Wednesday, January 12, 2022, 12:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X