'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್‌ಗೆ ಹಕ್ಕುಗಳಿಂದ ಬಂದ ಹಣವೆಷ್ಟು?

ಕಳೆದ ಒಂದೂವರೆ ವರ್ಷದಿಂದ ಕನ್ನಡ ಚಿತ್ರರಂಗಕ್ಕೆ ಮೆಗಾ ಹಿಟ್ ಅಂತ ಯಾವುದೇ ಸಿನಿಮಾ ಸಿಕ್ಕಿಲ್ಲ. ಇದೂವರೆಗೆ ಸಿನಿಮಾ ಮಾಡಿದ ನಿರ್ಮಾಪಕರು ಇದರಿಂದ ಕಂಗಲಾಗಿರುವುದಂತೂ ಸತ್ಯ. ಎಲ್ಲೊ ಒಂದೆರಡು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಬಿಟ್ಟರೆ, ತೆರೆಕಂಡ ಬಹುತೇಕ ಸಿನಿಮಾಗಳು ನಿರ್ಮಾಪಕರಿಗೆ ನಷ್ಟ ತಂದೊಡ್ಡಿದ್ದೇ ಹೆಚ್ಚು.

ಇನ್ನು ಲೋಕಸಭೆ ಚುನಾವಣೆ, ಐಪಿಎಲ್ ಅಂತ ಸೂಪರ್‌ಸ್ಟಾರ್‌ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆನೇ ಇಡುತ್ತಿಲ್ಲ. ಕೆಲವು ಈ ಸಮಯದಲ್ಲೇ ರಿಲೀಸ್ ಮಾಡುವ ಸಾಹಸ ಮಾಡಿದ್ದರು. ಈ ಪ್ರಯತ್ನದಲ್ಲಿ ಸಿಹಿಗಿಂತ ಕಹಿ ಸಿಕ್ಕಿದ್ದೇ ಹೆಚ್ಚು. ಇದೇ ಟೈಂನಲ್ಲೇ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ 'ಅವತಾರ ಪುರುಷ 2' ರಿಲೀಸ್ ಮಾಡಿದ್ದರು.

Pushkara Mallikarjunaiah revealed Avatara Purusha 2 movie digital satellite dubbing rights

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾಗೆ ಮೆಚ್ಚುಗೆಯಂತೂ ವ್ಯಕ್ತವಾಗಿತ್ತು. ಆದರೆ, ಥಿಯೇಟರ್‌ನಲ್ಲಿ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಗಲಿಲ್ಲ. 'ಅವತಾರ ಪುರುಷ' ಮೊದಲ ಪಾರ್ಟ್‌ ಚಿತ್ರ ಮಂದಿರದಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ, ಓಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

'ಅವತಾರ ಪುರುಷ 2' ಎರಡನೇ ಪಾರ್ಟ್‌ ಏನಾಗುತ್ತೋ.. ಅದು ಬೇರೆ ಮಾತು. ಅದರೆ, ಥಿಯೇಟರ್ ಹಕ್ಕುಗಳನ್ನು ಬಿಟ್ಟು ಈ ಸಿನಿಮಾ ಎಷ್ಟು ಬ್ಯುಸಿನೆಸ್ ಮಾಡಿದೆ ಅನ್ನೋದು ರಿವೀಲ್ ಆಗಿದೆ. ಹೌದು, ಸ್ವತ: ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಸಿನಿಮಾ 'ಅವತಾರ ಪುರುಷ 2' ಬಿಡುಗಡೆಗೂ ಮುನ್ನವೇ ಸೇಫ್ ಆಗಿದ್ದೇವೆ ಎಂದು ಹೇಳಿದ್ದರು. ಅದರಂತೆ ಯಾವ್ಯಾವ ಹಕ್ಕುಗಳಿಗೆ ಎಷ್ಟೆಷ್ಟು ರೆಸ್ಪಾನ್ಸ್ ಸಿಕ್ಕಿದೆ? ಅನ್ನೋದನ್ನು ಅವರೇ ರಿವೀಲ್ ಮಾಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ತನ್ನ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ 'ಅವತಾರ ಪುರುಷ 2' ಸಿನಿಮಾದ ಯಾವ್ಯಾವ ಹಕ್ಕುಗಳು ಎಷ್ಟೆಷ್ಟು ಮೊತ್ತಕ್ಕೆ ಸೇಲ್ ಆಗಿವೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅದರ ಲಿಸ್ಟ್ ಇಲ್ಲಿದೆ.

Pushkara Mallikarjunaiah revealed Avatara Purusha 2 movie digital satellite dubbing rights

ಸ್ಯಾಟಲೈಟ್ ಹಕ್ಕು ₹5.75 ಕೋಟಿ
ಡಿಜಿಟಲ್ ಹಕ್ಕು ₹3 ಕೋಟಿ
ಹಿಂದಿ ಡಬ್ಬಿಂಗ್ ಹಕ್ಕು ₹2 ಕೋಟಿ
ಇತರೆ ಹಕ್ಕುಗಳು ₹60 ಲಕ್ಷ

ಒಟ್ಟು ₹11.25 ಕೋಟಿ

ಸಿಂಪಲ್ ಸುನಿ ನಿರ್ದೇಶಿಸಿದ 'ಅವತಾರ ಪುರುಷ 2' ಸಿನಿಮಾ ಬಿಡುಗಡೆಗೂ ಮುನ್ನವೇ ನಿರ್ಮಾಪಕರ ಜೇಬು ತುಂಬಿಸಿದೆ. ಈ ಲೆಕ್ಕವನ್ನು ನಿರ್ಮಾಪಕರೇ ಕೊಟ್ಟಿರೋದ್ರಿಂದ ಅಧಿಕೃತ ಎಂದೇ ಭಾವಿಸಲಾಗಿದೆ. ಇದರೊಂದಿಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಬ್ಯುಸಿನೆಸ್ ಆಗುವುದಕ್ಕೆ ನಿರ್ಮಾಣ ಸಂಸ್ಥೆಯ ಸ್ಟ್ರೆಂಥ್ ಕಾರಣ ಎಂದೂ ಹೇಳಿಕೊಂಡಿದ್ದಾರೆ.

ಇದು ಯಾರಿಗಾದರೂ ಟಾಂಗ್ ಕೊಡುವುದಕ್ಕೆ ಹಾಕಿಕೊಂಡಿದ್ದಾರಾ? ಇಲ್ಲಾ ಅಸಲಿ ವಿಷಯ ತಿಳಿಸುವುದಕ್ಕಾ ಅನ್ನೋದು ಅವರಿಗೇ ಗೊತ್ತಿದೆ. ಆದರೆ, ಕನ್ನಡ ಸಿನಿಮಾವನ್ನು ಕೊಂಡು ಕೊಳ್ಳುವವರೇ ಇಲ್ಲ ಎಂದು ನಿರಾಶರಾಗಿದ್ದ ನಿರ್ಮಾಪಕರಿಗೆ ಈ ಅಂಕಿ ಅಂಶಗಳು ಹೊಸ ಹುರುಷು ಕೊಟ್ಟಿರಬಹುದು. 'ಕೆಜಿಎಫ್', 'ಕಾಂತಾರ' ಬಳಿಕ ಸೊರೆಗಿ ಹೋಗಿರುವ ಚಿತ್ರರಂಗಕ್ಕೆ ಹೊಸ ಚೈತನ್ಯ ಬರುತ್ತಾ? ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.

More from Filmibeat

English summary
Avatara Purusha 2 movie producer Pushkara Mallikarjunaiah revealed non theatrical rights:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X