ಪುಟ್ಟಕ್ಕನ ಮಗಳ ಸಿನಿಮಾ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ರಿಲೀಸ್‌ಗೆ ರೆಡಿ: ಏನಿದರ ಹೈಲೈಟ್?

ಕಿರುತೆರೆಯಲ್ಲಿ ಫೇಮಸ್ ಆದ ನಟಿಯರು ಸಿನಿಮಾಗೆ ಬರೋದು ಹೊಸತೇನಲ್ಲ. ಈ ಹಿಂದೆನೂ ಅನೇಕ ನಟಿಯರು ಕಿರುತೆರೆಯಿಂದಲೇ ಸಿನಿಮಾರಂಗಕ್ಕೆ ಬಂದು ಫೇಮಸ್ ಆಗಿದ್ದಾರೆ. ಈಗ ಅವರ ಸಾಲಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿ 'ಸಂಜನಾ ಬುರ್ಲಿ' ಕೂಡ ಸೇರಿಕೊಂಡಿದ್ದಾರೆ.

ವಿಭಿನ್ನ ಕಥಾ ಹಂದರ ಹೊಂದಿರೊ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ಸಂಜನಾ ಬರ್ಲಿ ನಾಯಕಿಯಾಗಿ ನಟಿಸಿದ್ದಾರೆ. ಒಂದಿಷ್ಟು ನೈಜ ಘಟನೆಯನ್ನು ಇಟ್ಟುಕೊಂಡು ಹೆಣೆದ ಕಥೆಯಲ್ಲಿ ಸಂಜನಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Puttakkana Makkalu Sanjana Burli, Raghav movie Radha Searching Ramana Missing releasing on June 2nd

ಮೈಸೂರಿನ ಶ್ರೀಕಾಂತ್ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಸುಂದರ ಪ್ರೀತಿಯ ಕಥೆಯ ಜೊತೆಗೆ ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳನ್ನು ಈ ಸಿನಿಮಾದಲ್ಲಿ ಇಟ್ಟಿದ್ದಾರಂತೆ. ಈ ಸಿನಿಮಾದ ಟೈಟಲ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನು ಈ ಸಿನಿಮಾವನ್ನು ಮೈಸೂರಿನ ನಿರ್ಮಾಪಕರಾದ ಯಶಸ್ವಿ ಶಂಕರ್ ಹಾಗೂ ಸವಿತಾ ಯಶಸ್ವಿ ನಿರ್ಮಾಣ ಮಾಡಿದ್ದಾರೆ.

'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾ ನಿರ್ದೇಶಕ ಶ್ರೀಕಾಂತ್, ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ನಿರ್ದೇಶಕನಾಗಬೇಕೆಂಬ ಏಕೈಕ ಕಾರಣಕ್ಕೆ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಪ್ರತಿಭೆ, ಆದರ್ಶಗಳೇ ಇವರಿಗೆ ಸ್ಪೂರ್ತಿ ಅಂತೆ.

Puttakkana Makkalu Sanjana Burli, Raghav movie Radha Searching Ramana Missing releasing on June 2nd

ಬಾಲ್ಯದಿಂದಲೂ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದಾರೆ. ಅದೇ ಸ್ಪೂರ್ತಿಯಿಂದ ಈವರೆಗೆ ನಾಲ್ಕು ಭಾಷೆಯ ಸಿನಿಮಾಗಳಿಗೆ ಸಹ ನಿರ್ದೇಶನ ಮಾಡಿದ್ದಾರೆ. ಇವರ ಕಥೆ ನಿರ್ಮಾಪಕ ಯಶಸ್ವಿ ಶಂಕರ್ ಅವರಿಗೆ ತುಂಬಾ ಹಿಡಿಸಿತ್ತು. ಹೀಗೆ ನಿರ್ಮಾಪಕರೊಬ್ಬರು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾ ಪ್ರಾರಂಭವಾಯಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಉತ್ತಮ ಸಿನಿಮಾ ಮಾಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ಶ್ರೀಕಾಂತ್.

"5 ವರ್ಷಗಳ ಹಿಂದೆ ನನ್ನ ಗೆಳೆಯನ ಬದುಕಿನಲ್ಲಿ ನಡೆದ ಘಟನೆಯೊಂದನ್ನು ಪ್ರೇರಣೆಯಾಗಿಟ್ಟುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ. ಎರಡೂವರೆ ಗಂಟೆಗಳ ಕಾಲ ಜನರನ್ನು ಮನರಂಜಿಸುವ ಎಲ್ಲಾ ರೀತಿಯ ಅಂಶಗಳು ಈ ಸಿನಿಮಾದಲ್ಲಿವೆ." ಎನ್ನುತ್ತಾರೆ ಶ್ರೀಕಾಂತ್.

ರಾಘವ್ ರಮಣ ಮತ್ತು ಸಂಜನಾ ಬುರ್ಲಿ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ನವನೀರ್ ಚಾರಿ ಟ್ಯೂನ್ ಹಾಕಿದ ಹಾಡುಗಳಿಗೆ ಅನುರಾಧಾ ಭಟ್, ಸೋನು ನಿಗಮ್, ನವೀನ್ ಸಜ್ಜು ಹಾಡಿದ್ದಾರೆ. ರಾಘವ, ಸಂಜನಾ ಬುರ್ಲಿ ಜೊತೆ ಯಮುನಾ ಶ್ರೀನಿಧಿ, ಲತಾ ಗಿರೀಶ್, ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು, ಗುರು ಹೆಗಡೆ ಮತ್ತು ನಿರ್ಮಾಪಕ ಯಶಸ್ವಿ ಶಂಕರ್ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಇದೇ ವಾರ ಅಂದರೆ, ಜೂನ್ 2ರಂದು ರಿಲೀಸ್ ಆಗುತ್ತಿದೆ.

More from Filmibeat

English summary
Puttakkana Makkalu fame Sanjana Burli, Raghav Starrer Radha Searching Ramana Missing releasing on June 2nd, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X