Karnataka Bandh:ಕರ್ನಾಟಕ ಬಂದ್‌ಗೆ ಪಿವಿಆರ್, ಐನಾಕ್ಸ್ ಬೆಂಬಲವಿಲ್ಲ; ಸಿಂಗಲ್ ಸ್ಕ್ರೀನ್‌ಗಳು ಕ್ಯಾರೇ ಅಂದಿಲ್ಲ!

By ಫಿಲ್ಮಿಬೀಟ್ ಡೆಸ್ಕ್

ಕರ್ನಾಟಕದ ಗಡಿ ಭಾಗದಲ್ಲಿ ಮರಾಠಿ ಪುಂಡರು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಅನ್ನು ತಡೆದು ನಿಲ್ಲಿಸಿ, ಚಾಲಕರ ಮುಖಕ್ಕೆ ಮಸಿಯನ್ನು ಬಳಿದು ಅಟ್ಟಹಾಸ ಮೆರೆದಿದ್ದರು. ಇದು ಕನ್ನಡ ಪರ ಹೋರಾಟಗಾರರ ಕಣ್ಣುಗಳನ್ನು ಕೆಂಪಾಗಿಸಿತ್ತು. ಈ ಸಂಬಂಧ ಹೋರಾಟಗಾರರು ಕರ್ನಾಟಕ ಬಂದ್‌ಗೆ ಕರೆಯನ್ನು ನೀಡಿದ್ದರು. ಅದರಂತೆ ನಾಳೆ (ಮಾರ್ಚ್ 22) ಕರ್ನಾಟಕದಾದ್ಯಂತ ಬಂದ್ ಮಾಡುವುದಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಬಂದ್‌ಗೆ ಕೆಲವು ಸಂಘಟನೆಗ ಬೆಂಬಲವನ್ನು ಸೂಚಿಸಿವೆ. ಇನ್ನು ಕೆಲವು ಬೆಂಬಲ ನೀಡಿಲ್ಲ. ಹಾಗೇ ಕನ್ನಡ ಚಿತ್ರರಂಗ ಕೂಡ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದೆ. ಆದರೆ, ಚಿತ್ರೀಕರಣವನ್ನು ಬಂದ್ ಮಾಡುವುದಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಪ್ರತಿಕಾಗೋಷ್ಠಿಯಲ್ಲಿ ಹೇಳಿದ್ದರು. ಚಿತ್ರಮಂದಿರಗಳು ಮಾರ್ನಿಂಗ್ ಶೋ ಪ್ರದರ್ಶನ ಮಾಡುವುದಿಲ್ಲ. ಆದರೆ, ಮಧ್ಯಾಹ್ನದ ಶೋನಿಂದ ಯತಾವತ್ತಾಗಿ ಪ್ರದರ್ಶನ ಕಾಣುತ್ತವೆ ಎಂದಿದ್ದರು.

PVR Inox cinepolis not supporting Karnataka Bandh Kannada film makers show angry

ಆದ್ರೀಗ ಮಲ್ಟಿಪ್ಲೆಕ್ಸ್‌ನಿಂದ ಹಿಡಿದು ಕೆಲವು ಸಿಂಗಲ್ ಸ್ಕ್ರೀನ್‌ಗಳು ಮಾರ್ನಿಂಗ್ ಶೋದಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡುತ್ತಿವೆ. ಬುಕ್ ಮೈ ಶೋನಲ್ಲಿ ಎಲ್ಲಾ ಭಾಷೆಯ ಸಿನಿಮಾಗಳಿಗೆ ಟಿಕೆಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಹಾಗಿದ್ದರೆ, ಕರ್ನಾಟಕ ಬಂದ್‌ಗೆ ಮಲ್ಪಿಪ್ಲೆಕ್ಸ್‌ ಬೆಂಬಲ ನೀಡಿಲ್ಲವೇ? ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಿದ್ದು ಕೇವಲ ಸಿಂಗಲ್‌ ಸ್ಕ್ರೀನ್‌ಗಳಿಗೆ ಮಾತ್ರನಾ? ಕೆಲವೆಡೆ ಸಿಂಗಲ್ ಸ್ಕ್ರೀನ್‌ಗಳಲ್ಲೂ ಮಾರ್ನಿಂಗ್ ಶೋ ಇದೆಯಲ್ಲ ಯಾಕೆ? ಅನ್ನೋ ಪ್ರಶ್ನೆಗೆ ಸಿನಿಮಾ ಮಂದಿಗೆ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

Karnataka Bandh: ಚಿತ್ರರಂಗ ಬಂದ್ ಮಾಡಲ್ಲ, ಕನ್ನಡ ಹೋರಾಟಗಾರರಿಗೆ ಬೆಂಬಲ: ಕನ್ನಡ ಫಿಲ್ಮ್ ಚೇಂಬರ್
ಕನ್ನಡಪರ ಸಂಘಟನೆಗಳು ಕರೆದಿರುವ ಬಂದ್‌ಗೆ ಥಿಯೇಟರ್‌ ಮಾಲೀಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬುಕ್‌ ಮೈ ಶೋ ಪ್ರಕಾರ, ಬೆಂಗಳೂರು, ಮೈಸೂರು ಭಾಗಗಳಲ್ಲಿರುವ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳು ಬೆಳಗ್ಗೆ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿವೆ. ಬುಕ್ ಮೈ ಶೋನಲ್ಲಿ 9.30, 10 ಹಾಗೂ 11 ಗಂಟೆಯ ಶೋಗಳ ಬುಕಿಂಗ್‌ ಅನ್ನು ಓಪನ್ ಮಾಡಲಾಗಿದೆ. ಇದರಲ್ಲಿ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳು ಹೆಚ್ಚಾಗಿ ಕಾಣಿಸುತ್ತಿವೆ. ಪಿವಿಆರ್, ಐನಾಕ್ಸ್‌ ಸ್ಕ್ರೀನ್‌ಗಳು ಮಾರ್ನಿಂಗ್ ಶೋ ಅನ್ನು ರದ್ದು ಮಾಡಿಲ್ಲ.

PVR Inox cinepolis not supporting Karnataka Bandh Kannada film makers show angry

ಹಾಗಂತ ಕೇವಲ ಮಲ್ಟಿಪ್ಲೆಕ್ಸ್ ಅಷ್ಟೇ ಅಲ್ಲ. ಸಿಂಗಲ್ ಸ್ಕ್ರೀನ್‌ಗಳು ಕೂಡ ಮಾರ್ನಿಂಗ್ ಶೋ ರದ್ದು ಮಾಡಿಲ್ಲ. ಬುಕ್ ಮೈ ಶೋನಲ್ಲಿ ಕೆಲವು ಸಿಂಗಲ್ ಸ್ಕ್ರೀನ್‌ಗಳಲ್ಲಿಯೂ ಟಿಕೆಟ್ ಬುಕಿಂಗ್ ಮಾಡಲಾಗಿದೆ. ಹಾಗಿದ್ದರೆ, ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿಲ್ಲವೇ. ಫಿಲ್ಮ್ ಚೇಂಬರ್ ಅಧ್ಯಕ್ಷಕರು ಹೇಳಿದ ಮಾತಿಗೆ ಪ್ರದರ್ಶಕರಿಂದ ಬೆಂಬಲ ಇಲ್ಲವೇ? ಅಂತ ಸಿನಿಮಾ ಮಂದಿಗೆ ಮಾತಾಡಿಕೊಳ್ಳುತ್ತಿದ್ದಾರೆ.

More from Filmibeat

English summary
PVR Inox cinepolis not supporting Karnataka Bandh Kannada film makers show angry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X