PVR INOXನಿಂದ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಸಿನಿಮಾ ಹಾಲ್; ವಿಶೇಷತೆಯೇನು?

ಭಾರತದ ಅತೀ ದೊಡ್ಡ ಸಿನಿಮಾ ಪ್ರದರ್ಶಕರು ಪಿಸಿಆರ್ ಹಾಗೂ ಐನಾಕ್ಸ್. ಈ ಮಲ್ಟಿಪ್ಲೆಕ್ಸ್ ಚೈನ್ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಸಿನಿಮಾ ಹಾಲ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಬೆಂಗಳೂರಿನ ಫಿನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಸಿನಿಮಾ ಹಾಲ್ ಅನ್ನು ಲಾಂಚ್ ಮಾಡಲಾಗುತ್ತಿದೆ.

ಸುಮಾರು 14 ಮೆಗಾಪ್ಲೆಕ್ಸ್ ಸ್ಕ್ರೀನ್‌ಗಳನ್ನು ಬೆಂಗಳೂರಿನ ಅತೀ ದೊಡ್ಡ ಹಾಗೂ ಐಷಾರಾಮಿ ಮಾಲ್‌ಗಳಲ್ಲಿ ಪರಿಚಯಿಸುವುದಕ್ಕೆ ಪಿವಿಆರ್ ಐನಾಕ್ಸ್ ಮುಂದಾಗಿದೆ. ಮೂರು ಫಾರ್ಮೆಟ್ಸ್‌ನಲ್ಲಿ ಸ್ಕ್ರೀನ್‌ಗಳನ್ನು ಸಿನಿಮಾ ಪ್ರಿಯರಿಗೆ ಪರಿಚಯಿಸಲಾಗುತ್ತಿದೆ. ಎಂಎಕ್ಸ್‌4ಡಿ, ಸ್ಕ್ರೀನ್‌ಎಕ್ಸ್ ಮತ್ತು ಇನ್‌ಸಿಗ್ನಿಯಾದಂತಹ ಐಷಾರಾಮಿ ಸ್ಕ್ರೀನ್‌ಗಳನ್ನು ಪರಿಚಯ ಮಾಡಲಾಗುತ್ತಿದೆ.

PVR INOX launching south India s largest cinema in Bengaluru MX4D ScreenX Insignia

ಎಂಎಕ್ಸ್‌4ಡಿ ಸ್ಕ್ರೀನ್‌ನಲ್ಲಿ 4ಡಿ ಸಿನಿಮಾ ಎಕ್ಸ್‌ಪೀರಿಯನ್ಸ್ ಮಾಡಬಹುದಾಗಿದೆ. ಅದೇ ಸ್ಕ್ರೀನ್ ಎಕ್ಸ್‌ನಲ್ಲಿ 270 ಡಿಗ್ರಿಯಲ್ಲಿ ಸಿನಿಮಾವನ್ನು ನೋಡುವ ಅನುಭವ ಪ್ರೇಕ್ಷಕರಿಗೆ ಸಿಗಲಿದೆ. ಇಂತಹ ಸ್ಕ್ರೀನ್‌ಗಳನ್ನು ಹೆಚ್ಚಿಸುವುದರಿಂದ ಪಿವಿಆರ್ ಹಾಗೂ ಐನಾಕ್ಸ್ ಬೆಂಗಳೂರಿನಲ್ಲಿ ಮತ್ತಷ್ಟು ಪ್ರಬಲವಾಗಿ ಹೆಜ್ಜೆ ಇಡುವುದಕ್ಕೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಸುಮಾರು 26 ಸಿನಿಮಾ ಹಾಲ್‌ಗಳಿಂದ 172 ಸ್ಕ್ರೀನ್‌ಗಳಲ್ಲಿ ವಿಸ್ತರಣೆ ಮಾಡಲಾಗಿದೆ. ಅದೇ ಕರ್ನಾಟಕದಾದ್ಯಂತ ಸುಮಾರು 37 ಸಿನಿಮಾಗಳಿಂದ 219 ಸ್ಕ್ರೀನ್‌ಗಳಲ್ಲಿ ಈ ಯೋಜನೆಯನ್ನು ವಿಸ್ತರಣೆ ಮಾಡಲಿದೆ. ಹಾಗೇ ದಕ್ಷಿಣ ಭಾರತದಾದ್ಯಂತ ಪಿವಿಆರ್ ಐನಾಕ್ಸ್ ತನ್ನ 100 ಪ್ರಾಪರ್ಟಿಗಳಲ್ಲಿ 572 ಸ್ಕ್ರೀನ್‌ಗಳನ್ನು ಈ ಯೋಜನೆಗೆ ಒಳಪಡಿಸಲಿದೆ.

ಬೆಂಗಳೂರಿನ ಹೊರವಲಯದಲ್ಲಿ ಸುಮಾರು 14 ಸ್ಕ್ರೀನ್‌ಗಳಲ್ಲಿ ಮೆಗಾಪ್ಲೆಕ್ಸ್ ಸಿನಿಮಾಗಳಿವೆ. ಹೊಸ ಸಿನಿಮಾ ಹಾಲ್‌ಗಳು ಥಿಯೇಟರ್‌ ಟೆಕ್ನಾಲಜಿಗಳನ್ನು ಅಳವಡಿಸಿದ್ದು, 1,997 ಪ್ರೇಕ್ಷಕರು ಕೂರುವಂತಹ ಸೀಟಿಂಗ್ ಕ್ಯಾಪಸಿಟಿಯನ್ನು ಅವಳವಡಿಸಲಾಗಿದೆ. 4K ಲೇಸರ್ ಪ್ರೊಜೆಕ್ಷನ್, ಅಡ್ವಾನ್ಸ್ ಡಾಲ್ಬಿ ಅಟ್ಮೋಸ್, ವೊಲ್ಫೋನಿ 3ಡಿ ಸ್ಕ್ರೀನ್ಸ್ ಅಂತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೆ ಪಿವಿಆರ್ ಹಾಗೂ ಐನಾಕ್ಸ್ ಹೊಸ ತಂತ್ರಜ್ಞಾನಗಳನ್ನು ಬಳಸಿ ಅದ್ಭುತ ಸಿನಿಮಾ ಎಕ್ಸ್‌ಪಿರಿಯನ್ಸ್ ನೀಡುವುದಕ್ಕೆ ಪಣತೊಟ್ಟು ನಿಂತಿದೆ. ಸದ್ಯ ಫಿನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಮೆಗಾಪ್ಲೆಕ್ಸ್ ಅನ್ನು ಲಾಂಚ್ ಮಾಡಲಿದ್ದು,ಸಿನಿಪ್ರಿಯರಿಗೆ ಹೊಸ ಅನುಭವ ನೀಡಲಿದೆ.

More from Filmibeat

English summary
PVR INOX launching south India's largest cinema in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X