For Quick Alerts
  ALLOW NOTIFICATIONS  
  For Daily Alerts

  'ಅನಿಲ್-ಉದಯ್' ಕುಟುಂಬಕ್ಕೆ ತಲಾ 1 ಲಕ್ಷ ನೀಡಿದ ಆರ್.ಚಂದ್ರು

  By Bharath Kumar
  |

  'ಮಾಸ್ತಿಗುಡಿ' ಚಿತ್ರದ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ನಿರ್ದೇಶಕ ಆರ್.ಚಂದ್ರು ಸಹಾಯ ಹಸ್ತ ನೀಡಿದ್ದಾರೆ. ಡಿಸೆಂಬರ್ 13, ಮಂಗಳವಾರ ಬೆಳಿಗ್ಗೆ ಉದಯ್ ಅವರ ಮನೆಗೆ ತೆರಳಿದ್ದ ಆರ್.ಚಂದ್ರು, ಅವರ ತಂದೆ-ತಾಯಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ.

  ಇನ್ನೂ, ದುರಂತದಲ್ಲಿ ಸಾವುಗೀಡಾಗಿದ್ದ ಮತ್ತೊಬ್ಬ ಖಳನಟ ಅನಿಲ್ ಅವರ ಮನೆಗೂ ಭೇಟಿ ನೀಡಿ, ಅವರಿಗೂ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡುವ ಮೂಲಕ ನೆರವಾಗಿದ್ದಾರೆ.

  ಸದ್ಯ, ಆರ್.ಚಂದ್ರು 'ಕನಕ' ಚಿತ್ರವನ್ನ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದಾರೆ. ಇನ್ನೂ ಅನಿಲ್ ಹಾಗೂ ಉದಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಇಬ್ಬರಿಗೂ ಆರ್.ಚಂದ್ರು ಪಾತ್ರಗಳನ್ನ ಫಿಕ್ಸ್ ಮಾಡಿದ್ರಂತೆ. ಆದ್ರೆ, ಈಗ ಆ ಪಾತ್ರಗಳನ್ನ ಬೇರೆಯವರು ಮಾಡಬೇಕಾಗಿದೆ.[ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!]

  R Chandru Help To Anil and Uday Family

  ವಿಶೇಷ ಅಂದ್ರೆ, 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಅವರು ಮಾಡಬೇಕಿದ್ದ ಪಾತ್ರಗಳಿಗೆ, ಅವರ ಹೆಸರನ್ನೇ ಬಳಸಿಕೊಳ್ಳಲು ಆರ್.ಚಂದ್ರು ನಿರ್ಧಾರ ಮಾಡಿದ್ದಾರೆ.

  English summary
  Kannada Director R Chandru help to anil and uday family who was dead during Mastigudi shooting. R Chandru donated one lakh rupees each to the families of Anil and Uday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X