ಸಹಾಯಕನ ಕೂರಿಸಿಕೊಂಡು ಟಿವಿಎಸ್ ಓಡಿಸಿದ ರಚಿತಾ ರಾಮ್; ಹಿಂದೆ ಕೂತಿದ್ದ ಅಣ್ಣನ ನೋಡಿ ನೆಟ್ಟಿಗರಿಗೆ ಹೊಟ್ಟೆ ಉರಿ!

ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟಿಸುತ್ತಿರುವ 'ಕಲ್ಟ್' ಸಿನಿಮಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಕೆಲವು ದಿನಗಳಿಂದ ಈ ಸಿನಿಮಾ ವಿವಾದದಲ್ಲಿ ಸಿಲುಕಿತ್ತು. ಕಳೆದ ಕೆಲವು ದಿನಗಳಿಂದ ಹಂಪಿಯ ಸುತ್ತಮುತ್ತ ಚಿತ್ರೀಕರಣವನ್ನು ಮಾಡುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಿನಿಮಾದ ದೃಶ್ಯ ಚಿತ್ರೀಕರಿಸುವಾಗ ಬೆಂಕಿಯನ್ನು ಉಪಯೋಗಿಸಿದ್ದಕ್ಕೆ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದರು. ಇದು ವಿವಾದಕ್ಕೆ ತಿರುಗಿತ್ತು.

ಇದೇ ಕಲ್ಟ್ ಸಿನಿಮಾದಲ್ಲಿ ಝೈದ್ ಖಾನ್‌ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾರೆ. ಇವರ ದೃಶ್ಯಗಳನ್ನು ಹಂಪಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ವೇಳೆ ರಚಿತಾ ರಾಮ್ ಟಿವಿಎಸ್‌ ಓಡಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ವೈರಲ್ ಆಗುತ್ತಿರುವುದಕ್ಕೆ ಕಾರಣ ಹಿಂದೆ ಕೂತಿದ್ದ ವ್ಯಕ್ತಿ. ನೆಟ್ಟಿಗರು ಈ ವಿಡಿಯೋ ನೋಡಿ ರಚಿತಾ ರಾಮ್ ಹೊಗಳಿದ್ದಕ್ಕಿಂತ ಹಿಂದೆ ಕೂತಿದ್ದ ಅಣ್ಣನ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ.

Rachita Ram enjoying Hampi hippie vibes on tvs moped with her assistant watch video

'ಕಲ್ಟ್' ಸಿನಿಮಾದಲ್ಲಿ ರಚಿತಾ ರಾಮ್ ಸಿಂಪಲ್ ಕನ್ನಡದ ಹುಡುಗಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮರೂನ್ ಸೀರೆಯುಟ್ಟು ಅಪ್ಪಟ ಕನ್ನಡದ ಯುವತಿಯ ಅವತಾರದಲ್ಲಿ ಡಿಂಪಲ್ ಕ್ವೀನ್ ಲುಕ್ ಕೊಟ್ಟಿದ್ದಾರೆ. ಹೀಗಾಗಿ 'ಕಲ್ಟ್' ಸಿನಿಮಾದಲ್ಲಿ ಅವರ ಪಾತ್ರ ಡಿಸೆಂಟ್ ಆಗಿರುತ್ತೆ ಅನ್ನೋದನ್ನು ಗೆಸ್ ಮಾಡಬಹುದು. ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಟಿವಿಎಸ್ ಓಡಿದ ವಿಡಿಯೋ ಬಗ್ಗೆ ಚರ್ಚೆಯಾಗುತ್ತಿದೆ. ಅದೇನು ಅಂತ ನೋಡುವುದಾರೇ..

ರಚಿತಾ ರಾಮ್ ಟಿವಿಎಸ್ ಓಡಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ತಮ್ಮ ಊರಿನಲ್ಲಿ ಶೂಟಿಂಗ್ ನಡೀತಿದೆ ಅಂತ ಖುಷಿ ವ್ಯಕ್ತ ಪಡಿಸಿದ್ದಾರೆ. ಅಂದ್ಹಾಗೆ ನೆಟ್ಟಿಗರ ಕಾಮೆಂಟ್ ಪ್ರಕಾರ, ರಚಿತಾ ರಾಮ್ ಅವರ ದೃಶ್ಯಗಳನ್ನು ಗಂಗಾವತಿ ಸಮೀಪ ಅಂಜನಾದ್ರಿ ಬೆಟ್ಟದ ಹತ್ತಿರವಿರುವ ಜಂಗ್ಲಿ ರಸ್ತೆಯಲ್ಲಿ ನಡೆಯುತ್ತಿದೆ ಅಂತ ಅವರೇ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ರಚಿತಾ ರಾಮ್ ತಮ್ಮೂರಿಗೆ ಶೂಟಿಂಗ್‌ಗೆ ಬಂದಿದ್ದಾರೆ ಅನ್ನೋ ವಿಷಯ ಗೊತ್ತಾಗುತ್ತಿದ್ದಂತೆ ಜನರು ಕಿಕ್ಕಿರಿದು ಸೇರಿದ್ದರು. ಅವರ ಅಭಿನಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರರಾಗಿದ್ದರು. ಅಲ್ಲದೇ ಇದ್ದವರು ರಚಿತಾ ರಾಮ್ ತಮ್ಮ ಸಹಾಯಕನನ್ನು ಟಿವಿಎಸ್‌ ಮೊಪೆಡ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವಿಡಿಯೋವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದೇ ವಿಡಿಯೋಗೆ ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡಲಾಗುತ್ತಿದೆ.

"ನಮ್ಮ ಹುಡುಗಿ ನಮ್ಮ ಕಡೆ ಶೂಟಿಂಗ್ ಮಾಡ್ತಾ ಇದ್ರೆ ನಮಗೂ ತುಂಬಾ ಖುಷಿ ಆಗುತ್ತೆ" ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ನಾವು ಶಾಲೆಗೆ ಹೋಗ್ತಿದ್ದಾಗ ನಮ್ ಊರು ಜಂಗ್ಲಿ ಅಂದ್ರೆ ನಗ್ತಿದ್ರು.. but ಇವಾಗ ಎಷ್ಟು ಫೇಮೆಸ್ ಅಂದ್ರೆ, ನಾವು ಎಲ್ಲೇ ಇದ್ರೂ ನಮ್ಮ ಊರು ಹೆಸರು ಕೇಳಿ ಖುಷಿ ಆಗೋವಷ್ಟು ಫೇಮೆಸ್ ಆಗ್ತಿದೆ." ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತಮ್ಮ ಊರಿನಲ್ಲಿ ಶೂಟಿಂಗ್ ಆಗುತ್ತಿರುವುದರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Rachita Ram enjoying Hampi hippie vibes on tvs moped with her assistant. Watch video;
Read more about: rachita ram actress video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X