Don't Miss!
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಪಾತ್ರವನ್ನು ರಚಿತಾ ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದ ರಕ್ಷಿತಾ: ರಮ್ಯಾ, ರಾಧಿಕಾರನ್ನು ನೆನೆದಿದ್ದೇಕೆ?
ಜೋಗಿ ಪ್ರೇಮ್ ನಿರ್ದೇಶನ, ರಕ್ಷಿತಾ ನಿರ್ಮಾಣ, ರಚಿತಾ ರಾಮ್ ನಟನೆ. ಮೂವರು ದಿಗ್ಗಜರು ಒಟ್ಟಿಗೆ ಸೇರಿ ಮಾಡಿದ ಸಿನಿಮಾವೇ 'ಏಕ್ ಲವ್ ಯಾ'. ಪ್ರೇಮ್ ಸಿನಿಮಾ ಅಂದಮೇಲೆ ಹಾಡುಗಳಿಗೆ ಬರವಿರಲ್ಲ. ಆ ಹಾಡುಗಳು ಕೇಳುಗರಿಗೂ ಇಷ್ಟ ಆಗುತ್ತೆ. ಈಗಾಗಲೇ 'ಏಕ್ ಲವ್ ಯಾ' ಸಿನಿಮಾದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಗೇ ಐದನೇ ಸಾಂಗ್ ಅನ್ನೂ ಇಡೀ ಟೀಮ್ ಸೇರಿ ಬಿಡುಗಡೆ ಮಾಡಿದೆ.
'ಏಕ್ ಲವ್ ಯಾ' ಸಿನಿಮಾದ ಒಂದೊಂದು ಹಾಡು ಒಂದು ಜಿಲ್ಲೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ರೇಮ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ 5ನೇ ಸಾಂಗ್ ಅನ್ನು ಮಲೆನಾಡು ಶಿವಮೊಗ್ಗದಲ್ಲಿ ರಿಲೀಸ್ ಮಾಡಿದೆ ಚಿತ್ರತಂಡ. ಈ ವೇಳೆ ನಿರ್ಮಾಪಕಿ ರಕ್ಷಿತಾ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ರಚಿತಾ ರಾಮ್ ಪಾತ್ರದ ಬಗ್ಗೆ, ರಮ್ಯಾ, ರಾಧಿಕಾ ಬಗ್ಗೆನೂ ರಕ್ಷಿತಾ ಮಾತಾಡಿದ್ದಾರೆ. ಹಾಗಿದ್ದರೆ, ಶಿವಮೊಗ್ಗದಲ್ಲಿ ರಕ್ಷಿತಾ ಏನು ಹೇಳಿದ್ದಾರೆ ಅಂತ ತಿಳಿಯಲು ಮುಂದೆ ಓದಿ.

ರಚಿತಾ ಬಿಟ್ಟರೆ ಯಾರಿಂದಲೂ ಈ ಪಾತ್ರ ಸಾಧ್ಯವಿಲ್ಲ
'ಏಕ್ ಲವ್ ಯಾ' ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪಾತ್ರ ಹೈಲೈಟ್. ಈ ಪಾತ್ರಕ್ಕಾಗಿ ರಚಿತಾ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಹಾಟ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಎರಡೂ ಶೇಡ್ ಇರುವಂತಹ ಈ ಪಾತ್ರ ಡಿಂಪಲ್ ಕ್ವೀನ್‌ನಿಂದ ಮಾತ್ರ ಮಾಡಲು ಸಾಧ್ಯವೆಂದು ರಕ್ಷಿತಾ ಪ್ರೇಮ್ ತಿಳಿಸಿದ್ದಾರೆ. "ತುಂಬಾನೇ ಕಷ್ಟ ಇಂತಹ ಪಾತ್ರ ಮಾಡುವುದಕ್ಕೆ, ಬಹುಶ: ನಾವು ಬೇರೆ ಯಾವುದೇ ಹೀರೋಯಿನ್ ಅನ್ನು ತೆಗೆದುಕೊಂಡಿದ್ದರೂ ಅದು ಸರಿಯಾದ ನಿರ್ಧಾರ ಆಗಿರುತ್ತಿರಲಿಲ್ಲ. ನಾನು ಜೋಕ್ ಮಾಡುತ್ತಿಲ್ಲ." ಎಂದು ರಚಿತಾ ರಾಮ್‌ರನ್ನು ಹಾಡಿಹೊಗಳಿದ್ದಾರೆ.

ಹಾಡುಗಳು ಗೆಲ್ಲಲು ರಚಿತಾನೇ ಕಾರಣ
ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಹಾಡುಗಳು ಹೀಗಾಗಲೇ ಹಿಟ್ ಆಗಿದೆ. ಅದರಲ್ಲೂ, ಎಣ್ಣೆಗೂ ಹೆಣ್ಣಿಗೂ ಹಾಗೂ ಡೇಟ್ ಮಾಡಣ ಈ ಎರಡುಗಳು ಗೆಲ್ಲಲು ರಚಿತಾನೇ ಕಾರಣ ಅಂತ ರಕ್ಷಿತಾ ಹೇಳಿದ್ದಾರೆ. " ಎಲ್ಲರೂ ಹೇಳ್ತಾರೆ ಎಣ್ಣೆಗೂ ಹೆಣ್ಣಿಗೂ ಇರಬಹುದು. ಮೀಟ್ ಮಾಡಣ, ಡೇಟ್ ಮಾಡಣ ಇರಬಹುದು. ತುಂಬಾ ಬೋಲ್ಡ್ ಆಗಿ ಮಾಡಿದ್ದೀರಾ. ಆದರೆ, ನಾವು ನಿಮಗೆ ಸಿನಿಮಾ ಆಫರ್ ಮಾಡಬಹುದು. ಆದರೆ ನೀವು ಹೇಗೆ ನಟಿಸುತ್ತೀರಾ?, ಅದೆಷ್ಟು ಅದ್ಭುತವಾಗಿರುತ್ತೆ? ಅನ್ನುವುದರಿಂದ ಒಂದು ಸಾಂಗ್ ಹಿಟ್ ಆಗುತ್ತೆ. ಅದಕ್ಕೆ ನೀವೊಬ್ಬರೇ ಕಾರಣ. ನಾವು ಯಾರೂ ಕಾರಣರಲ್ಲ. ನೀವು ಅಷ್ಟು ಉತ್ತಮ ಕೆಲಸ ಮಾಡಿದ್ದೀರ." ಎಂದು ರಕ್ಷಿತಾ ಪ್ರೇಮ್ ವೇದಿಕೆ ಮೇಲೆ ರಚಿತಾ ರಾಮ್‌ರನ್ನು ಹಾಡಿ ಹೊಗಳಿದ್ದಾರೆ.

ರಮ್ಯಾ ರಾಧಿಕಾ ನೆನೆದ ರಕ್ಷಿತಾ
'ಏಕ್ ಲವ್ ಯಾ' ಸಿನಿಮಾದ ಐದನೇ ಹಾಡು ಬಿಡುಗಡೆ ಮಾಡುವ ವೇಳೆ ಮೋಹ ತಾರೆ ರಮ್ಯಾ ಹಾಗೂ ರಾಧಿಕಾರನ್ನೂ ನೆನಪಿಸಿಕೊಂಡಿದ್ದಾರೆ. "ರಕ್ಷಿತಾ, ರಮ್ಯಾ, ರಾಧಿಕಾ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೂ ರೂಲ್ ಮಾಡಿದ್ದಾರೆ. ಅಂತಹದ್ದೊಂದು ಜನರೇಷನ್ ಇತ್ತು. ಈಗ ರಚಿತಾ ರಾಮ್ ರೂಲ್ ಮಾಡುತ್ತಿದ್ದಾರೆ. ನನ್ನ ಸಿನಿಮಾದಲ್ಲಿ ರಚಿತಾ ರಾಮ್ ಕೂಡ ಒಂದು ಭಾಗವಾಗಿದ್ದಕ್ಕೆ ನಾನು ಖುಷಿಯಾಗಿದ್ದೇನೆ." ಎಂದು ರಕ್ಷಿತಾ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

'ಏಕ್ ಲವ್ ಯಾ' ಸಾಂಗ್ ಹಿಟ್
ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಹಾಡುಗಳು ಸದ್ದು ಮಾಡುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ 5 ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ಅದರಲ್ಲೂ ಮಂಗ್ಲಿ ಹಾಡಿದ ಎಣ್ಣೆಗೂ ಹೆಣ್ಣಿಗೂ ಸಾಂಗ್ ದಾಖಲೆಗಳನ್ನು ಬರೆದಿದೆ. ಇನ್ನೊಂದೆಡೆ 5 ನೇ ಹಾಡು ಮೀಟ್ ಮಾಡಣ, ಇಲ್ಲಾ ಡೇಟ್ ಮಾಡಣ ಸಾಂಗ್ ಕೂಡ ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತಿದೆ.