ಎಣ್ಣೆಗೂ ಹೆಣ್ಣಿಗೂ ಎಲ್ಲಿದೆ ಲಿಂಕು ಹೇಳೋ ಭಗವಂತಾ: ರಚಿತಾ ಎಣ್ಣೆ ಪಾಠ

ಕಳೆದೊಂದು ವಾರದಿಂದ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಭಾರಿ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಲವ್ ಯು ರಚ್ಚು ಸಿನಿಮಾದಲ್ಲಿ ಫಸ್ಟ್ ನೈಟ್ ಪಾಠ ಮಾಡಿ ರಚಿತಾ ರಾಮ್ ಸುದ್ದಿಯಾಗಿದ್ದರು. ಲವ್ ಯು ರಚ್ಚು ಸಿನಿಮಾದ ಹಾಡಿನ ಒಂದು ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಿ ಸುದ್ದಿಯಾಗಿದ್ದರು. ಈಗ ಎಣ್ಣೆ ಬಾಟಲಿ ಹಿಡಿದು ಲೇಡಿ ದೇವದಾಸ್ ಲುಕ್ ಕೊಟ್ಟಿದ್ದಾರೆ.

Recommended Video

ಯುವಕರ ನಿದ್ದೆಕೆಡಿಸಿದ ರಚಿತಾ ರಾಮ್ | Rachitha Ram | Ek Love Ya

ಜೋಗಿ ಪ್ರೇಮ್ ನಿರ್ದೇಶನದ ಏಕ್‌ ಲವ್ ಯಾ ಸಿನಿಮಾ ಹೊಚ್ಚ ಹೊಸ ಹಾಡು ರಿಲೀಸ್ ಆಗಿದೆ. ಕೆಲವು ದಿನಗಳ ಹಿಂದೆನೇ ಈ ಹಾಡು ರಿಲೀಸ್ ಆಗಬೇಕಿತ್ತು. ಆದರೆ, ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ನಿಧನದ ಬಳಿಕ ಇಡೀ ಕನ್ನಡ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿತ್ತು. ಕೋಟ್ಯಂತರ ಅಭಿಮಾನಿಗಳು ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದರು. ಇಂತಹ ಸಂದರ್ಭದಲ್ಲಿ ಏಕ್ ಲವ್ ಯಾ ಹಾಡನ್ನು ರಿಲೀಸ್ ಮಾಡದೆ ಇರಲು ಪ್ರೇಮ್ ನಿರ್ಧರಿಸಿದ್ದರು. ಇಂದು (ನವೆಂಬರ್ 12) ಎಣ್ಣೆ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡಲ್ಲಿ ರಚಿತಾ ಎಣ್ಣೆ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ ಅಂತ ಕೈ ಯಲ್ಲಿ ಬಾಟಲಿ ಹಿಡಿದು ತೂರಾಡುತ್ತಿದ್ದಾರೆ.

ಫಸ್ಟ್ ನೈಟ್ ಆಯ್ತು.. ಈಗ ಎಣ್ಣೆ ಪಾಠ

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ಸಖತ್ ಬೋಲ್ಡ್ ರೋಲ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಗೊತ್ತಿರುವ ಹಾಗೇ ಕಿಸ್ಸಿಂಗ್ ಸೀನ್ ಇದೆ. ಸ್ಮೋಕಿಂಗ್ ಸೀನ್ ಕೂಡ ಇದೆ.

rachita ram love failure song with rana sung by mangli in ek love ya film goes viral


ಈಗ ತಾನೇ ರಿಲೀಸ್ ಆಗಿರುವ ಮೂರನೇ ಹಾಡಿನಲ್ಲಿ ಎಣ್ಣೆ ಸಾಂಗ್ ಕೂಡ ಇದೆ. ಈ ಹಾಡಿನಲ್ಲಿ ರಚಿತಾ ರಾಮ್ ಎಣ್ಣೆ ಬಾಟಲಿಯನ್ನು ಕೈಯಲ್ಲಿ ಹಿಡಿದು ಭಗ್ನ ಪ್ರೇಮಿಗಳಿಗಳಿಗೆ ಎಣ್ಣೆ ಪಾಠ ಮಾಡುತ್ತಿದ್ದಾರೆ. ಸದ್ಯ ಈ ಹಾಡು ನೋಡಿ ರಚಿತಾ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಎಣ್ಣೆ ಸಾಂಗ್

ಸ್ಯಾಂಡಲ್‌ವುಡ್ ಮಟ್ಟಿಗೆ ಎಣ್ಣೆ ಸಾಂಗ್ ಏನು ಹೊಸತಲ್ಲ. ಯಾವುದಾದರೂ ಒಂದು ಸಿನಿಮಾದಲ್ಲಿ ಎಣ್ಣೆ ಹಾಡು ಬಂದೇ ಬರುತ್ತೆ. ಆದರೆ, ನಾಯಕಿಯರಿಗೆ ಅಂತಲೇ ನಿರ್ದೇಶಕರು ಎಣ್ಣೆ ಸಾಂಗ್ ಇಡುವುದು ತೀರಾ ವಿರಳ. ಮಾಲಾಶ್ರೀ ನಟಿಸಿದ ಕೂಗು ಕೋಳಿಗೆ ಖಾರ ಮಸಾಲೆ ಹಾಡು ಕೂಡ ಭಾರಿ ಫೇಮಸ್ ಆಗಿತ್ತು. ಅದರೂ, ಇಂತಹ ಬೋಲ್ಡ್ ಸಾಂಗ್ ಇಡಲು ನಿರ್ದೇಶಕರು ಹಿಂದೇಟು ಹಾಕಿದ್ದೂ ಇದೆ. ಈಗ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಮ್‌ ಎಣ್ಣೆ ಬಾಟಲಿ ಕೈಯಲ್ಲಿ ಹಿಡಿದು ಎಣ್ಣೆ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಅನ್ನುವ ತೂರಾಡುವ ಹಾಡು ಪಡ್ಡೆ ಹೈಕಳಿಗೆ ಕಿಕ್ ಕೊಡುತ್ತಿದೆ.

rachita ram love failure song with rana sung by mangli in ek love ya film goes viral

ಕಣ್ಣು ಹೊಡೆದಿದ್ದ ಮಂಗ್ಲಿಯಿಂದ ಎಣ್ಣೆ ಹಾಡು

ರಾಬರ್ಟ್ ಸಿನಿಮಾದಲ್ಲಿ ಕಣ್ಣು ಹೊಡೆಯಾಕಾ ಅಂತ ಹಾಡಿದ್ದ ತೆಲುಗು ಗಾಯಕಿ ಮಂಗ್ಲಿ ಈ ಎಣ್ಣೆ ಸಾಂಗಿಗೆ ಧ್ವನಿ ನೀಡಿದ್ದಾರೆ. ಮಂಗ್ಲಿ ಹಾಡು.. ರಚಿತಾ ಪಾಡು ಎರಡೂ ಸೇರಿ ಎಣ್ಣೆ ಪ್ರಿಯರಿಗೂ ಈ ಹಾಡು ಮಜಾ ಕೊಡುತ್ತಿದೆ. ಅರ್ಜುನ್ ಜನ್ಯ ಮಸ್ತ್ ಸಾಂಗ್‌ಗೆ ಟ್ಯೂನ್ ಹಾಕಿದ್ದಾರೆ. ಮಂಗ್ಲಿ ಜೊತೆಗೆ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಕೂಡ ಹಾಡಿದ್ದಾರೆ. ಸಾಹಿತ್ಯವನ್ನು ಹೇಳಿದರೆ, ಇದು ರಚಿತಾ ರಾಮ್ ಲವ್ ಬ್ರೇಕಪ್ ಸಾಂಗ್ ಅನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ.

rachita ram love failure song with rana sung by mangli in ek love ya film goes viral

ದೀಪಾವಳಿ ಹಬ್ಬದಂದೇ ಈ ಹಾಡು ಬಿಡುಗಡೆ ಆಗಬೇಕಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ನಿಧನದಿಂದ ಹಾಡಿನ ಬಿಡುಗಡೆಯನ್ನು ಮುಂದೂಡಿದ್ದರು. ಜೋಗಿ ಪ್ರೇಮ್ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪತ್ರ ಬರೆದು ಈ ಹಾಡನ್ನು ಮುಂದಿನ ದಿನದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. 'ಮೋಡ ಕವಿದ ಆಗಸ ಇನ್ನೂ ಸರಿ ಹೋಗಿಲ್ಲ. ಮೋಡದ ಮಧ್ಯೆ ಸೂರ್ಯನು ಇಣಿಕಿ ನೋಡುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ನಮ್ಮ ಏಕ್ ಲವ್ ಯಾ ಚಿತ್ರದ ಹಾಡಿನ ಸಂಭ್ರಮಾಚರಣೆ ಮಾಡಲು ಮನಸಾಗುತ್ತಿಲ್ಲ. ಆದ್ದರಿಂದ 4ನೇ ತಾರೀಖು ಬಿಡುಗಡೆಯಾಗಬೇಕಿದ್ದ ನಮ್ಮ ಚಿತ್ರದ ಹಾಡನ್ನು ಇದೇ ತಿಂಗಳು 12ನೇ ತಾರೀಖಿಗೆ ಮುಂದೂಡಲಾಗಿದೆ' ಎಂದು ಪೋಸ್ಟ್ ಮಾಡಿದ್ದರು. ಅದೇ ಹಾಡು ಇಂದು ( ನವೆಂಬರ್ 12) ಬಿಡುಗಡೆಯಾಗಿದೆ.

More from Filmibeat

English summary
Rachita Ram and Raana acted ek love ya film new song getting more views in youtube. Kannu hodeyaka song from the film Roberrt singer Mangli and Kailash Khair sung this song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X