Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀಕೆಂಡ್ ಕರ್ಫ್ಯೂ ಎಫೆಕ್ಟ್: ರಚಿತಾ ರಾಮ್ ಸಿನಿಮಾ 'ಏಕ್ ಲವ್ ಯಾ' ರಿಲೀಸ್ ಪೋಸ್ಟ್‌ಪೋನ್: ಬೆದರಿದ ಕನ್ನಡ ಸಿನಿಮಾಗಳ್ಯಾವುವು?
ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಘೋಷಣೆ ಮಾಡುತ್ತಿದ್ದಂತೆ ಕನ್ನಡ ಸಿನಿಮಾಗಳು ಒಂದೊಂದಾಗೇ ಸೈಲೆಂಟ್ ಮೋಡ್‌ಗೆ ಜಾರಿದೆ. ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದ ಸಿನಿಮಾಗಳೆಲ್ಲಾ ರಿಲೀಸ್ ಡೇಟ್ ಅನ್ನು ಮುಂದೂಡಲು ಆಲೋಚನೆ ಮಾಡುತ್ತಿವೆ. ಹೊಸ ವರ್ಷದ ಆರಂಭದಲ್ಲಿ ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗದೇ ಹೋದ್ರೂ, ಜನವರಿ ಕೊನೆಯ ಎರಡು ವಾರಗಳಲ್ಲಿ ಕನ್ನಡದ ಎರಡು ಪ್ರಮುಖ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿದ್ದವು.
Recommended Video
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ಹಾಗೂ ಲೂಸ್ ಮಾದ ಯೋಗಿ ನಟನೆಯ 'ಒಂಬತ್ತನೇ ದಿಕ್ಕು' ಈ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಆದ್ರೀಗ ವೀಕೆಂಡ್ ಕರ್ಫ್ಯೂ ಜಾರಿಗೆ ಆದೇಶ ನೀಡುತ್ತಿದ್ದಂತೆ ಒಂದೊಂದೇ ಸಿನಿಮಾಗಳು ಬಿಡುಗಡೆ ದಿನವನ್ನು ಮುಂದೂಡುತ್ತಿವೆ. ಸದ್ಯಕ್ಕೆ ಜೋಗಿ ಪ್ರೇಮ್ 'ಏಕ್ ಲವ್ ಯಾ' ಚಿತ್ರ ಬಿಡುಗಡೆ ದಿನವನ್ನು ಪೋಸ್ಟ್‌ಪೋನ್ ಮಾಡಲು ನಿರ್ಧರಿಸಿದ್ದಾರೆ.

'ಏಕ್ ಲವ್ ಯಾ' ಸಿನಿಮಾ ಪೋಸ್ಟ್‌ಪೋನ್
ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ 'ಏಕ್ ಲವ್ ಯಾ'. ಜೋಗಿ ಪ್ರೇಮ್ ತನ್ನ ಶೈಲಿಯ ಮೇಕಿಂಗ್ ಬಿಟ್ಟು, ಪಕ್ಕಾ ಲವ್ ಸ್ಟೋರಿ ಕಥೆ ಹೆಣೆದು ನಿರ್ದೇಶಿಸಿರುವ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ರಕ್ಷಿತಾ ಪ್ರೇಮ್ ಸಹೋದರನನ್ನು ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡುಲು ರಕ್ಷಿತಾ ಪ್ರೇಮ್ ನಿರ್ದೇಶಿಸಿರುವ ಚಿತ್ರ. ಈ ಕಾರಣಕ್ಕೆ 'ಏಕ್ ಲವ್ ಯಾ' ಚಿತ್ರ ಬಗ್ಗೆ ಎಲ್ಲರಿಗೂ ನಿರೀಕ್ಷೆಯಿತ್ತು. ಆದ್ರೀಗ ಕೊರೊನಾ ಸೋಂಕಿತರ ಸಂಖ್ಯೆ ದಿಢೀರನೇ ಹೆಚ್ಚಾಗುತ್ತಿದ್ದು, ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದರಿಂದ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆಯನ್ನು ಮುಂದೂಡಲು ಜೋಗಿ ಪ್ರೇಮ್ ನಿರ್ಧರಿಸಿದ್ದಾರೆ. " ಇದೇ ಜನವರಿ 21ಕ್ಕೆ 'ಏಕ್ ಲವ್ ಯಾ' ಬರುತ್ತೆ ಅಂತ ಎಲ್ಲಾ ಕಡೆ ಅನೌನ್ಸ್ ಮಾಡಿದ್ದೆವು. 'ಏಕ್ ಲವ್ ಯಾ' ರಿಲೀಸ್ ಆಗಬೇಕಿತ್ತು 21ಕ್ಕೆ. ಅದನ್ನು ಪೋಸ್ಟ್‌ಪೋನ್ ಮಾಡುತ್ತಿದ್ದೇವೆ. ನಿಮಗೆಲ್ಲರಿಗೂ ಗೊತ್ತೇ ಇದೆ. ರಾಜ್ಯ ಸರ್ಕಾರ ಒಂದು ಗೈಡ್‌ಲೈನ್ಸ್ ಬಿಟ್ಟಿದೆ. ಥಿಯೇಟರ್ 50 ಪರ್ಸೆಂಟ್, ಶನಿವಾರ, ಭಾನುವಾರ ಕರ್ಫ್ಯೂ ಅಂತ. ಆದ ಕಾರಣ 'ಏಕ್ ಲವ್ ಯಾ' ಸಿನಿಮಾವನ್ನು ಮುಂದೂಡಿದ್ದೇವೆ. " ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.

'ಏಕ್ ಲವ್ ಯಾ' ರಿಲೀಸ್ ಯಾವಾಗ?
ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇನ್ನೊಂದು ಕಡೆ ರಾಜ್ಯ ಸರ್ಕಾರ ಕೂಡ ಹೊಸ ಮಾರ್ಗಸೂಚಿ ಸಿನಿಮಾ ಬಿಡುಗಡೆಗೆ ಹಿನ್ನೆಡೆಯಾಗಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳು ಬಗೆಹರಿದ ಬಳಿಕ ಸಿನಿಮಾ ರಿಲೀಸ್ ಮಾಡಲು ಜೋಗಿ ಪ್ರೇಮ್ ನಿರ್ಧರಿಸಿದ್ದಾರೆ. "ಈ ಕೋವಿಡ್ ಹಾಗೂ ಈಗಿರುವ ಸಮಸ್ಯೆ ಮುಗಿದ ಮೇಲೆ ರಿಲೀಸ್ ಡೇಟ್ ಅನ್ನು ನಾವು ಅನೌನ್ಸ್ ಮಾಡಿಕೊಂಡು ಮತ್ತೆ ನಿಮ್ಮ ಮುಂದೆ 'ಏಕ್ ಲವ್ ಯಾ'ವನ್ನು ನಿಮ್ಮ ಮುಂದೆ ತೆಗೆದುಕೊಂಡು ಬರುತ್ತೇನೆ. ಅಲ್ಲಿವರೆಗೂ ಇದೇ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಇರಲಿ." ಎಂದು ಪ್ರೇಮ್ ಕರ್ನಾಟಕದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ಏಕ್ ಲವ್ ಯಾ' ಸಾಂಗ್ ಸೂಪರ್ ಹಿಟ್
ರಕ್ಷಿತಾ ಪ್ರೇಮ್ ನಿರ್ಮಿಸಿರುವ ʻಏಕ್ ಲವ್ ಯಾʼ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ರಕ್ಷಿತಾ ಸಹೋದರ ರಾಣಾರನ್ನು ನಾಯಕನಟರನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ರಾಮ್, ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯಾ ನೀಡಿದ ಸಂಗೀತ ಹಿಟ್ ಲಿಸ್ಟ್ ಸೇರಿದೆ. ಐದೂ ಹಾಡುಗಳು ಚಾರ್ಟ್ ಬಸ್ಟರ್ ಹಿಟ್ ಆಗಿವೆ. ಹೀಗಾಗಿ ಮ್ಯೂಸಿಕಲ್ ಲವ್ ಸ್ಟೋರಿ ʻಏಕ್ ಲವ್ ಯಾʼ ನೋಡಲು ಸಿನಿಪ್ರಿಯರು ಕಾದು ಕೂತಿದ್ದರು. ಕೋವಿಡ್ ಪ್ರಕರಣಗಳು ಹಾಗೂ ವಾರಾಂತ್ಯದ ಲಾಕ್‌ಡೌನ್‌ನಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

'ಒಂಬತ್ತನೇ ದಿಕ್ಕು' ಪೋಸ್ಟ್‌ಪೋನ್ ಆಗುತ್ತಾ?
ಕನ್ನಡದ ಎರಡು ಸಿನಿಮಾಗಳು ಇದೇ ತಿಂಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಹೊಸಬರ ಸಿನಿಮಾ 'ಡಿಎನ್‌ಎ' ಜನವರಿ 7ರಂದು ಬಿಡುಗಡೆಗೆ ಮುಂದಾಗಿತ್ತು. ಆದ್ರೀಗ ಹೊಸ ಮಾರ್ಗಸೂಚಿಯಿಂದ ಸಿನಿಮಾವನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಲೂಸ್ ಮಾದ ಯೋಗೀಶ್ ನಟನೆಯ 'ಒಂಬತ್ತನೇ ದಿಕ್ಕು' ಸಿನಿಮಾ ಜನವರಿ 28ರಂದು ರಿಲೀಸ್ ಆಗುತ್ತಿದೆ. 'ಒಂಬತ್ತನೇ ದಿಕ್ಕು' ದಿಕ್ಕು ಪೋಸ್ಟ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಈ ನಿರ್ದೇಶಕ ದಯಾಳ್ ಪದ್ಮನಾಭನ್ ಸಿನಿಮಾ ಬಿಡುಗಡೆಯನ್ನು ಮುಂದೂಡುವುದಿಲ್ಲವೆಂದು ಹೇಳಿದ್ದಾರೆ.