4 ವರ್ಷದ ಬಳಿಕ ಮತ್ತೆ ದರ್ಶನ್ ಜೊತೆ ರಚಿತಾ ನಟನೆ: ಕ್ರಾಂತಿ ಬಗ್ಗೆ ಮೊದಲ ಪ್ರತ್ರಿಕ್ರಿಯೆ

ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಶೂಟಿಂಗ್ ಮತ್ತೆ ಆರಂಭ ಆಗಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ಅಭಿನಯಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ದರ್ಶನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್. ಬಹಳ ದಿನಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿ ನಟಿಸುತ್ತಿದೆ. ಹೀಗಾಗಿ ಇಬ್ಬರ ಅಭಿಮಾನಿಗಳೂ 'ಕ್ರಾಂತಿ'ಗಾಗಿ ಎದುರು ನೋಡುತ್ತಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬಿಡುವಿಲ್ಲದಷ್ಟು ಸಿನಿಮಾದಲ್ಲಿ ನಟಿಸುತ್ತಿದ್ದರೂ, ದರ್ಶನ್ ಜೊತೆ ನಟಿಸುವ ಸಲುವಾಗಿ 'ಕ್ರಾಂತಿ' ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಶೂಟಿಂಗ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಚಿತಾ ಕ್ರಾಂತಿ ಸಿನಿಮಾದ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಜೊತೆ ನಟಿಸುತ್ತಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Recommended Video

'ಏಕ್ ಲವ್ ಯಾ' ಸಿನಿಮಾದಲ್ಲೂ ರಚಿತಾ ಮದುವೆ ವಿಚಾರ ಚರ್ಚೆಯಾಗುತ್ತಿದೆ.
4 ವರ್ಷಗಳ ಬಳಿಕ ದರ್ಶನ್ ಜೊತೆ ರಚಿತಾ ನಟನೆ

4 ವರ್ಷಗಳ ಬಳಿಕ ದರ್ಶನ್ ಜೊತೆ ರಚಿತಾ ನಟನೆ

ಡಿಂಪಲ್ ಕ್ವೀನ್ ಹಾಗೂ ಚಾಲೆಂಜಿಂಗ್ ಸ್ಟಾರ್ ಜೋಡಿಯನ್ನು ತೆರೆಮೇಲೆ ನೋಡುವುದೇ ಒಂದು ಹಬ್ಬ. ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ ಅಂದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವುದು ಗ್ಯಾರಂಟಿ. ಹೀಗಾಗಿ ರಚಿತಾ ರಾಮ್ ಕೂಡ ಅಭಿಮಾನಿಗಳಷ್ಟೇ ಕಾತರರಾಗಿದ್ದಾರೆ. " ನಾಲ್ಕೈದು ವರ್ಷದ ಬಳಿಕ ನಾನು ದರ್ಶನ್ ಸರ್ ಅವರೊಂದಿಗೆ ನಟಿಸುತ್ತಿದ್ದೇನೆ. ಆ ಖುಷಿಯನ್ನು ಹೇಳಲು ಅಸಾಧ್ಯ. ತುಂಬಾ ಉತ್ಸಾಹದಿಂದ ಸಿನಿಮಾ ಮಾಡುತ್ತಿದ್ದೇನೆ." ಎಂದು ರಚಿತಾ ರಾಮ್ ಮಾಧ್ಯಮಗಳಿಗೆ ಹೇಳಿದ್ದಾರೆ.

'ಕ್ರಾಂತಿ' ಅದ್ಭುತ ಕಥೆಯುಳ್ಳ ಸಿನಿಮಾ

'ಕ್ರಾಂತಿ' ಅದ್ಭುತ ಕಥೆಯುಳ್ಳ ಸಿನಿಮಾ

'ಕ್ರಾಂತಿ' ಸಿನಿಮಾದಲ್ಲಿ ಈಗಾಗಲೇ ನಟಿಸುತ್ತಿರುವ ಡಿಂಪಲ್ ಕ್ವೀನ್ ಖುಷಿಯಾಗಿದ್ದಾರೆ. ಒತ್ತಡದ ನಡುವೆಯೂ ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಫುಲ್ ಖುಷಿಯಾಗಿದ್ದಾರೆ. " ಕ್ರಾಂತಿ ಅದ್ಭುತ ಕಥೆ ಇರುವಂತಹ ಸಿನಿಮಾ. ನಾನು ಈ ಸಿನಿಮಾ ಬಗ್ಗೆ ಈಗಲೇ ಏನೂ ಹೇಳಲು ಇಷ್ಟ ಪಡುವುದಿಲ್ಲ. ಈಗ ತಾನೇ ಶೂಟಿಂಗ್ ಆರಂಭ ಆಗಿದೆ. ಶೈಲಾಜಾ ನಾಗ್ ಅವರ ಪ್ರೋಡಕ್ಷನ್ ಹೌಸ್‌ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಹರಿಕೃಷ್ಣ ಸರ್ ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದೇನೆ." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದರ್ಶನ್ ನನ್ನ ಸಿನಿಮಾದ ಮೊದಲ ಹೀರೊ

ದರ್ಶನ್ ನನ್ನ ಸಿನಿಮಾದ ಮೊದಲ ಹೀರೊ

'ಬುಲ್ ಬುಲ್' ರಚಿತಾ ರಾಮ್ ನಟಿಸಿದ ಮೊದಲ ಸಿನಿಮಾ. ಅದೂ ದರ್ಶನ್ ಸಿನಿಮಾದ ಮೂಲಕವೇ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರಿಂದ ಚಾಲೆಂಜಿಂಗ್ ಸ್ಟಾರ್ ಅನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ದರ್ಶನ್ ಜೊತೆ ನಟಿಸುವಾಗ ಡಿಂಪಲ್ ಕ್ವೀನ್ ಖುಷಿಯಿಂದ ನಟಿಸುತ್ತಾರೆ. "ದರ್ಶನ್ ಸರ್‌ ಬಗ್ಗೆ ಹೇಳಲೇ ಬೇಕಿಲ್ಲ. ನನಗೆ ನನ್ನ ಮೊದಲ ಸಿನಿಮಾಗೆ ಅವಕಾಶ ಕೊಟ್ಟ ಹೀರೊ ಅವರು. ಹೀಗಾಗಿ ಉತ್ಸಾಹ ಸ್ವಲ್ಪ ಜಾಸ್ತಿನೇ ಇದೆ. ಕ್ರಾಂತಿ ಖಂಡಿತವಾಗಿಯೂ ಒಂದು ಒಳ್ಳೆ ಸಿನಿಮಾ ಆಗುತ್ತೆ. ಮುಂದಿನ ವರ್ಷ ತೆರೆಮೇಲೆ ಬರುತ್ತೆ." ಎಂದು ರಚಿತಾ ತಮ್ಮ ಮೊದಲ ಹೀರೋ ದರ್ಶನ್ ಬಗ್ಗೆ ಮಾತಾಡಿದ್ದಾರೆ.

ರಚಿತಾ ರಾಮ್ ಕೈಯಲ್ಲಿದೆ ಸಿನಿಮಾ

ರಚಿತಾ ರಾಮ್ ಕೈಯಲ್ಲಿದೆ ಸಿನಿಮಾ

ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಹಲವು ಸಿನಿಮಾಗಳಿವೆ. 'ಲವ್ ಯು ರಚ್ಚು' ಸಿನಿಮಾದ ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿದೆ. ಡಾಲಿ ಧನಂಜಯ್ ಜೋಡಿಯಾಗಿ 'ಮಾನ್ಸೂನ್ ರಾಗ' ಹಾಗೂ 'ಡಾಲಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಜನವರಿ 21ರಂದು ಬಿಡುಗಡೆಯಾಗುತ್ತಿದೆ. ಇನ್ನು 'ಬ್ಯಾಡ್‌ಮ್ಯಾನರ್ಸ್', 'ಲವ್‌ ಮಿ ಆರ್ ಹೇಟ್ ಮಿ', 'ಏಪ್ರಿಲ್', 'ಸೂಪರ್ ಮಚ್ಚಿ', 'ಲಿಲ್ಲಿ', 'ಶಬರಿ' ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿಯಾಗಿದ್ದಾರೆ.

More from Filmibeat

English summary
Rachita Ram says she is happy to work with Darshan after four years gap. Darshan and Rachita Ram working together in Kranthi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X