ರಚಿತಾ ರಾಮ್ ರೊಮ್ಯಾಂಟಿಕ್‌ಗೆ ಹೇಗಿದೆ ರೆಸ್ಪಾನ್ಸ್?

ಲವ್‌ ಯು ರಚ್ಚು ಸಿನಿಮಾದ ಹಾಡು ಬಿಡುಗಡೆ ವೇಳೆ "ಫಸ್ಟ್ ನೈಟ್‌ನಲ್ಲಿ ಏನ್ ಮಾಡ್ತಾರೆ ಎಲ್ರೂ?" ರಚಿತಾ ರಾಮ್ ಹೀಗೊಂದು ಪ್ರಶ್ನೆ ಕೇಳಿದ್ದರು. ಉತ್ತರ ಹೇಳಬೇಕಾ, ಸುಮ್ಮನಿರಬೇಕಾ? ಅನ್ನುವುದು ತಿಳಿಯದೆ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರು ಡಿಂಪಲ್ ಕ್ವೀನ್ ರಚಿತಾ ರಾಮ್. ತಮ್ಮ ಹೊಸಾ ಚಿತ್ರ 'ಲವ್ ಯೂ ರಚ್ಚು' ಹಾಟ್ ಸಾಂಗ್ ಬಗ್ಗೆ ಸ್ಪಷ್ಟನೆ ಕೊಡುವಾಗ ರಚಿತಾ ಫಸ್ಟ್‌ನೈಟ್ ಪಾಠ ಮಾಡಿ ಸಿಕ್ಕಾಪಟ್ಟೆ ಚರ್ಚೆಗೀಡಾಗಿದ್ದರು.

ರಚಿತಾ ರಾಮ್ ನಟಿಸಿದ ಲವ್ ಯು ರಚ್ಚು ಸಿನಿಮಾದ ಇದೇ ರೊಮ್ಯಾಂಟಿಕ್ ಸಾಂಗ್ ಯುಟ್ಯೂಬ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ರಚಿತಾ ಹಾಟ್ ಅವತಾರ ಕಂಡು ಸಿನಿಮಾ ಪ್ರೇಮಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹಾಗಿದ್ದರೆ, ಈ ಹಾಡಿದೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ? ಯುಟ್ಯೂಬ್‌ನಲ್ಲಿ ಎಷ್ಟು ಮಂದಿ ವೀಕ್ಷಿಸಿದ್ದಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಫಸ್ಟ್‌ನೈಟ್ ಸಾಂಗ್ ಸೂಪರ್: ಮುದ್ದು ನೀನು ಎಂದ ಫ್ಯಾನ್ಸ್

ರಚಿತಾ ರಾಮ್ ಹಾಗೂ ಅಜೇಯ್ ರಾವ್ ಇಬ್ಬರ ಕಾಂಬಿನೇಷನ್‌ನ ಮೊದಲನೇ ಸಿನಿಮಾ. ಗುರು ದೇಶಪಾಂಡೆ ನಿರ್ಮಿಸುತ್ತಿರುವ ಲವ್ ಯು ರಚ್ಚು ಸಿನಿಮಾ ಆರಂಭ ಆದಲ್ಲಿಂದ ಒಂದಲ್ಲಾ ಒಂದು ವಿಷಯದಲ್ಲಿ ಚರ್ಚೆಯಲ್ಲಿದೆ. ಈಗ ರಚಿತಾ ರಾಮ್ ಮತ್ತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ನಟಿಸಿರುವ ಈ ಸಿನಿಮಾ ಮುದ್ದು ನೀನು ಸಾಂಗ್ ಸಖತ್ ವೈರಲ್ ಆಗಿದೆ. ರಚಿತಾ ಅಭಿಮಾನಿಗಳಿಗೆ, ಪಡ್ಡೆ ಹೈಕಳಿಗೆ ಈ ಹಾಡು ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಹಾಡನ್ನು ನೋಡಿ ಅಭಿಮಾನಿಗಳು ಮುದ್ದು ನೀನು ಎನ್ನುತ್ತಿದ್ದಾರೆ.

Rachita Ram starrer new movie Love You Rachchu Song Creating sensation in youtube

14 ಲಕ್ಷ ಮಂದಿಯಿಂದ ಹಾಡಿನ ವೀಕ್ಷಣೆ

ಸುಮಧುರ ಕಂಠದ ಸಿಡ್ ಶ್ರೀರಾಮ್ ಹಾಡಿರುವ 'ಮುದ್ದು ನೀನು' ಹಾಡು ಪಡ್ಡೆಗಳ ಫೇವರಿಟ್ ಆದಂತಿದೆ. ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನೀಡಿರುವ ಈ ಹಾಡಿನ ಸಾಹಿತ್ಯ ನಾಗಾರ್ಜುನ ಶರ್ಮಾ ರಚಿಸಿದ್ದಾರೆ. ರಚಿತಾ ರಾಮ್ ಮತ್ತು ಕೃಷ್ಣ ಅಜೇಯ್ ರಾವ್ ತೆರೆಮೇಲಿನ ಕೆಮಿಸ್ಟ್ರಿ ಕ್ಲಿಕ್ ಆಗಿದ್ದು, ಈ ಲವ್ ಸಾಂಗ್ ಈಗ ಸಾಕಷ್ಟು ಸದ್ದು ಮಾಡುತ್ತಿದೆ.

Rachita Ram starrer new movie Love You Rachchu Song Creating sensation in youtube

ನರ್ಸರಿಯಿಂದ ಈ ಹಾಡು ಆರಂಭವಾಗುತ್ತದೆ. ಮೇಲ್ನೋಟಕ್ಕೆ ಹೂವಿನ ಗಿಡ ಕೊಳ್ಳಲು ಬಂದಂತೆ ಕಾಣುವ ನಾಯಕ ಅಜೇಯ್ ರಾವ್ ಅಲ್ಲೇ ಇರುವ ಮುಗ್ಧ ಸುಂದರಿಯನ್ನು ಕಂಡು 'ಮುದ್ದು ನೀನು' ಅಂತ ಪ್ರೇಮಲೋಕಕ್ಕೇ ಜಿಗಿಯುತ್ತಾರೆ. ರಚಿತಾ ರಾಮ್ ಅವರದ್ದು ಇದರಲ್ಲಿ ಪಕ್ಕದ್ಮನೆ ಹುಡುಗಿಯ ಪಾತ್ರ. ಸರಳವಾಗಿ ಕಾಣಿಸಿಕೊಂಡಿರುವ ಇವರ ಸಿಂಪಲ್ ಲುಕ್ ಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ.

Rachita Ram starrer new movie Love You Rachchu Song Creating sensation in youtube

ಪ್ರೆಸ್ ಮೀಟ್‌ನಲ್ಲೇ ರಚಿತಾ ಫಸ್ಟ್‌ನೈಟ್ ಪಾಠ

ರಚಿತಾ ರಾಮ್ ಐ ಲವ್ ಯು ಸಿನಿಮಾದ ಮಾತನಾಡಿ ಮಾಯವಾದೆ ಹಾಡಿನಲ್ಲಿ ಹಾಟ್ ಆಗಿ ನಟಿಸಿದ್ದರು. ಆ ಹಾಡು ಬಿಡುಗಡೆಯಾಗುತ್ತಿದ್ದಂತೆ ರಚಿತಾ ಅಭಿಮಾನಿಗಳು ಇಂತಹ ಹಾಟ್ ದೃಶ್ಯಗಳಲ್ಲಿ ನಟಿಸಬೇಡಿ ಅಂತ ಕೇಳಿಕೊಂಡಿದ್ದರು. ಈ ಬೆನ್ನಲ್ಲೇ ಡಿಂಪಲ್ ಕ್ವೀನ್ ಕಣ್ಣೀರು ಹಾಕಿ ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದರು. ಅಪ್ಪ-ಅಮ್ಮ ಒಪ್ಪುತ್ತಿಲ್ಲ. ಸಿನಿಮಾ ನೋಡುವುದಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಹೇಳಿಕೆ ನೀಡಿದ್ದರು. ಈಗ ಮತ್ತೆ ಅಂತಹದ್ದೇ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರಿಂದ ಪತ್ರಕರ್ತರು ಪ್ರಶ್ನೆ ಮಾಡಿದ್ದರು. ಈ ವೇಳೆ ರಚಿತಾ ರಾಮ್ ರಾಂಗ್ ಆಗಿ ಫಸ್ಟ್ ನೈಟ್ ಪಾಠ ಮಾಡಿದ್ದರು.

More from Filmibeat

English summary
In Love you Rachchu press meet Rachita Ram asked a question about what will couple do after the marriage? That sensational performing well at the box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X