ದುನಿಯಾ ವಿಜಯ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ; ವಿಜಿ ಪುತ್ರಿಗೆ ಇದು ಮೊದಲ ಮೆಟ್ಟಿಲು..!

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಾಯಕನಟರಲ್ಲಿ ''ದುನಿಯಾ ವಿಜಯ್'' ಕೂಡಾ ಒಬ್ಬರು. ''ದುನಿಯಾ'' ಮೂಲಕ ಹೀರೋ ಆಗಿ ಆನಂತರ ದೊಡ್ಡ ಮಟ್ಟದ ''ಸ್ಟಾರ್'' ಎನಿಸಿಕೊಂಡು, ಅದ್ಭುತವಾದ ''ಗೆಲುವು'', ಸಣ್ಣ ಪುಟ್ಟ ''ತೊಡಕು''ಗಳೆಲ್ಲವನ್ನೂ ಅನುಭವಿಸಿರುವ ವಿಜಯ್ ತಮ್ಮ ಪುತ್ರಿ ''ಮೋನಿಕಾ'' ಅವರನ್ನ ''ಚಿತ್ರರಂಗ''ಕ್ಕೆ ಪರಚಯಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದಕ್ಕೆ ಬೇಕಾದ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಈಗಾಗಲೇ ''ಜಂಟಲ್ ಮನ್''.. ''ಗುರು ಶಿಷ್ಯರು'' ಚಿತ್ರದ ನಿರ್ದೇಶಕ ಹಾಗೂ ''ಕಾಟೇರ''ದ ''ಬರಹಗಾರ'' ಜಡೇಶ್ ಕುಮಾರ್ ಹಂಪಿ, ಮೋನಿಕಾ ಅವರ ''ಮೊದಲ ಚಿತ್ರ''ದ ನಿರ್ದೇಶನ ಮಾಡಲಿದ್ದಾರೆ ಅನ್ನುವ ವಿಚಾರ ಜಗಜ್ಜಾಹೀರಾಗಿದೆ. ಇನ್ನೂ ಇದೇ ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿಯೂ ''ತಂದೆ''ಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

Rachita Ram To Share Screen With Duniya Vijay Again

ಆದರೆ ಈ ಚಿತ್ರದಲ್ಲಿ ದುನಿಯಾ ವಿಜಯ್ ಎದುರು ''ನಾಯಕಿ'' ಪಾತ್ರವನ್ನ ನಿರ್ವಹಿಸುವುದು ಯಾರು..? ಹೀಗೊಂದು ಪ್ರಶ್ನೆ ಅನೇಕ ದಿನಗಳಿಂದ ಎಲ್ಲರಲ್ಲಿ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಗುವ ಕಾಲ ಬಂದಿದೆ. ರಚಿತಾ ರಾಮ್ ಹೆಸರು ''ಗಾಂಧಿನಗರದ''ಲ್ಲಿ ವ್ಯಾಪಕವಾಗಿ ಓಡಾಡುತ್ತಿದೆ.

Rachita Ram To Share Screen With Duniya Vijay Again

ಹೌದು, ರಚಿತಾ ರಾಮ್ ಹಾಗೂ ದುನಿಯಾ ವಿಜಯ್.. ''ಜಾನಿ ಜಾನಿ ಯೆಸ್ ಪಾಪಾ'' ಚಿತ್ರದ ನಂತರ ಎರಡನೇ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ಇನ್ನೂ ಆಗ್ಲೇ ಹೇಳಿದಂತೆ ಈ ಚಿತ್ರದಲ್ಲಿ ''ವಿಜಯ್'' ಅವರದ್ದು ''ಮೋನಿಕಾ'' ಅವರ ''ತಂದೆ''ಯ ಪಾತ್ರ. ಹಿಂದೆ ''ಪತ್ರಿಕೆ''ಯೊಂದಕ್ಕೆ ನೀಡಿದ ''ಸಂದರ್ಶನ''ದಲ್ಲಿ ದುನಿಯಾ ವಿಜಯ್ ಈ ಮಾತನ್ನ ಖುದ್ದು ತಾವೇ ಹೇಳಿದ್ದಾರೆ ಕೂಡ. ಈ ಕಾರಣಕ್ಕೆ ಎದೆ ಎತ್ತರಕ್ಕೆ ಬೆಳೆದ ಹುಡುಗಿಯ ''ತಾಯಿ''ಯ ಪಾತ್ರವನ್ನ ನಿರ್ವಹಿಸಲು ''ರಚಿತಾ ರಾಮ್'' ಒಪ್ಪಿಗೆ ನೀಡುತ್ತಾರಾ ಅನ್ನುವ ಅನುಮಾನ ಕೂಡ ಇದೇ ವೇಳೆ ಅನೇಕರನ್ನ ಕಾಡುತ್ತಿದೆ.

ನಿಜಾ.. ರಚಿತಾ ರಾಮ್ ಅವರ ವಿಚಾರದ ಬಗ್ಗೆ ಜಡೇಶ್ ಕುಮಾರ್ ಹಾಗೂ ತಂಡ ಇನ್ನೂ ಯಾವುದೇ ಸುದ್ದಿಯನ್ನ ಹಂಚಿಕೊಂಡಿಲ್ಲ. ಆದರೆ ''ಬೆಂಕಿ ಇರದೇ ಹೊಗೆಯಾಡಲ್ಲ''. ಹೀಗಾಗಿಯೇ ಹರಿದಾಡುತ್ತಿರುವ ಈ ಸುದ್ದಿಯನ್ನ ಸಂಪೂರ್ಣವಾಗಿ ತಳ್ಳಿ ಹಾಕಲು ಕೂಡ ಸಾಧ್ಯ ಇಲ್ಲ. ಸದ್ಯದಲ್ಲಿಯೇ ಈ ವಿಚಾರದಲ್ಲಿ ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ. ಚಿತ್ರದ ಮುಹೂರ್ತ ನೆರವೇರುವ ಸಾಧ್ಯತೆ ಇದೆ.

ಇನ್ನೂ ಎರಡು ದಶಕದ ಹಿಂದೆ ಸಾರಥಿ ಚಿತ್ರದ ಮೂಲಕ ಚಿನ್ನದ ಬೆಳೆಯನ್ನ ಬೆಳೆದ ಕೆ ವಿ ಸತ್ಯಪ್ರಕಾಶ್‌ ಅವರು ಈ ಬಾರಿ ತಮ್ಮ ಪುತ್ರ ಸೂರಜ್ ಜೊತೆಗೆ ಸೇರಿಕೊಂಡು ದುನಿಯಾ ವಿಜಯ್ ಮತ್ತು ಜಡೇಶ ಕೆ ಹಂಪಿ ಕಾಂಬಿನೇಷನ್‌ನ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಮೋನಿಕಾ ವಿಜಯ್ ಕಲಿಕಾಭ್ಯಾಸ

ತಂದೆ ವಿಜಯ್ ಕುಮಾರ್ ಮಾರ್ಗದರ್ಶನದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೊದಲ ಮೆಟ್ಟಿಲನ್ನೇರಲು ಸಿದ್ಧವಾಗಿರುವ ಮೋನಿಕಾ,ಚಿತ್ರರಂಗಕ್ಕೆ ಬೇಕಿರುವ ಎಲ್ಲ ತಯಾರಿಯನ್ನ ಮಾಡಿಕೊಂಡಿದ್ದಾರೆ. ಮುಂಬೈನ ''ಅನುಪಮ್ ಖೇರ್‌'' ಆಕ್ಟಿಂಗ್ ಸ್ಕೂಲ್ ನಲ್ಲಿ ಅಭಿನಯದ ಅಭ್ಯಾಸವನ್ನೂ ಮಾಡಿರುವ ಮೋನಿಕಾ, ಬೆಂಗಳೂರಿನ ''ರಂಗ ತಂಡ''ದಲ್ಲಿಯೂ ಕೂಡ ಬೆವರು ಸುರಿಸಿದ್ದಾರೆ.

ಭೀಮ ಬಿಡುಗಡೆ ಯಾವಾಗ ..?

ಇನ್ನೂ ''ಸಲಗ'' ನಂತರ ನಿರ್ದೇಶಕನಾಗಿಯೂ ಗೆದ್ದ ದುನಿಯಾ ವಿಜಯ್, ಸದ್ಯಕ್ಕೆ ತಮ್ಮ ''ಭೀಮ'' ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ ಒಂದು ಸುತ್ತು ಸದ್ದು ಮಾಡಿರುವ ವಿಜಯ್ ಶೀಘ್ರದಲ್ಲಿಯೇ ತಮ್ಮ ಭೀಮ ಚಿತ್ರದ ಬಿಡುಗಡೆಯ ದಿನಾಂಕವನ್ನ ಘೋಷಿಸುವ ಸಾಧ್ಯತೆ ಇದೆ.

More from Filmibeat

English summary
According To Latest Reports Rachita Ram To Share Screen With Duniya Vijay Again. The Film Which Marks Debut Of Duniya Vijay's Daughter Monica Is Directed By Jadesh Kumar Hampi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X