Radhana Ram: ಮಾಲಾಶ್ರೀಯಂತೆ ಪುತ್ರಿನೂ ಖಡಕ್.. ಕತ್ತಿ ಹಿಡಿದು 'ಕಾಟೇರ' ಲುಕ್ ಜೂ.ಕನಸಿನ ರಾಣಿ!
ಕನ್ನಡ ಚಿತ್ರರಂಗದ ಕನಸಿನ ರಾಣಿ, ಆಕ್ಷನ್ ಕ್ವೀನ್ ಮಾಲಾಶ್ರೀ. ಈಗ ಇವರ ಪುತ್ರಿ ರಾಧನಾ ರಾಮ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ಹೊಸ ವಿಷಯವೇನಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಆ ಸಿನಿಮಾವೇ 'ಕಾಟೇರ'.
ದರ್ಶನ್ ನಟಿಸುತ್ತಿರುವ 56ನೇ ಸಿನಿಮಾವಿದು. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಪಂಚೆಯುಟ್ಟು ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೂವರೆಗೂ ನಾಯಕಿ ರಾಧನಾ ರಾಮ್ ಅವರ ಲುಕ್ ಅನ್ನು ಬಿಟ್ಟುಕೊಟ್ಟಿರಲಿಲ್ಲ. ಯುಗಾದಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ 'ಕಾಟೇರ'ದ ರಾಧನಾ ರಾಮ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ಅನನ್ಯಾ ಹೆಸರನ್ನು ಕೈ ಬಿಟ್ಟು ರಾಧನಾ ರಾಮ್ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಜೂ.ಕನಸಿನ ರಾಣಿಯ ಮೊದಲ ಸಿನಿಮಾದ ಲುಕ್ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ದರ್ಶನ್ ಹಾಗೂ ಮಾಲಾಶ್ರೀ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆ ಕಾಯುವಿಕೆಗೀಗ ತೆರೆಬಿದ್ದಿದೆ. ಹಳ್ಳಿ ಹುಡುಗಿ ಅವತಾರದಲ್ಲಿ ರಗಡ್ ಲುಕ್ ಕೊಟ್ಟಿದ್ದಾರೆ.
ರಾಧನಾ ರಾಮ್ ಪಾತ್ರದ ಹೆಸರೇನು?
ಯುಗಾದಿ ಹಬ್ಬಕ್ಕೆ ಇಬ್ಬರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 'ಕೆಡಿ' ಸಿನಿಮಾಗಾಗಿ ಶಿಲ್ಪಾ ಶೆಟ್ಟಿ ಸತ್ಯವತಿ ಅವತಾರವೆತ್ತಿದ್ರೆ, ಇತ್ತ ಮಾಲಾಶ್ರೀ ಪುತ್ರಿ 'ಕಾಟೇರ'ದಲ್ಲಿ ಪ್ರಭಾವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಕಾ ರಗಡ್ ಹಳ್ಳಿ ಹುಡುಗಿ ಅವತಾರದಲ್ಲಿ ರಾಧನಾ ರಾಮ್ ಲುಕ್ ಕೊಟ್ಟಿದ್ದು ಮಾಲಾಶ್ರೀ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಜೂ.ಕನಸಿನ ರಾಣಿಗೆ ಪರ್ಫೆಕ್ಟ್ ಸ್ಟಾರ್ಟ್ ಸಿಕ್ಕಿದೆ. ಕನ್ನಡದ ಸೂಪರ್‌ಸ್ಟಾರ್ ದರ್ಶನ್ ಜೊತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅಂತ ಸ್ಟಾರ್ ನಿರ್ಮಾಪಕರ ಸಿನಿಮಾ, ತರುಣ್ ಸುಧೀರ್ ಅಂತಹ ಸಕ್ಸಸ್‌ಪುಲ್ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ರಾಧನಾ ರಾಮ್ ಎಂಟ್ರಿ ಪರ್ಫೆಕ್ಟ್ ಅಂತ ಸ್ಯಾಂಡಲ್‌ವುಡ್ ಮಂದಿ ಹೇಳುತ್ತಿದ್ದಾರೆ.
ತರಬೇತಿ ಪಡೆದು ಚಿತ್ರರಂಗಕ್ಕೆ ಎಂಟ್ರಿ
ಮಾಲಾಶ್ರೀ ತಮ್ಮ ಮಗಳನ್ನು ದಿಢೀರನೇ ಚಿತ್ರರಂಗಕ್ಕೆ ಕರೆದುಕೊಂಡು ಬಂದಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಪೂರ್ವ ತಯಾರಿ ನಡೆಸಿದ್ದರು. ಅಭಿನಯ ಕಲಿಯಲು ಬೇಕಾಗಿರೋ ತರಬೇತಿಯನ್ನು ಮಗಳಿಗೆ ಕೊಡಿಸಿದ್ದಾರೆ. ಮುಂಬೈನಲ್ಲಿ ಎರಡು ವರ್ಷ ನಟನೆಗೆ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ಹೀಗೆ ಪೂರ್ವ ಸಿದ್ಧತೆ ಮಾಡಿಕೊಂಡು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ರಾಧನಾ ರಾಮ್ 13ನೇ ವಯಸ್ಸಿನಲ್ಲಿರುವಾಗಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಸಿನಿಮಾದಲ್ಲಿ ನಟಿಸಲು ಬೇಕಿರೋ ಸಂಪೂರ್ಣ ತಯಾರಿ ಅಂದಿನಿಂದಲೇ ನಡೆಯುತ್ತಿತ್ತು ಎನ್ನಲಾಗಿದೆ.
ರಾಧನಾ ರಾಮ್ ಎಷ್ಟನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ?
ಸ್ಯಾಂಡಲ್‌ವುಡ್ ಆಕ್ಷನ್ ಕ್ವೀನ್ ಮಾಲಾಶ್ರೀ ಮೊದಲ ಸಿನಿಮಾ 'ನಂಜುಂಡಿ ಕಲ್ಯಾಣ'. ಈ ಸಿನಿಮಾದಲ್ಲಿ ನಟಿಸುವಾಗ ಇವರ ವಯಸ್ಸು ಕೇವಲ 15 ವರ್ಷ. ಈಗ ಅವರ ಪುತ್ರಿ ರಾಧನಾ ರಾಮ್ ಕೂಡ ಚಿಕ್ಕ ವಯಸ್ಸಿಗೆ ಚಿತ್ರರಂಗ ಪ್ರವೇಶ ಮಾಡಿದ್ದಾರೆ.

ರಾಧನಾ ರಾಮ್ ತಮ್ಮ 21ನೇ ವಯಸ್ಸಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್ ಜೊತೆಗೆ ರಗಡ್ ಹಳ್ಳಿ ಹುಡುಗಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮಾಲಾಶ್ರೀ ಮೊದಲ ಸಿನಿಮಾದಂತೆ ಪುತ್ರಿ ಸಕ್ಸಸ್ ಸಿಗುತ್ತಾ? ಮಾಲಾಶ್ರೀಯಂತೆಯೇ ರಗಡ್ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಾರಾ? ಅನ್ನೋ ಕೂತೂಹಲ ಸಿನಿಮಾ ಮಂದಿಗೆ, ಅಭಿಮಾನಿಗಳಿಗೆ ಇದೆ.


Click it and Unblock the Notifications











