ಸಮುದ್ರದ ತೀರದಲ್ಲಿ ಹೋಳಿ ಆಡಿದ ಸ್ವೀಟಿ; "ಅಕ್ಕ ಅಣ್ಣಂಗೆ ಬಣ್ಣ ಹಚ್ಚಿ?" ಎಂದು ಕಾಲೆಳೆದ ಫ್ಯಾನ್ಸ್!

ಸ್ಯಾಂಡಲ್‌ವುಡ್‌ನ ಸ್ವೀಟಿ ಕ್ಯಾಮರಾ ಮುಂದೆ ಬರೋದೇ ಅಪರೂಪ. ಹಬ್ಬ ಹರಿ ದಿನಗಳು ಅಂತ ಬಂದಾಗ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗುತ್ತಾರೆ. ಈಗ ಹೋಳಿ ಹಬ್ಬದ ಸಂಭ್ರಮದ ವೇಳೆ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಕಡಲ ತೀರದಲ್ಲಿ ರಾಧಿಕಾ ಕುಮಾರಸ್ವಾಮಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಬಣ್ಣಗಳನ್ನು ಎರಚಿ ಖುಷಿ ಪಟ್ಟಿದ್ದಾರೆ. ಹಾಗೇ ಕಡಲ ತೀರದಲ್ಲಿ ರಾಧಿಕಾ ಮಸ್ತ್ ಆಗಿ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಹ್ಯಾಪಿ ಹೋಳಿ ಎಂದಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Radhika Kumaraswamy celebrated holi by dancing near the beach

ರಾಧಿಕಾ ಕುಮಾರಸ್ವಾಮಿ ಸಿನಿಮಾಗಳಲ್ಲಿ ಹೆಚ್ಚು ಆಕ್ಟಿವ್ ಆಗಿಲ್ಲ. ಹಿಂದಿನಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿಲ್ಲ. ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರೋದು ಬಿಟ್ಟರೆ, ಸಿನಿಮಾಗಳಲ್ಲಿ ನಟಿಸುತ್ತಿರೋದು ತೀರಾ ವಿರಳ ಎನ್ನಬಹುದು. ಹಾಗಂತ ಈಗೇನು ಫ್ರೀಯಾಗಿ ಇಲ್ಲ. ಅವರದ್ದೇ ಸಿನಿಮಾದ ನಿರ್ಮಾಣ ಕೆಲಸ ನಡೆಯುತ್ತಿದೆ.

ಗ್ಯಾಪ್‌ನಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸಿನಿಮಾಗಳನ್ನು ತಮ್ಮ ಇಮೇಜ್‌ಗೆ ತಕ್ಕಂತೆ ನೋಡಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಹಾಗಾಗಿ ಆಗಾಗ ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿತ್ತಾರೆ. ತಮ್ಮ ಸಂಭ್ರಮದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಹೋಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ರಾಧಿಕಾ ಕುಮಾರಸ್ವಾಮಿ ವೈಟ್ ಅಂಡ್ ವೈಟ್ ಕುರ್ತಾ ಧರಿಸಿ ಬಣ್ಣದ ಹಬ್ಬವನ್ನು ಆಚರಿಸಿದ್ದಾರೆ. ಮಂಗಳೂರು ಮೂಲದವರಾಗಿದ್ದರಿಂದ ಅಲ್ಲೇ ಎಲ್ಲೋ ಸಂಭ್ರಮಿಸಿರಬಹುದು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಕಾಮೆಂಟ್‌ಗಳಲ್ಲಿ " ಮಂಗಳೂರು ಬೀಚ್ ಇರಬಹುದಾ?", "ಮರವಂತೆ ಬೀಚ್ ಇರಬಹುದಾ?" ಎಂದು ಕೇಳುತ್ತಿದ್ದಾರೆ.

ಕಡಲ ತೀರದಲ್ಲಿ ರಾಧಿಕಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ವಿಡಿಯೋಗಳನ್ನು ಫ್ಯಾನ್ಸ್ ಲೈಕ್ ಮಾಡುತ್ತಿದ್ದು, ತಮಾಷೆಯಲ್ಲಿ ರಾಧಿಕಾ ಕುಮಾರಸ್ವಾಮಿಯನ್ನು ಕಾಲೆಳೆದಿದ್ದಾರೆ. "ನೀವು ದುಬೈನಲ್ಲಿ ಹೋಗಿ ಹೋಳಿ ಆಡಿದ್ದು ನಿಜನಾ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಅಣ್ಣಂಗೂ ಸ್ವಲ್ಪ ಹಚ್ಚಿ" ಎಂದು ಇನ್ನೊಬ್ಬರು ಕಾಳೆದಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವ ಎರಡು ಸಿನಿಮಾಗಳು ರಿಲೀಸ್ ಆಗಬೇಕಿದೆ. 'ಭೈರಾದೇವಿ' ಸಿನಿಮಾದಲ್ಲಿ ನಟಿಸಿದ್ದು ಅದು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನೊಂದು ಸಿನಿಮಾ 'ಅಜಾಗ್ರತಾ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿಯಾಗುತ್ತಿದೆ. ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಮುಹೂರ್ತ ಸಂದರ್ಭದಲ್ಲಿ ಮಾಹಿತಿ ನೀಡಿದ್ದರು. ಸದ್ಯ ಈ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದೆ.

More from Filmibeat

English summary
Kannada actress Radhika Kumaraswamy celebrated holi in beach
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X