ರಾಧಿಕಾ ಕುಮಾರಸ್ವಾಮಿಯ ಗ್ಲಾಮರಸ್ ಯೋಗ:"ಭವಿಷ್ಯದ ಬಗ್ಗೆ ಚಿಂತಿಸಬೇಡಿ.. ಹಳೆಯದನ್ನು ಮರೆತುಬಿಡಿ" ಎಂದ ಸ್ವೀಟಿ
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಒಂದಿಷ್ಟು ದಿನ ಎಲ್ಲಿಗೆ ಹೋದ್ರು? ಏನಾದ್ರು? ಅನ್ನೋ ಸುಳಿವೇ ಇರಲಿಲ್ಲ. ಇದೀಗ ದಿಢೀರನೇ ಸದ್ದು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಜೊತೆ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಿದ್ದರು. ದರ್ಶನ್ ಸಿನಿಮಾ 'ಕ್ರಾಂತಿ'ಯ "ಶೇಕ್ ಇಟ್ ಪುಷ್ಪವತಿ" ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ಮತ್ತೆ ಅದೇ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದ್ದಾರೆ.
ಇಂದು (ಜೂನ್ 21) ಅಂತರಾಷ್ಟ್ರೀಯ ಯೋಗ ದಿನ. ಈ ದಿನ ವಿಶ್ವದ ಮೂಲೆ ಮೂಲೆಯಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂಬಂಧ ರಾಧಿಕಾ ಕುಮಾರಸ್ವಾಮಿ ಕೂಡ ಯೋಗ ದಿನವನ್ನು ಆಚರಿಸಿದ್ದಾರೆ. ನಾನಾ ಭಂಗಿಯ ಯೋಗ ಮಾಡಿ ಪೋಸ್ ಕೊಟ್ಟಿದ್ದಾರೆ.

ಯೋಗ ಮಾಡಿ ಮನಸ್ಸು ಕದ್ದ ರಾಧಿಕಾ
ರಾಧಿಕಾ ಕುಮಾರಸ್ವಾಮಿ ಫಿಟ್ನೆಸ್ ಬಗ್ಗೆ ತುಂಬಾನೇ ಗಮನ ಹರಿಸುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗ, ಡಯೆಟ್ ಎಲ್ಲವನ್ನೂ ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಯೋಗ ಕೇವಲ ದೌಹಿಕವಾಗಿ ಅಷ್ಟೇ ಅಲ್ಲ. ಮಾನಸಿಕವಾಗಿಯೂ ಸದೃಡರನ್ನಾಗಿ ಮಾಡಬಲ್ಲದು. ಹೀಗಾಗಿ ರಾಧಿಕಾ ಕುಮಾರಸ್ವಾಮಿ ನಿರಂತರವಾಗಿ ಯೋಗಾಭ್ಯಸ ಮಾಡುತ್ತಾರೆ.
ಹೀಗಾಗಿ ಅಂತರಾಷ್ಟ್ರೀಯ ಯೋಗ ದಿನವಾದ ಇಂದು ರಾಧಿಕಾ ಕುಮಾರಸ್ವಾಮಿ ಯೋಗ ಮಾಡಿದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ "ಭವಿಷ್ಯದ ಬಗ್ಗೆ ಚಿಂತಿಸಬೇಡಿ.. ಹಳೆಯದನ್ನು ಮರೆತುಬಿಡಿ" ಎಂದು ಫೋಟೊಗಳ ಜೊತೆ ಬರೆದು ಪೋಸ್ಟ ಮಾಡಿದ್ದಾರೆ.
ಯೋಗ ಸೌಂದರ್ಯದ ರಹಸ್ಯ
ಸಾಮಾನ್ಯವಾಗಿ ನಟಿಯರು ಪ್ರತಿದಿನ ಯೋಗ ಮೊರೆ ಹೋಗುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗವನ್ನು ಬಿಡದೆ ಮಾಡುತ್ತಾರೆ. ರಾಧಿಕಾ ಕುಮಾರಸ್ವಾಮಿ ಕೂಡ ತನ್ನ ಸೌಂದರ್ಯವನ್ನು ಹಾಗೇ ಉಳಿಸಿಕೊಂಡು ಬಂದಿರುವುದಕ್ಕೆ ಕಾರಣ ಇದೇ ಯೋಗ.
36 ವರ್ಷ ವಯಸ್ಸಿನ ರಾಧಿಕಾ ಕುಮಾರಸ್ವಾಮಿ ಹಲವು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಒಂದು ಮಗುವಿನ ತಾಯಿಯಾಗಿದ್ದರೂ, ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಅಭಿಮಾನಿಗಳನ್ನೂ ಯೋಗ ದಿನದಂದು ಯೋಗ ಮಾಡುವಂತೆ ಪ್ರೇರಣೆ ನೀಡಿದ್ದಾರೆ.
'ಅಜಾಗ್ರತ' ಸಿನಿಮಾದಲ್ಲಿ ರಾಧಿಕಾ ಬ್ಯುಸಿ
ರಾಧಿಕಾ ಕುಮಾರಸ್ವಾಮಿ ಸದ್ಯ 'ಅಜಾಗ್ರತ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ರಾಧಿಕಾ ಸಹೋದರ ರವಿರಾಜ್ ನಿರ್ಮಾಣ ಮಾಡುತ್ತಿದ್ದಾರೆ. 7 ಭಾಷೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ನಟಿಸುತ್ತಿದ್ದಾರೆ. ಇವರೊಂದಿಗೆ ನಟಿಸುತ್ತಿರುವ ರಾಧಿಕಾ ಇತ್ತೀಚೆಗೆ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಇದೇ ನಟನೊಂದಿಗೆ ಕಾಣಿಸಿಕೊಂಡಿದ್ದರು.
ರಾಧಿಕಾ ಕುಮಾರಸ್ವಾಮಿ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ರವಿಬೋಪಣ್ಣ ಸಿನಿಮಾವೇ ತೆರೆಕಂಡ ಕೊನೆಯ ಸಿನಿಮಾ. ಈಗ ಪ್ಯಾನ್ ಇಂಡಿಯಾ ಸಿನಿಮಾ 'ಅಜಾಗ್ರತ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











