ಜಮೀರ್ ಅಹಮದ್ ಖಾನ್‌ಗೆ ರಾಧಿಕಾ ಕುಮಾರಸ್ವಾಮಿ ₹2 ಕೋಟಿ ಕೊಟ್ಟಿದ್ದೇಕೆ? ಲೋಕಾಯುಕ್ತ ವಿಚಾರಣೆಯಲ್ಲಿ ಹೇಳಿದ್ದೇನು?

2019ರಲ್ಲಿ ಜಮೀರ್ ಅಹಮದ್ ಖಾನ್ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿತ್ತು. ದಾಖಲೆಗಳನ್ನು ಪರಿಶೀಲಿಸುವ ವೇಳೆ ಜಮೀರ್ ಅಹಮದ್‌ಗೆ ಹಣಕಾಸಿನ ನೆರವು ನೀಡಿದವರ ದೊಡ್ಡ ಪಟ್ಟಿಯೇ ಸಿಕ್ಕಿತ್ತು. ಈ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೂಡ ತಗಲಾಕಿಕೊಂಡಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಆ ಸಮಯದಲ್ಲಿ ಜಮೀರ್ ಸಚಿವರಾಗಿದ್ದರು. ಈ ಕೇಸ್‌ಗೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತರ ಮುಂದೆ ಹಾಜರಾಗಿದ್ದಾರೆ ಎಂದು ವರದಿಯಾಗಿವೆ.

ಅಂದು ಜಮೀರ್ ಅಹಮದ್ ಖಾನ್ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ ದೂರನ್ನು ದಾಖಲಿಸಿತ್ತು. ಬಳಿಕ ಎಸಿಬಿ ರದ್ದಾದ ಬೆನ್ನಲ್ಲೇ ಲೋಕಾಯುಕ್ತ ಈ ಕೇಸ್‌ನ ತನಿಖೆಯನ್ನು ಮುಂದುವರೆಸಿತ್ತು. ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಹೀಗಾಗಿ ಒಂದು ವಾರದ ಹಿಂದೆ ಲೋಕಾಯುಕ್ತ ಕಚೇರಿಗೆ ಬಂದು ವಿಚಾರಣೆ ಎದುರಿಸಿ ಹೋಗಿದ್ದಾರೆಂದು ವರದಿಯಾಗಿದೆ.

Radhika Kumaraswamy gave clarity on transferring Rs 2 crore to Zameer Ahmed Khan Here is the details

ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ 2 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದರು. ಇದು ಲೋಕಾಯುಕ್ತ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಕಳೆದ ವಾರ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಜಮೀರ್ ಅಹ್ಮದ್ ಖಾನ್‌ಗೆ ಹಣ ನೀಡಿದ ಕುರಿತು ಲೋಕಾಯುಕ್ತರ ಮುಂದೆ ರಾಧಿಕಾ ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

2019ರಲ್ಲಿ ಜಮೀರ್ ಅಹಮದ್ ಖಾನ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಇ.ಡಿ. ತಂಡಕ್ಕೆ ಆರ್ಥಿಕ ನೆರವು ನೀಡಿದವರ ವಿವರಗಳನ್ನು ಸಂಗ್ರಹಿಸಿತ್ತು. ಈ ವೇಳೆ ಸಿಕ್ಕಿದ ದಾಖಲೆಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಜಮೀರ್‌ಗೆ ಹಣ ನೀಡಿರೋದು ಅವರ ಗಮನಕ್ಕೆ ಬಂದಿತ್ತು. ಈಗ ಮತ್ತೆ ಈ ಕೇಸ್ ವೇಗವನ್ನು ಪಡೆದುಕೊಂಡಿದೆ. ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

ವಿಚಾರಣೆಗೆ ಹಾಜರಾಗಿದ್ದ ರಾಧಿಕಾ ಕುಮಾರಸ್ವಾಮಿ 2 ಕೋಟಿ ರೂಪಾಯಿಯನ್ನು ಜಮೀರ್ ಅಹಮದ್ ಖಾತೆಗೆ ವರ್ಗಾವಣೆ ಮಾಡಿದ್ದೇಕೆ? ಅನ್ನೋದನ್ನು ಹೇಳಿದ್ದಾರೆ ಎನ್ನಲಾಗಿದೆ. 2012ರಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿಯಾಗಿ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆ 'ಶಮಿಕಾ ಎಂಡರ್‌ಪ್ರೈಸಸ್' ಮೂಲಕ 'ಲಕ್ಕಿ' ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ ಹಾಗೂ ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Radhika Kumaraswamy gave clarity on transferring Rs 2 crore to Zameer Ahmed Khan Here is the details

'ಲಕ್ಕಿ' ಸಿನಿಮಾ ನಿರ್ಮಾಣದ ವೇಳೆ ಥಿಯೇಟರ್‌ನಿಂದ ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ಬಂದ ಲಾಭಾಂಶದಲ್ಲಿ ಎರಡು ಕೋಟಿ ರೂಪಾಯಿಗಳನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಾಲದ ರೂಪದಲ್ಲಿ ನೀಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ಮಾಡಲಾಗಿದೆ. ಸದ್ಯಕ್ಕೀಗ ರಾಧಿಕಾ ಕುಮಾರಸ್ವಾಮಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತರು ₹2 ಕೋಟಿ ನೀಡಿದ್ದಕ್ಕಾಗಿ ಪೂರಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದು ರಾಧಿಕಾ ಕುಮಾರಸ್ವಾಮಿ ಕಥೆಯಾದರೆ, ಇನ್ನೊಂದು ಕಡೆ ಮತ್ತೊಂದೆಡೆ ಈ ನಟಿಯಂತೆ ಇನ್ನೂ ಅನೇಕ ಮಂದಿಯಿಂದ ಕೂಡ ಜಮೀರ್ ಅಹಮದ್ ಖಾನ್ ಹಣ ಪಡೆದಿದ್ದರು ಅನ್ನೋ ಮಾತು ಕೇಳಿ ಬರುತ್ತಿದೆ. ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳ ಸೇರಿದಂತೆ ಹಲವರಿಂದ ಜಮೀರ್ ಅಹಮದ್ ಖಾನ್ ಹಣ ಪಡೆದಿರುವ ಆರೋಪವಿದೆ. ಈ ಸಂಬಂಧ ಲೋಕಾಯುಕ್ತ ತನಿಖೆಯನ್ನು ಮುಂದುವರೆಸಿದೆ.

More from Filmibeat

English summary
Radhika Kumaraswamy gave clarity on transferring Rs.2 crore to Zameer Ahmed Khan Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X