ಅಮಾವಾಸ್ಯೆಯಂದು ಸ್ಮಶಾನದಲ್ಲಿ ಬಿದ್ದು ಬೆನ್ನಿಗೆ ಪೆಟ್ಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ.!

Recommended Video

ಭೈರಾದೇವಿ ಶೂಟಿಂಗ್‍ನಲ್ಲಿ ಅವಘಡ | FILMIBEAT KANNADA

ಅದು ಅಮಾವಾಸ್ಯೆಯ ರಾತ್ರಿ.. ದುಷ್ಟ ಶಕ್ತಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಕನ್ನಡ ಚಿತ್ರ 'ಭೈರಾದೇವಿ' ಚಿತ್ರೀಕರಣ ಬಿರುಸಿನಿಂದ ಸಾಗುತ್ತಿತ್ತು. ಶಾಂತಿನಗರದ ಸ್ಮಶಾನದಲ್ಲಿ 'ಭೈರಾದೇವಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಇದಕ್ಕಾಗಿ ನಟಿ ರಾಧಿಕಾ ಕುಮಾರಸ್ವಾಮಿ ಕಾಳಿ ಅವತಾರ ತಾಳಿದ್ದರು.

ಆಗ ಸಮಯ ಸುಮಾರು 1 ಗಂಟೆ.. ಕಾಳಿ ರೂಪದಲ್ಲಿದ್ದ ರಾಧಿಕಾ ಕುಮಾರಸ್ವಾಮಿ ಗೋರಿ ಮೇಲೆ ನಡೆದುಕೊಂಡು ಬರಬೇಕಿತ್ತು. ಹಾಗೆ ಕಾಳಿ ಮಂತ್ರ ಪಠಿಸುತ್ತಲೇ ಗೋರಿ ಮೇಲೆ ನಡೆದುಕೊಂಡು ಬರುವಾಗ ಅವಘಡ ಸಂಭವಿಸಿತು.

ಅಚಾನಕ್ಕಾಗಿ ಆಯಾತಪ್ಪಿ ಗೋರಿಯಿಂದ ಕೆಳಗೆ ಬಿದ್ದು ಬಿಟ್ಟರು ನಟಿ ರಾಧಿಕಾ ಕುಮಾರಸ್ವಾಮಿ. ಪರಿಣಾಮ, ಅವರ ಬೆನ್ನಿಗೆ ಪೆಟ್ಟು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರಾದ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಬೆಡ್ ರೆಸ್ಟ್ ನಲ್ಲಿದ್ದಾರೆ. ಮುಂದೆ ಓದಿರಿ...

ಬಿದ್ದಾಗ ಏನೂ ಗೊತ್ತಾಗಲಿಲ್ಲ.!

ಬಿದ್ದಾಗ ಏನೂ ಗೊತ್ತಾಗಲಿಲ್ಲ.!

ಗೋರಿ ಮೇಲಿಂದ ಕೆಳಗೆ ಬಿದ್ದಾಗ, ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋವು ಕಾಣಿಸಿಕೊಂಡಿಲ್ಲ. ಹೀಗಾಗಿ, ಅಂದು ಚಿತ್ರೀಕರಣ ಮುಂದುವರೆಸಿದ್ದಾರೆ. ಆದ್ರೆ, ಮಾರನೇ ದಿನ ಅವರಿಗೆ ಬೆನ್ನಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟರು.

ಸ್ಪೈನಲ್ ಕಾರ್ಡ್ ಗೆ ಏಟು.!

ಸ್ಪೈನಲ್ ಕಾರ್ಡ್ ಗೆ ಏಟು.!

ಗೋರಿಯಿಂದ ಬಿದ್ದ ರಾಧಿಕಾ ಕುಮಾರಸ್ವಾಮಿ ಅವರ ಸ್ಪೈನಲ್ ಕಾರ್ಡ್ ಗೆ ಏಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿ ಇರುವಂತೆ ವೈದ್ಯರು ರಾಧಿಕಾ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.

ಇನ್ನೊಂದು ತಿಂಗಳು ಶೂಟಿಂಗ್ ಇಲ್ಲ.!

ಇನ್ನೊಂದು ತಿಂಗಳು ಶೂಟಿಂಗ್ ಇಲ್ಲ.!

ಇನ್ನೊಂದು ತಿಂಗಳು ಕದಲುವ ಹಾಗಿಲ್ಲ ಅಂತ ವೈದ್ಯರು ಹೇಳಿರುವ ಕಾರಣ, ಯಾವುದೇ ಚಿತ್ರೀಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಭಾಗವಹಿಸುವಂತಿಲ್ಲ. ಹೀಗಾಗಿ, 'ಭೈರಾದೇವಿ' ಚಿತ್ರದ ಶೂಟಿಂಗ್ ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ.

ನಿರ್ದೇಶಕ ಶ್ರೀಜೈ ಏನಂತಾರೆ.?

ನಿರ್ದೇಶಕ ಶ್ರೀಜೈ ಏನಂತಾರೆ.?

''ಅಮಾವಾಸ್ಯೆ ದಿನ ಈ ಘಟನೆ ನಡೆಯಿತು. ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಶೂಟಿಂಗ್ ಮಾಡ್ತಿದ್ವಿ. ಗೋರಿ ಮೇಲೆ ನಡೆದುಕೊಂಡು ಬರುವಾಗ ರಾಧಿಕಾ ಮೇಡಂ ಕೆಳಗೆ ಬಿದ್ದರು. ಬಿದ್ದಾಗ ಅವರಿಗೆ ಏನೂ ಅನಿಸಲಿಲ್ಲ. ಅವತ್ತು ಶೂಟಿಂಗ್ ಮಾಡಿದ್ವಿ. ಮಾರನೇ ದಿನ ರೆಸ್ಟ್ ಮಾಡಿ ಅಂತ ಹೇಳಿದ್ವಿ. ಮೈನರ್ ಪೆಟ್ಟಾಗಿದೆ. ಒಂದು ತಿಂಗಳು ರೆಸ್ಟ್ ನಲ್ಲಿ ಇರ್ತಾರೆ'' ಅಂತಾರೆ 'ಭೈರಾದೇವಿ' ಚಿತ್ರದ ನಿರ್ದೇಶಕ ಶ್ರೀಜೈ.

More from Filmibeat

English summary
Kannada Actress Radhika Kumaraswamy injured while shooting for Kannada Movie Bhairadevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X