Bhairadevi Box Office Day 2: ಬಾಕ್ಸಾಫೀಸ್‌ನಲ್ಲೂ ಭಯ ಹುಟ್ಟಿಸಿದಳಾ 'ಭೈರಾದೇವಿ'? 2 ದಿನಗಳ ಕಲೆಕ್ಷನ್ ಎಷ್ಟು?

ರಾಧಿಕಾ ಕುಮಾರಸ್ವಾಮಿ ಬಹಳ ದಿನಗಳ ಬಳಿಕ ಮತ್ತೆ ಬೆಳ್ಳಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳಿಂದ ನಿರ್ಮಾಣ ಆಗುತ್ತಿದ್ದ 'ಭೈರಾದೇವಿ' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಸಿನಿಮಾ ನೋಡಿದ ಪ್ರೇಕ್ಷಕರು 'ಭೈರಾದೇವಿ' ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹೊಸ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ ನೋಡಿ ಬೆಚ್ಚಿಬಿದ್ದಿದ್ದಾರೆ.

'ಭೈರಾದೇವಿ' ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕತೆಯಲ್ಲೇನು ವಿಶೇಷತೆ ಇಲ್ಲದೆ ಇದ್ದರೂ, ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಸಿನಿಮಾ ರಿಲೀಸ್ ಆಗಿ ಈಗ ಎರಡನೇ ದಿನಕ್ಕೆ ಕಾಲಿಟ್ಟಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು.

Radhika Kumaraswamy Ramesh Aravind starrer Bhairadevi Box Office Day 2 Collection report

ರಾಧಿಕಾ ಕುಮಾರಸ್ವಾಮಿ ಜೊತೆ ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹಾರರ್ ಸಿನಿಮಾ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಶ್ರೀಜೈ ನಿರ್ದೇಶಿಸಿದ ಈ ಹಾರರ್ ಜಾನರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆಯಾ? ಎರಡು ದಿನಗಳ ಬಾಕ್ಸಾಫೀಸ್ ಗಳಿಕೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಭೈರಾದೇವಿ' 2ನೇ ದಿನದ ಕಲೆಕ್ಷನ್ ಎಷ್ಟು?

'ಭೈರಾದೇವಿ' ರಾಧಿಕಾ ಕುಮಾರಸ್ವಾಮಿ ಇಷ್ಟ ಪಟ್ಟು ಮಾಡಿರುವ ಸಿನಿಮಾ. ಇಲ್ಲಿವರೆಗೂ ಸ್ವೀಟಿಯಾಗಿ ನಟಿಸಿದ್ದ ರಾಧಿಕಾ ಈಗ 'ಭೈರಾದೇವಿ' ಅವತಾರವೆತ್ತಿ ತೆರೆಗೆ ಬಂದಿದ್ದಾರೆ. ರಾಧಿಕಾ ಅವರನ್ನು ಈ ಅವತಾರದಲ್ಲಿ ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಆದರೆ, ಬಾಕ್ಸಾಫೀಸ್‌ನಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡಿಲ್ಲ. ಇಂಡಸ್ಟ್ರಿ ಟ್ರೇಡರ್ Sacnilk ಪ್ರಕಾರ 'ಭೈರಾದೇವಿ' ಎರಡನೇ ದಿನದ ಕಲೆಕ್ಷನ್ 10 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ಎರಡು ದಿನಗಳ ಗಳಿಕೆ ಎಷ್ಟು?

ರಾಧಿಕಾ ಕುಮಾರಸ್ವಾಮಿ 'ಭೈರಾದೇವಿ' ಎರಡು ದಿನಗಳ ಗಳಿಕೆ ಇಂಡಸ್ಟ್ರಿ ಟ್ರ್ಯಾಕರ್ ಪ್ರಕಾರ ಅಷ್ಟೊಂದು ಇಂಪ್ರೆಸಿವ್ ಆಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ. ಮೊದಲ ಎರಡು ದಿನಗಳಲ್ಲಿ 'ಭೈರಾದೇವಿ' 20 ರಿಂದ 25 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿರಬಹುದೆಂದು ವಿತರಕರ ವಲಯದಲ್ಲಿ ಕೇಳಿ ಬರುತ್ತಿದೆ.

ವೀಕೆಂಡ್ ಕಲೆಕ್ಷನ್ ಮುಖ್ಯ

'ಭೈರಾದೇವಿ' ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಕಾಣಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಪ್ರೇಕ್ಷಕರು ಕುಟುಂಬ ಸಮೇತರಾಗಿ ಈ ಸಿನಿಮಾವನ್ನು ನೋಡುವುದಕ್ಕೆ ಥಿಯೇಟರ್‌ಗೆ ಬರುವ ನಿರೀಕ್ಷೆಯಿದೆ. ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್, ಅನುಪ್ರಭಾಕರ್ ಅಂತ ಕಲಾವಿದರನ್ನು ನೋಡುವುದಕ್ಕೆ ಸಿನಿಮಾ ಮಂದಿ ಥಿಯೇಟರ್‌ನತ್ತ ಮುನ್ನುಗ್ಗುವ ನಿರೀಕ್ಷೆಯಿದೆ.

ನವರಾತ್ರಿ ಪ್ರಭಾವ ಬೀರಬಹುದೇ?

ನವರಾತ್ರಿ ಹಬ್ಬ ಆರಂಭ ಆಗಿದೆ. ಈ ಹಬ್ಬದ ಸಂದರ್ಭದಲ್ಲೇ 'ಭೈರಾದೇವಿ' ರಿಲೀಸ್ ಆಗಿದೆ. ಹೀಗಾಗಿ ಮುಂದಿನ ಒಂದು ವಾರ ಜನರು ಹಬ್ಬದ ಮೂಡ್‌ನಲ್ಲಿ ಇರುತ್ತಾರೆ. ಇದೇ ವೇಳೆ ಸಿನಿಮಾ ರಿಲೀಸ್ ಆಗುತ್ತಿದ್ದರಿಂದ ಮುಂದಿನ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಆಗುತ್ತೆ ಅನ್ನೋ ನಿರೀಕ್ಷೆಯಿದೆ. ಹಬ್ಬದ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಮತ್ತಷ್ಟು ಕಲೆಕ್ಷನ್ ಆಗಬಹುದೆಂದು ನಿರೀಕ್ಷೆಯಿದೆ. ಏನಕ್ಕೂ 'ಭೈರಾದೇವಿ'ಗೆ ಈ ವೀಕೆಂಡ್ ಹಾಗೂ ಮುಂದಿನ ಒಂದು ವಾರ ಬಹಳ ಮುಖ್ಯ. ಈ ಕಾರಣಕ್ಕೆ ರಾಧಿಕಾ ಕುಮಾರಸ್ವಾಮಿ ಸಿನಿಮಾ ಗಳಿಕೆ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ.

ಸೂಚನೆ: ಈ ಬಾಕ್ಸಾಫೀಸ್ ಲೆಕ್ಕಾಚಾರ ಟ್ರೇಡ್ ಎಕ್ಸ್‌ಪರ್ಟ್ಸ್, ವಿತರಕರ ವಲಯ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ಅಂಕಿ ಅಂಶ. 'ಭೈರಾದೇವಿ' ಚಿತ್ರತಂಡ ಬಾಕ್ಸಾಫೀಸ್‌ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನೂ ನೀಡಬೇಕಿದೆ.

More from Filmibeat

English summary
Radhika Kumaraswamy Ramesh Aravind starrer Bhairadevi Box Office Day 2 Collection report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X