Bhairadevi Box Office Day 4:ಭಾನುವಾರ ಖುಷಿ ಕೊಟ್ಟ 'ಭೈರಾದೇವಿ' ; ನಾಲ್ಕನೇ ದಿನ ಹೇಗಿದೆ ಕಲೆಕ್ಷನ್?

ರಾಧಿಕಾ ಕುಮಾರಸ್ವಾಮಿ ಬಹಳ ದಿನಗಳ ನಂತರ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. 'ಬೈರಾದೇವಿ' ಅವತಾರ ತಾಳಿರುವ ಈ ಸಿನಿಮಾ ಬಿಡುಗಡೆಯಾಗಿ ಐದನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ನಾಲ್ಕನೇ ದಿನ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ.

'ಭೈರಾದೇವಿ' ರಾಧಿಕಾ ಕುಮಾರಸ್ವಾಮಿ ವೃತ್ತಿ ಬದುಕಿನ ವಿಭಿನ್ನ ಸಿನಿಮಾ. ಸ್ಯಾಂಡಲ್‌ವುಡ್‌ನಲ್ಲಿ ಇಲ್ಲಿವರೆಗೂ ಲವ್‌ ಸ್ಟೋರಿಗಳಲ್ಲಿ, ಅಳುಮುಂಜಿ ಪಾತ್ರಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದರು. ಈ ಬಾರಿ ಕೊಂಚ ವಿಭಿನ್ನ ಪಾತ್ರದಲ್ಲಿ 'ಭೈರಾದೇವಿ' ನಟಿಸಿದ್ದಾರೆ. ಈ ಕಾರಣಕ್ಕೆ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಬಹುದು ಎಂಬ ನಿರೀಕ್ಷೆಯಿತ್ತು.

Radhika Kumaraswamy Ramesh Aravind starrer Bhairadevi Box Office Day 4 Collection report

ನವರಾತ್ರಿ ಸಮಯದಲ್ಲಿ 'ಭೈರಾದೇವಿ' ಸಿನಿಮಾ ರಿಲೀಸ್ ಆಗಿತ್ತು. ಹಬ್ಬದ ಮೂಡಿನಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ಮೂರು ದಿನ ಕಲೆಕ್ಷನ್‌ ಅಷ್ಟಕ್ಕಷ್ಟೆ. ಆದರೆ, ನಾಲ್ಕನೇ ದಿನ ಅಂದರೆ, ನಿನ್ನೆ (ಅಕ್ಟೋಬರ್ 6) ಬಾಕ್ಸಾಫೀಸ್‌ ಗಳಿಕೆಯಲ್ಲಿ ಏರಿಕೆಯಾಗಿದೆ. ಅಷ್ಟಕ್ಕೂ ನಾಲ್ಕನೇ ದಿನ 'ಭೈರಾದೇವಿ' ಸಿನಿಮಾ ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಓದಿ.

'ಭೈರಾದೇವಿ' 4ನೇ ದಿನದ ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ 'ಅರುಂಧತಿ'ಯಂತಹ ಒಂದು ಸಿನಿಮಾ ಬರಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಅಂತಹದ್ದೇ ಮಾದರಿಯಲ್ಲಿ ಕನ್ನಡದಲ್ಲಿ ಸಿನಿಮಾ ಮಾಡುವ ಪ್ರಯತ್ನ ಆಗುತ್ತಲೇ ಇತ್ತು. ಅದರಂತೆಯೇ ರಾಧಿಕಾ ಕುಮಾರಸ್ವಾಮಿ ಕೂಡ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು. ಅದುವೇ 'ಭೈರಾದೇವಿ'. ಈ ಸಿನಿಮಾ ನಾಲ್ಕನೇ ದಿನದಲ್ಲಿ 100 ಪರ್ಸೆಂಟ್ ಏರಿಕೆಯಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 20 ರಿಂದ 25 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ ಎಂದು ವರದಿ ಮಾಡಿದ್ದಾರೆ. Sacnilk ಪ್ರಕಾರ 'ಭೈರಾದೇವಿ' ನಾಲ್ಕನೇ ದಿನ 20 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

Radhika Kumaraswamy Ramesh Aravind starrer Bhairadevi Box Office Day 4 Collection report

ನಾಲ್ಕು ದಿನಗಳ ಒಟ್ಟು ಗಳಿಕೆ ಎಷ್ಟು?

'ಭೈರಾದೇವಿ' ಸಿನಿಮಾ ನಾಲ್ಕು ದಿನಗಳಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಮೊದಲ ದಿನ ಈ ಸಿನಿಮಾ 10 ಲಕ್ಷ ರೂಪಾಯಿ, ಎರಡನೇ ದಿನ 10 ಲಕ್ಷ ರೂ. ಮೂರನೇ ದಿನವೂ ಹೆಚ್ಚು ಕಡಿಮೆ 10 ಲಕ್ಷ ರೂ. ಕಲೆಕ್ಷನ್ ಆಗಿತ್ತು ಎಂದು ವಿತರಕರ ವಲಯದಲ್ಲಿ ಚರ್ಚೆಯಾಗಿತ್ತು. ಇನ್ನು ನಾಲ್ಕನೇ ದಿನ 20 ಲಕ್ಷ ರೂಪಾಯಿ ಗಳಿಕೆ ಆಗಿತ್ತು. ಒಟ್ಟು ನಾಲ್ಕು ದಿನಗಳಲ್ಲಿ 50 ರಿಂದ 60 ಲಕ್ಷ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದೆ.

ಸೋಮವಾರದ ಪರೀಕ್ಷೆ ಗೆಲ್ಲುತ್ತಾ?

ವೀಕೆಂಡ್‌ನಲ್ಲಿ ವೀಕ್ ಆಗಿದ್ದ ಸಿನಿಮಾ ವೀಕ್ ಡೇಸ್‌ನಲ್ಲಿ ಹೇಗಿರುತ್ತೆ ಅನ್ನೋ ಕುತೂಹಲವಿದೆ. 'ಭೈರಾದೇವಿ' ಸೋಮವಾರದ ಪರೀಕ್ಷೆಯಲ್ಲಿ ಗೆಲ್ಲುತ್ತಾ? ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಇನ್ನೊಂದು ಕಡೆ ರಾಧಿಕಾ ಕುಮಾರಸ್ವಾಮಿ ಕೂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯ, ಮೈಸೂರು ಭಾಗದ ಥಿಯೇಟರ್‌ಗಳಿಗೆ ವಿಸಿಟ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ.

ನವರಾತ್ರಿಯಲ್ಲಿ 'ಭೈರಾದೇವಿ'

ದಸರಾದ ಸಂಭ್ರಮದಲ್ಲಿ 'ಭೈರಾದೇವಿ' ಸಿನಿಮಾ ರಿಲೀಸ್ ಆಗಿದೆ. ಈ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಹಾಗೇ ಬ್ಯಾಕ್ ಟು ಬ್ಯಾಕ್ ರಜೆಗಳನ್ನು ಆರಂಭ ಆಗುತ್ತವೆ. ಈ ದಿನಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗಬಹುದು. ಕಲೆಕ್ಷನ್ ಕೋಟಿ ದಾಟಬಹುದು ಎಂಬ ನಿರೀಕ್ಷೆಯಿದೆ. ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್ ಹಾಗೂ ಅನುಪ್ರಭಾಕರ್ ನಟಿಸಿರುವ ಈ ಸಿನಿಮಾ ಇನ್ನೂ ನಿರೀಕ್ಷೆಯಂತೂ ಕಮ್ಮಿಯಾಗಿಲ್ಲ.

ಸೂಚನೆ: ಬಾಕ್ಸಾಫೀಸ್ ಗಳಿಕೆಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಆದರೆ, ಚಿತ್ರತಂಡ ಅಧಿಕೃತವಾಗಿ ಅಂಕಿ ಅಂಶಗಳನ್ನು ಇನ್ನೂ ಬಿಡುಗಡೆ ಮಾಡಬೇಕಿದೆ.

More from Filmibeat

English summary
Radhika Kumaraswamy Ramesh Aravind starrer Bhairadevi Box Office Day 4 Collection report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X