ರಾಧಿಕಾ ಕುಮಾರಸ್ವಾಮಿ ಸಿನಿಮಾ ನೋಡಿ ನಿರ್ಮಾಪಕ ದಿಲ್ ಖುಷ್; ನಿರ್ದೇಶಕನಿಗೆ ಬಂಪರ್ ಗಿಫ್ಟ್
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ದುಬಾರಿ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಆದರೆ, ಈ ಸಿನಿಮಾ ಏನಾಯ್ತು? ಅನ್ನೋ ಸುಳಿವು ಇರಲಿಲ್ಲ. ಚಿತ್ರತಂಡ ಕೂಡ ಸಿನಿಮಾ ಬಗ್ಗೆ ಚಿಕ್ಕದೊಂದು ಅಪ್‌ಡೇಟ್ ಕೂಡ ನೀಡಿರಲಿಲ್ಲ. ಆದ್ರೀಗ ಸದ್ದಿಲ್ಲದೆ ರಾಧಿಕಾ ಕುಮಾರಸ್ವಾಮಿ ಸಿನಿಮಾವನ್ನು ಮುಗಿಸಿದ್ದಾರೆ. ಅಂದ್ಹಾಗೆ, ಏಳು ಭಾಷೆಯಲ್ಲಿ ರಿಲೀಸ್ ಆಗಲಿರುವ ಆ ಸಿನಿಮಾವೇ 'ಅಜಾಗ್ರತ'.
ರಾಧಿಕಾ ಕುಮಾರಸ್ವಾಮಿ ರೆಗ್ಯೂಲರ್ ಆಗಿ ಸಿನಿಮಾ ಮಾಡುತ್ತಿಲ್ಲ. ಅಳೆದು ತೂಗಿ ತಮಗೆ ಇಷ್ಟ ಆದರೆ, ಮಾತ್ರ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಇತ್ತೀಚೆಗಂತೂ ಹೆಚ್ಚಾಗಿ ತಮ್ಮದೇ ಹೋಮ್ ಪ್ರೊಡಕ್ಷನ್‌ನಲ್ಲೇ ಹೆಚ್ಚಾಗಿ ಸಿನಿಮಾ ಮಾಡುತ್ತಿದ್ದಾರೆ. ಈಗ ನಟಿಸಿರುವ 'ಅಜಾಗ್ರತ' ಸಿನಿಮಾ ಕೂಡ ಅವರದ್ದೇ ಪ್ರೊಡಕ್ಷನ್. ರಾಧಿಕಾ ಕುಮಾರಸ್ವಾಮಿ ಸಹೋದರನೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

'ಅಜಾಗ್ರತ' ಸಿನಿಮಾ ಬಹುತೇಕ ಸಿನಿಮಾ ಮುಗಿದಿದೆ. ಸದ್ದಿಲ್ಲದೆ, ಹೆಚ್ಚೇನು ಸುಳಿವು ಬಿಟ್ಟುಕೊಳ್ಳದೆ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಈ ಸಿನಿಮಾ ರಫ್ ಕಾಪಿ ರೆಡಿಯಾಗಿದ್ದು, ನಿರ್ಮಾಪಕ ರವಿರಾಜ್ ಫುಲ್ ಖುಷಿಯಾಗಿದ್ದಾರೆ. ಸಿನಿಮಾ ನೋಡಿ ಮೆಚ್ಚಿಕೊಂಡಿರುವ ನಿರ್ಮಾಪಕರು ಬಿಡುಗಡೆಗೂ ಮುನ್ನವೇ ನಿರ್ದೇಶಕ ಎಂ.ಶಶಿಧರ್ ಅವರಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.
ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಹೋದರ ರವಿರಾಜ್ 'ಅಜಾಗ್ರತ' ಸಿನಿಮಾದ ನಿರ್ಮಾಪಕನಾಗಿದ್ದರೆ, ಎಂ.ಶಶಿಧರ್ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿದಿದ್ದು ರಫ್ ಕಾಪಿ ಬಂದಿದೆ. 'ಅಜಾಗ್ರತ' ಸಿನಿಮಾದ ರಫ್ ಕಾಪಿ ನೋಡಿ ಖುಷಿ ಪಟ್ಟಿರೋ ನಿರ್ಮಾಪಕರು ಸಿನಿಮಾದ ನಿರ್ದೇಶಕ ಶಶಿಧರ್‌ಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಾರನ್ನು ಉಡುಗೊರೆಯಾಗಿ ನೀಡಿದ ಕ್ಷಣವನ್ನು ನಿರ್ಮಾಪಕ ರವಿರಾಜ್ ಹೇಳಿ ಖುಷಿ ಪಟ್ಟಿದ್ದಾರೆ. "ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ, ಅದಕ್ಕೂ ಹೆಚ್ಚಾಗಿಯೇ ಸಿನಿಮಾವನ್ನು ಚೆನ್ನಾಗಿ ಮಾಡಿ ಮುಗಿಸಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾ ನೋಡಿ ನನಗೆ ತುಂಬಾ ಖುಷಿಯಾಗಿದೆ. ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿರುವ ನಿರ್ದೇಶಕರಿಗೆ ಉಡುಗೊರೆ ನೀಡುವ ಮನಸ್ಸಾಯಿತು. ಹಾಗಾಗಿ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡುತ್ತೀದ್ದೇನೆ" ಎಂದು ನಿರ್ಮಾಪಕ ರವಿರಾಜ್ ತಿಳಿಸಿದ್ದಾರೆ.

'ಅಜಾಗ್ರತ' ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಬಾಲಿವುಡ್‌ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ತಮಿಳು ನಟ ಬಾಬಿ ಸಿಂಹ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ತೆಲುಗಿನ ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿ.
ರಾಧಿಕಾ ಕುಮಾರಸ್ವಾಮಿ ನಟಿಸಿದ 'ಅಜಾಗ್ರತ' ಸಿನಿಮಾ ಕನ್ನಡ, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ನಿರ್ಮಾಪಕ ರವಿರಾಜ್ ನಾಯಕಿಯ ಹುಡುಕಾಟದಲ್ಲಿದ್ದಾಗ ರಾಧಿಕಾ ಕುಮಾರಸ್ವಾಮಿಯನ್ನೇ ಆಯ್ಕೆ ಸಲಹೆ ಬಂದಿತ್ತು. ಆ ಕಾರಣಕ್ಕೆ ಈ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ರಾಧಿಕಾ ಈ ಹಿಂದೆ ಹೇಳಿಕೊಂಡಿದ್ದರು. ಸದ್ಯ ಈ ಸಿನಿಮಾಗೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಸಾಹಸ ನಿರ್ದೇಶನವಿದೆ.


Click it and Unblock the Notifications











