ರಾಧಿಕಾ ಪಂಡಿತ್ 41ನೇ ಹುಟ್ಟುಹಬ್ಬ: ಜೊತೆಯಲಿ ಜೊತೆ ಜೊತೆಯಲಿ ಎಂದು ಹಾಡಿದ ರಾಕಿ ಭಾಯ್
ಸ್ಯಾಂಡಲ್‌ವುಡ್‌ನ ಸಿಂಡ್ರೆಲ್ಲ ರಾಧಿಕಾ ಪಂಡಿತ್ ಮಾರ್ಚ್ 7ರಂದು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಭಿಮಾನಿಗಳು ರಾಧಿಕಾ ಪಂಡಿತ್‌ಗೆ ಮನಸಾರೆ ಶುಭಾಶಯಗಳನ್ನು ಕೋರಿದ್ದರು. ಪತಿ ರಾಕಿ ಭಾಯ್ ಯಶ್ ಹಾಗೂ ಆತ್ಮೀಯರೊಂದಿಗೆ ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದರು. ಆಗಲೂ ಅಭಿಮಾನಿಗಳು ನಟಿಗೆ ಭರಪೂರ ಶುಭಾಶಯವನ್ನೇ ಕೋರಿದ್ದರು.
ಈಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸ್ವತ: ರಾಧಿಕಾ ಪಂಡಿತ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಯಶ್ ಪತ್ನಿಗಾಗಿ ಶಂಕರ್ ನಾಗ್ ಸಿನಿಮಾದ "ಜೊತೆಯಲಿ ಜೊತೆ ಜೊತೆಯಲಿ" ಹಾಡನ್ನು ಹಾಡಿದ್ದರು. ಆ ವಿಡಿಯೋವನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಪತ್ನಿಯ ಹುಟ್ಟುಹಬ್ಬವನ್ನು ಮಾತ್ರ ಮಿಸ್ ಮಾಡಿಲ್ಲ. ಪತ್ನಿ ರಾಧಿಕಾ ಪಂಡಿತ್ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಆ ವಿಶೇಷ ದಿನವನ್ನು ರಾಧಿಕಾಗಾಗಿಯೇ ಮೀಸಲಿಟ್ಟಿದ್ದರು. ರೆಸ್ಟೋರೆಂಟ್ ಒಂದರಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದು, ವೇದಿಕೆ ಮೇಲೆ ಮೈ ಹಿಡಿದು ಜೊತೆಯಲಿ ಜೊತೆ ಜೊತೆಯಲಿ ಎಂದು ಹಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.
ಹೌದು, ಯಶ್ ವೇದಿಕೆ ಮೇಲೆ ಮೈಕ್ ಹಿಡಿದು ಪತ್ನಿ ರಾಧಿಕಾ ಪಂಡಿತ್‌ಗೆ ಜೊತೆಯಲಿ ಜೊತೆ ಜೊತೆಯಲಿ ಹಾಡಿದ್ದಾರೆ. ರಾಕಿ ಭಾಯ್ ಸರ್ಪ್ರೈಸ್ ಕೊಟ್ಟು ರಾಧಿಕಾ ಪಂಡಿತ್ ಮುಖದಲ್ಲಿ ಖುಷಿಯನ್ನು ಮೂಡಿಸಿದ್ದಾರೆ. ಯಶ್ ವೇದಿಕೆ ಮೇಲೆ ಹಾಡುತ್ತಿದ್ದರೆ, ವೇದಿಕೆ ಕೆಳಗೆ ರಾಧಿಕಾ ನಿಂತಿದ್ದರು. ಜೊತೆಗೆ ಅವರೊಂದಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಆತ್ಮೀಯರು ಕೂಡ ಸೇರಿಕೊಂಡಿದ್ದು, ಯಶ್‌ಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಈ ವಿಡಿಯೋವನ್ನು ರಾಧಿಕಾ ಪಂಡಿತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ, " ಇದು ನಮ್ಮ ಸಾಂಗ್. ಯಾವಾಗಲೂ ಜೊತೆಯಲಿ ಜೊತೆ ಜೊತೆಯಲಿ. ನನ್ನ ಹೃದಯ? ಇನ್ನೂ ಓಡುತ್ತಲೇ ಇದೆ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ರಾಧಿಕಾ ಪಂಡಿತ್ ಹಾಗೂ ಯಶ್ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಜೋಡಿಗೆ ಶುಭವನ್ನು ಹಾರೈಸಿದ್ದಾರೆ.
ನೆಟ್ಟಿಗರೊಬ್ಬರು "ಅಣ್ಣ ಅತ್ತಿಗೆ ಯಾವಾಗಲೂ ಇದೇ ತರ ನಗುತ್ತಾ ಇರಿ" ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಬರ್ತಡೇ ಪಾರ್ಟಿಗಳಲ್ಲಿ ಪರಭಾಷಾ ಹಾಡಿಗೆ ಕುಣಿಯುವ ನಟ ನಟಿಯರ ಮಧ್ಯೆ ಅಲ್ಲೊಬ್ಬ ಕನ್ನಡ ಗೀತೆಯನ್ನು ಹಾಡ್ತಿದ್ದ" ಡೈಲಾಗ್ ಬಿಟ್ಟಿದ್ದಾರೆ. "ಆಕ್ಟಿಂಗು ಸೈ ಸಿಂಗಿಂಗು ಸೈ ಯಶ್ ಬಾಸ್" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸದಾಕಾಲ ಇದೇ ರೀತಿ ಜೊತೆಯಾಗಿರಿ ರಾಧೆ ಯಶ್.. ರಾಧೆ ರಾಧೆ" ಎಂದಿದ್ದಾರೆ. ಹೀಗೆ ತಮ್ಮ ನೆಟ್ಟಿನ ಸ್ಟಾರ್ ದಂಪತಿಗೆ ಖುಷಿ ಖುಷಿಯಾಗಿ ಕಾಮೆಂಟ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಪ್ರೀತಿಗೆ ಎರಡು ದಶಕಗಳ ಸಂಭ್ರಮ 2004ರ 'ನಂದ ಗೋಕುಲ' ಧಾರಾವಾಹಿಯಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿ ಮದುವೆವರೆಗೂ ಬಂದು ನಿಂತಿತ್ತು. 2016ರಲ್ಲಿ ಗೋವಾದಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಡಿಸೆಂಬರ್ 16ರಂದು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಆಯ್ರಾ ಹಾಗೂ ಯಥರ್ವ್ ಇಬ್ಬರು ಮಕ್ಕಳು ಇದ್ದಾರೆ. ಪರಿಸಂಪೂರ್ಣ ಕುಟುಂಬದಲ್ಲಿ ರಾಕಿಂಗ್ ದಂಪತಿ ಖುಷಿ ಖುಷಿಯಾಗಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಫ್ಯಾಮಿಲಿ ಸಂಭ್ರಮದಲ್ಲಿ ಭಾಗಿಯಾಗುವುದನ್ನು ಮಾತ್ರ ಮರೆಯುವುದಿಲ್ಲ. ಮಕ್ಕಳೊಂದಿಗೂ ಯಶ್ ಹೆಚ್ಚು ಸಮಯ ಕಳೆಯುತ್ತಾರೆ. ಆ ಮಧುರ ಕ್ಷಣಗಳನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.


Click it and Unblock the Notifications











