'ಬೈಕೋಬೇಡಿ' ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಸಿಂಡ್ರೆಲ್ಲಾ ರಾಧಿಕಾ ಪಂಡಿತ್

ತಮ್ಮ 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ರಾಧಿಕಾ ಪಂಡಿತ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ಜನ್ಮದಿನದ ಸಂಭ್ರಮವನ್ನು ಅಭಿಮಾನಿಗಳ ಜತೆಗೆ ಆಚರಿಸಲು ಸಾಧ್ಯವಾಗದೆ ಇರುವುದು.

Recommended Video

ಬೈಕೋಬೇಡಿ ಅಂತ ಕ್ಷಮೆ ಕೇಳಿದ ಸಿಂಡ್ರೆಲಾ

ಕನ್ನಡದ ಟಾಪ್ ನಟಿಯಾಗಿ, ಅಪ್ಪಟ ಕನ್ನಡದ ನಟಿಯಾಗಿಯೇ ಉಳಿದುಕೊಂಡ ರಾಧಿಕಾ ಪಂಡಿತ್ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಸಾವಿರಾರು ಸಂದೇಶಗಳ ಮಹಾಪೂರವೇ ಹರಿದುಬರುತ್ತಿವೆ. ಸಂಸಾರ ಬಂಧನದಲ್ಲಿ, ಮಕ್ಕಳೊಂದಿಗೆ ಬಿಜಿಯಾಗಿದ್ದರೂ ರಾಧಿಕಾ ಅವರ ಅಭಿಮಾನಿಗಳೇನೂ ಕಡಿಮೆಯಾಗಿಲ್ಲ. ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲಿ ಎಂದು ಆಗಾಗ್ಗೆ ಕೇಳಿಕೊಳ್ಳುತ್ತಲೇ ಇದ್ದಾರೆ.

ಸದ್ಯಕ್ಕೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಅವರು, ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆಗೆ ಆಚರಿಸಿಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಕ್ಷಮೆ ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಹೇಳಿರುವುದೇನು? ಮುಂದೆ ಓದಿ..

ನಿಮ್ಮ ಜತೆ ಆಚರಿಸಲಾಗುತ್ತಿಲ್ಲ...

ನಿಮ್ಮ ಜತೆ ಆಚರಿಸಲಾಗುತ್ತಿಲ್ಲ...

ಪ್ರತಿ ವರ್ಷ ನನ್ನ ಹುಟ್ಟುಹಬ್ಬದಂದು ನನ್ನನ್ನು ಭೇಟಿ ಮಾಡಲು, ವಿಷ್ ಮಾಡಲು ಬೇರೆ ಜಾಗಗಳಿಂದ, ಊರುಗಳಿಂದ ಬರುತ್ತೀರಾ ಎಂದು ನನಗೆ ಗೊತ್ತು. ಕಳೆದ ವರ್ಷ ಮಿಸ್ ಆಯ್ತು. ಈ ವರ್ಷ ಕೂಡ ನಿಮ್ಮ ಜತೆ ಬರ್ಥಡೇ ಸೆಲೆಬ್ರೇಟ್ ಮಾಡೋಕೆ ಆಗ್ತಾ ಇಲ್ಲ ಎಂದು ರಾಧಿಕಾ ಹೇಳಿದ್ದಾರೆ.

ಬೇಜಾರು ಮಾಡ್ಕೋಬೇಡಿ

ಬೇಜಾರು ಮಾಡ್ಕೋಬೇಡಿ

ಏಕೆಂದರೆ ನಿಮಗೆಲ್ಲರಿಗೂ ಗೊತ್ತು, ನನಗೆ ಎರಡು ಪುಟಾಣಿ ಮಕ್ಕಳಿದ್ದಾರೆ. ಹೀಗಾಗಿ ಈ ವರ್ಷ ಸೆಲೆಬ್ರೇಟ್ ಮಾಡುವುದು ಸ್ವಲ್ಪ ಕಷ್ಟ ಆಗಬಹುದು. ಅದಕ್ಕಾಗಿ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ. ನಿಮ್ಮೆಲ್ಲ ಸಂದೇಶಗಳು, ನೀವು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಶುಭಹಾರೈಕೆಗಳೆಲ್ಲ ನನ್ನ ಗಮನಕ್ಕೆ ಬರುತ್ತಿವೆ. ಪ್ರತಿ ಮೆಸೇಜ್‌ಗೂ ರಿಪ್ಲೈ ಮಾಡ್ತೀನಿ ಎಂದು ಅಭಿಮಾನಿಗಳನ್ನು ಸಂತೈಸಿದ್ದಾರೆ.

ಜನ್ಮದಿನ ಅಪೂರ್ಣ ಎನಿಸುತ್ತಿದೆ

ಜನ್ಮದಿನ ಅಪೂರ್ಣ ಎನಿಸುತ್ತಿದೆ

ನನಗೂ ಬೇಜಾರಾಗ್ತಿದೆ. ನನ್ನ ಜನ್ಮದಿನವನ್ನು ನಿಮ್ಮ ಜತೆ ಸೆಲೆಬ್ರೇಟ್ ಮಾಡಿಲ್ಲ ಎಂದರೆ ಏನೋ ಒಂಥರ ಅಪೂರ್ಣ ಎನಿಸುತ್ತಿದೆ. ಇಷ್ಟು ವರ್ಷ ನಿಮ್ಮ ಜತೆಗೆ ಆಚರಿಸುತ್ತಾ ಬರುತ್ತಿದ್ದೇನೆ. ಹೀಗಾಗಿ ಕಳೆದ ವರ್ಷದಿಂದಲೂ ನಿಮ್ಮ ಜತೆ ಆಚರಿಸದ ಜನ್ಮದಿನ ಅಪೂರ್ಣ ಎನಿಸುತ್ತಿದೆ ಎಂದು ಬೇಸರ ಹಂಚಿಕೊಂಡಿದ್ದಾರೆ.

ಮುಂದಿನ ವರ್ಷ ಅದ್ಧೂರಿ ಆಚರಣೆ

ಆದರೆ ಪ್ರಾಮಿಸ್ ಮಾಡ್ತೀನಿ ಮುಂದಿನ ವರ್ಷ ಎಲ್ಲರೂ ಭೇಟಿ ಮಾಡೋಣ. ಅದ್ಧೂರಿಯಾಗಿ ಆಚರಿಸೋಣ. ಬೇರೆ ಊರಿನಿಂದ ಬರುವವರಿಗೆ ನಿರಾಸೆ ಅಗಬಾರದು ಎಂದು ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ಥ್ಯಾಂಕ್ಯೂ ಸೋ ಮಚ್. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಹೀಗೆಯೇ ಇರಲಿ. ಆದಷ್ಟು ಬೇಗ ಸಿಗೋಣ ಎಂದು ಹೇಳಿದ್ದಾರೆ.

ಯಶ್ ಹೇಳಿದ್ದೇನು?

ಯಶ್ ಹೇಳಿದ್ದೇನು?

ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಣೆ ಮಾಡುವುದಿಲ್ಲ. ಇಬ್ಬರು ಮಕ್ಕಳಿದ್ದಾರೆ. ಕೊರೊನಾ ವೈರಸ್ ಇರುವುದರಿಂದ ತುಂಬ ಜನ ಸೇರಬಾರದು. ಗುಂಪಾಗಿ ಜನ ಸೇರಲಿಕ್ಕೆ ಆಗಲ್ಲ. ಹಾಗಾಗಿ ಸೆಲೆಬ್ರೇಟ್ ಮಾಡುವುದಿಲ್ಲ. ಸಂಜೆ ನಾವೆ ಒಟ್ಟಿಗೆ ಸೇರುತ್ತೆವೆ. ಒಟ್ಟಿಗೆ ಸಮಯ ಕಳೆಯುತ್ತೇವೆ" ಎಂದು ಯಶ್ ಹೇಳಿದ್ದರು.

More from Filmibeat

English summary
Actress Radhika Pandit apologised fans fot not celebrating her birthday with them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X