ಕುಟುಂಬದ ಸದಸ್ಯರೊಬ್ಬರನ್ನು ರಾಧಿಕಾ ಪಂಡಿತ್ ಪರಿಚಯಿಸಿದ್ದು ಹೀಗೆ...

ನಟಿ ರಾಧಿಕಾ ಪಂಡಿತ್ ತಮ್ಮ ಮನೆಯ ಸದಸ್ಯರೊಬ್ಬರು ಪರಿಚಯಿಸಿದ್ದಾರೆ. ಅವರಿಗಾಗಿ ತಯಾರಿಸಿದ್ದ ಬರ್ಥಡೇ ಕೇಕ್ ಜತೆಗಿರುವ ಫೋಟೊ ಹಂಚಿಕೊಂಡಿರುವ ರಾಧಿಕಾ, ಅವರು ತಮಗೆ ಎಷ್ಟು ಆಪ್ತರು ಮತ್ತು ಅವರನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂಬುದನ್ನು ವಿವರಿಸಿದ್ದಾರೆ.

Recommended Video

Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

ಅಂದಹಾಗೆ, ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೊದಲ್ಲಿರುವವರು ಅವರ ಮನೆಗೆಲಸದ ಸಹಾಯ ಮಾಡುತ್ತಿರುವ ಗೀತಾ ಎಂಬುವವರು. ಎಂಟು ವರ್ಷದಿಂದ ಅವರು ಮನೆಗೆಲಸದ ಸಹಾಯ ಮಾಡುತ್ತಿದ್ದಾರೆ ಎಂದಿರುವ ರಾಧಿಕಾ, ಅವರು ತಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಎಂದಿದ್ದಾರೆ. ವಿಶೇಷವೆಂದರೆ ಅವರ ಜನ್ಮದಿನದಂದು ಇತ್ತೀಚೆಗೆ ಕೇಕ್ ಕೂಡ ತಯಾರಿಸಿ ಅವರಿಂದ ಕಟ್ ಮಾಡಿಸಿ, ಮನೆಯಲ್ಲಿಯೇ ಬರ್ಥಡೇ ಸಂಭ್ರಮ ಆಚರಿಸಿದ್ದರು.

ನಾವೂ ಕಾಳಜಿ ತೋರಿಸಬೇಕು

ನಾವೂ ಕಾಳಜಿ ತೋರಿಸಬೇಕು

ಈ ಫೋಟೊದ ಜತೆಗೆ ರಾಧಿಕಾ ಮಹತ್ವದ ಸಂದೇಶವನ್ನೂ ಹಂಚಿಕೊಂಡಿದ್ದಾರೆ. ಅದು ನಾವು ಮಾಡಬೇಕಾದ ಕರ್ತವ್ಯದ ಕುರಿತು. ಮನೆ ಕೆಲಸದ ಸಹಾಯದ ನೌಕರಿಗೆ ಸೇರಿಕೊಂಡಿರುವವರು ನಮ್ಮನ್ನು ಬಹಳ ಚೆನ್ನಾಗಿ ಆರೈಕೆ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ನಾವೂ ಅವರ ಕಾಳಜಿ ಮಾಡಬೇಕು ಎಂದು ಹೇಳಿದ್ದಾರೆ.

ನಿರ್ಲಕ್ಷ್ಯ ಮಾಡಬೇಡಿ

ನಿರ್ಲಕ್ಷ್ಯ ಮಾಡಬೇಡಿ

ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಅನೇಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. 'ಈಗ ಈ ಕಠಿಣ ಸಮಯದಲ್ಲಿ ನಾವು ಅವರ ಕುರಿತು ತುಸು ಹೆಚ್ಚು ಕಾಳಜಿ ತೋರಿಸಬೇಕು. ನೀವು ಅವರ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಅಥವಾ ಮರೆಯುವುದನ್ನು ಮಾಡಬೇಡಿ. ಅದರಲ್ಲಿಯೂ ಈ ಸಂದರ್ಭದಲ್ಲಿ. ಅವರೂ ಬಹಳ ಮೌಲ್ಯವುಳ್ಳವರು ಎಂದು ರಾಧಿಕಾ ಮನವಿ ಮಾಡಿದ್ದಾರೆ.

ಬರ್ಥಡೇ ಕೇಕ್

ಬರ್ಥಡೇ ಕೇಕ್

ಈ ಫೋಟೊದೊಂದಿಗೆ ಸುಂದರವಾದ ಕೇಕ್ ಅನ್ನೂ ರಾಧಿಕಾ ಪ್ರದರ್ಶಿಸಿದ್ದಾರೆ. ಇದು ಕೆಲವು ದಿನಗಳ ಹಿಂದೆ ಗೀತಾ ಅವರ ಹುಟ್ಟುಹಬ್ಬಕ್ಕಾಗಿ ತಾವೇ ತಯಾರಿಸಿದ್ದ ಕೇಕ್ ಎಂದು ತಿಳಿಸಿದ್ದಾರೆ. ಈ ಮೂಲಕ ತಮ್ಮ ಮನೆಯ ಸಹಾಯಕರನ್ನು ಸಹ ಕುಟುಂಬದವರಲ್ಲಿ ಒಬ್ಬರಂತೆ ನೋಡಿಕೊಳ್ಳುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಅಭಿಮಾನಿಗಳ ಮೆಚ್ಚುಗೆ

ರಾಧಿಕಾ ಅವರ ಈ ಪ್ರೀತಿ ಮತ್ತು ಕಾಳಜಿಯನ್ನು ಎಲ್ಲರೂ ಶ್ಲಾಘಿಸಿದ್ದಾರೆ. ನಿಮ್ಮ ಮನಸು ತುಂಬಾ ಒಳ್ಳೆಯದು. ಎಲ್ಲರೂ ಈ ರೀತಿಯ ಮನೋಭಾವ ಹೊಂದಿರುವುದಿಲ್ಲ. ಕೆಲಸದವರನ್ನು ಕೀಳಾಗಿ ನೋಡುವವರೇ ಹೆಚ್ಚು.ಅವರಿಗಾಗಿ ಕೇಕ್ ತಯಾರಿಸಿ ಈ ರೀತಿ ಕಾಳಜಿಯಿಂದ ನೋಡಿಕೊಳ್ಳುವವರು ತೀರಾ ಕಡಿಮೆ. ಅವರೆಲ್ಲರಿಗೂ ನೀವು ಮಾದರಿಯಾಗಿದ್ದೀರಿ ಎಂದು ಮೆಚ್ಚಿಕೊಂಡಿದ್ದಾರೆ.

More from Filmibeat

English summary
Actress Radhika Pandit has shared a photo with house help and requested all to care housemaids more during these tough times.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X