'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ' ಎನ್ನುತ ಮಾಸ್ಕ್ ಧರಿಸಿ ಪೋಸ್ ನೀಡಿದ ಐರಾ ಯಶ್

By ಫಿಲ್ಮ್ ಡೆಸ್ಕ್

ಯಶ್ ಮತ್ತು ರಾಧಿಕಾ ದಂಪತಿ ಆಗಾಗ ಮುದ್ದು ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಗಳು ಐರಾ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ.

ಇತ್ತೀತಿಗೆ ಯಶ್ ದಂಪತಿ ಮಗಳು ಐರಾಗೆ ಮಾಸ್ಕ್ ಧರಿಸಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಮಾಸ್ಕ್ ಧರಿಸಿರುವ ಐರಾ ಅಪ್ಪ-ಅಮ್ಮನ ಜೊತೆ ಫೋಟೋಗೆ ಪೋಸ್ ನೀಡಿದೆ. ನಿನ್ನೆ(ಜೂನ್ 18) ಮಾಸ್ಕ್ ಡೇ, ಯಶ್ ದಂಪತಿ ಮಾಸ್ಕ್ ಧರಿಸಿ, ಮನೆಯಿಂದ ಹೊರಹೋಗಬೇಕಾದರೆ ಮಾಸ್ಕ್ ಧರಿಸದೆ ಹೋಗಬೇಡಿ ಎಂದು ಹೇಳಿದ್ದಾರೆ.

ಮೂರು ಜನರ ಫೋಟೋವನ್ನು ಶೇರ್ ಮಾಡುವ ಜೊತೆಗೆ ರಾಧಿಕಾ ಪಂಡಿತ್ "ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಇದು ತುಂಬಾ ಕಷ್ಟದ ಸಮಯ. ಆದರೆ ಬೇಗ ಇದರಿಂದ ಹೊರಬರುತ್ತೇವೆ. ಮನೆಯಿಂದ ಹೊರಬರಬೇಕಾದರೆ ಮಾಸ್ಕ್ ಇಲ್ಲದೆ ಯಾರು ಬರಬೇಡಿ ಮತ್ತು ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸುರಕ್ಷಿತವಾಗಿ" ಎಂದು ಬರೆದುಕೊಂಡಿದ್ದಾರೆ.

Radhika Pandit Shares Her Daughter Aira Mask Wearing Photo

ತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋ

ರಾಧಿಕಾ ಪಂಡಿತ್ ಸದ್ಯ ಎರಡು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಮಗನ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮುದ್ದು ಮಗನ ದರ್ಶನ ಮಾಡಿಸಿದ್ದರು. ಮಗಳಿಗೆ ಐರಾ ಎಂದು ನಾಮಕರಾಣ ಮಾಡಿರುವ ಯಶ್ ದಂಪತಿ ಮಗನಿಗೆ ಏನು ಹೆಸರಿಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Actress Radhika Pandit shares her daughter Ayra mask wearing photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X