2024 ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

ಕನ್ನಡ ಚಿತ್ರರಂಗದ ಪ್ರಥಮ ಪಿಆರ್‌ಓ ದಿವಂಗತ ಶ್ರೀ ಡಿ.ವಿ ಸುಧೀಂದ್ರ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಪ್ರತಿ ವರ್ಷ ಚಿತ್ರರಂಗದ ಗಣ್ಯರಿಗೆ ಹಾಗೂ ಸಾಧಕರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಈಗ ಈ ಸಂಸ್ಥೆಗೆ 25 ವರ್ಷಗಳು ತುಂಬಿದ ಬೆನ್ನಲ್ಲೇ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿತ್ತು.

ಈಗ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನೀಡುವ ಪ್ರಶಸ್ತಿಗಳ ಸಂಖ್ಯೆ 10ಕ್ಕೇರಿದೆ. ಈ ಬಾರಿ ಈ ಪ್ರಶಸ್ತಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸುವುದಕ್ಕೆ ನಿರ್ಧರಿಸಿದೆ. ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ 2025ರ ಜನವರಿ 26ರ ಭಾನುವಾರ ಸಂಜೆ 5.30ಕ್ಕೆ ಮಾಗಡಿ ರಸ್ತೆಯ MMB legacy (GT MALL)ನಲ್ಲಿ ನಡೆಯಲಿದೆ. ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಿದೆ.

Raghavendra Chitravani 2024 award winners list

2024ನೇ ಸಾಲಿನಲ್ಲಿ ಪ್ರಶಸ್ತಿಯನ್ನು ಪಡೆಯಲಿರುವ ಗಣ್ಯರು ಪಟ್ಟಿ ಹೀಗಿದೆ. ಚಿತ್ರರಂಗದ ಹಿರಿಯ ಸಾಧಕರು ಹಾಗೂ 2024ರಲ್ಲಿ ಸಾಧನೆ ಮಾಡಿದ ಚಿತ್ರರಂಗದ ತಂತ್ರಜ್ಞರು ಹಾಗೂ ಸಾಹಿತಿಗೆ ಪ್ರಶಸ್ತಿಯನ್ನು ನೀಡಲಿದೆ.

ರಾಘವೇಂದ್ರ ಚಿತ್ರವಾಣಿಯ 2024ರ ಪ್ರಶಸ್ತಿಗಳ ವಿವರ

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
ಶ್ರೀಮತಿ ಮೀನಾಕ್ಷಿ ಕೆ.ವಿ. ಜಯರಾಂ (ಹಿರಿಯ ಚಲನಚಿತ್ರ ನಿರ್ಮಾಪಕರು)

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
ಶ್ರೀ ಕೆ.ಜೆ. ಕುಮಾರ್ ( ಹಿರಿಯ ಪತ್ರಕರ್ತರು )*

ಡಾ. ರಾಜಕುಮಾರ್ ಪ್ರಶಸ್ತಿ (ಖ್ಯಾತ ಹಿನ್ನೆಲೆ ಗಾಯಕರಿಗೆ ನೀಡುವ ಪ್ರಶಸ್ತಿ)
ಕುಮಾರಿ ಅನುರಾಧಾ ಭಟ್‍(ಗಾಯಕಿ)

ಯಜಮಾನ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ ನಿರ್ದೇಶಕರಿಗೆ ನೀಡುವ ಪ್ರಶಸ್ತಿ
ಶ್ರೀ ಓಂಪ್ರಕಾಶ್‍ ರಾವ್‍(ಹಿರಿಯ ನಿರ್ದೇಶಕರು)

ನಟಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ ಹಿರಿಯ ನಟಿ ಅವರಿಗೆ ನೀಡುವ ಪ್ರಶಸ್ತಿ
ಶ್ರೀಮತಿ ರೇಖಾರಾವ್ (ಹಿರಿಯ ನಟಿ)

ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ (ಅತ್ಯುತ್ತಮ ಸಂಗೀತ ನಿರ್ದೇಶನ, 'ಕೃಷ್ಣಂ ಪ್ರಣಯ ಸಖಿ' ಚಿತ್ರಕ್ಕಾಗಿ) -
ಶ್ರೀ ಅರ್ಜುನ್‍ ಜನ್ಯ (ಸಂಗೀತ ನಿರ್ದೇಶಕ)

ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ ಕೆ.ವಿ. ಜಯರಾಂ ಪ್ರಶಸ್ತಿ, ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ (ಅತ್ಯುತ್ತಮ ಕಥಾಲೇಖಕರು, 'ಶಿವಮ್ಮ' ಚಿತ್ರಕ್ಕಾಗಿ)
ಶ್ರೀ ಜಯಶಂಕರ್ ಆರ್ಯರ್(ಕಥಾ ಲೇಖಕ ಹಾಗೂ ನಿರ್ದೇಶಕ)

ಖ್ಯಾತ ಚಿತ್ರಸಾಹಿತಿ ಶ್ರೀ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ಡಾ.ಎಸ್.ಕೆ. ನರಹರಿ ಅವರಿಂದ (ಅತ್ಯುತ್ತಮ ಸಂಭಾಷಣೆ, 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಕ್ಕಾಗಿ)
ಶ್ರೀ ಚಂದ್ರಜಿತ್ ಬೆಳ್ಳಿಯಪ್ಪ (ಸಂಭಾಷಣೆಕಾರ ಹಾಗೂ ನಿರ್ದೇಶಕ)

ಬಿ. ಸುರೇಶ ಪ್ರಶಸ್ತಿ ಅವರಿಂದ (ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ) - (ಫೋಟೋ ಚಲನಚಿತ್ರಕ್ಕಾಗಿ)
ಶ್ರೀ ಉತ್ಸವ್‍ ಗೋನ್ವಾರ್ (ನಿರ್ದೇಶಕ)

ಹಿರಿಯ ಪತ್ರಕರ್ತರಾದ ಶ್ರೀ.ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ('ಕೃಷ್ಣಂ ಪ್ರಣಯ ಸಖಿ' ಚಿತ್ರದ 'ದ್ವಾಪರ')
ಶ್ರೀ ಡಾ||ವಿ.ನಾಗೇಂದ್ರ ಪ್ರಸಾದ್(ಗೀತರಚನೆಕಾರ)

More from Filmibeat

English summary
Raghavendra Chitravani 2024 award winners list;
Read more about: award sandalwood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X