'ರಾಮಾಚಾರಿ 2.0' ಟ್ರೈಲರ್ ರಿಲೀಸ್: ತಂದೆ ಪಾತ್ರದಲ್ಲಿ ರಾಘಣ್ಣ ಮಿಂಚಿಂಗ್
ರಾಘವೇಂದ್ರ ರಾಜ್‌ಕುಮಾರ್ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಮತ್ತೆ ನಟನಾ ಕ್ಷೇತ್ರಕ್ಕೆ ಮರಳಿದ್ದಾರೆ. ಈಗ ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ರಾಮಾಚಾರಿ 2.0'. ತೇಜ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ವಿಭಿನ್ನ ಸ್ಟೋರಿ ಲೈನ್ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಅಂದ್ಹಾಗೆ, ತೇಜ್‌ಗೆ ಕನ್ನಡ ಚಿತ್ರರಂಗ ಹೊಸತೇನು ಅಲ್ಲ. ಈಗಾಗಲೇ ಕನ್ನಡ ಸಿನಿಮಾದಲ್ಲಿ ಬಾಲನಟನಾಗಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಆ ಬಳಿಕ ಕನ್ನಡ, ತಮಿಳಿನ ಕೆಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಇವರೇ ನಟಿಸಿರುವ ಹೊಚ್ಚ ಹೊಸ ಸಿನಿಮಾ'ರಾಮಾಚಾರಿ 2.0' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ನಟ ರಾಘವೇಂದ್ರ ರಾಜಕುಮಾರ್ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರೂ, ಬಳಿಕ ಪ್ರವೀಣ್ ನಾಯಕ್ ನಿರ್ದೇಶಿಸಿದ 'ಮೀಸೆ ಚಿಗುರಿದಾಗ' ಸಿನಿಮಾದಲ್ಲೂ ಅಭಿನಯಿಸಿದ್ದರು. " ಈ ಸಿನಿಮಾದಲ್ಲಿ ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ನಟಿಸಲು ನನಗೆ ಅವಕಾಶ ನೀಡಿದ್ದರು. ತಮಿಳಿನ ಕೆಲವು ಚಿತ್ರಗಳಲ್ಲೂ ನಾನು ನಟಿಸಿದ್ದೇನೆ. ಮೂರು ವರ್ಷಗಳ ಹಿಂದೆ 'ರಿವೈಂಡ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದೆ. 'ನಾಗರಹಾವು' ಕಾಲದಿಂದಲೂ 'ರಾಮಾಚಾರಿ' ಹೆಸರಿಗೆ ಅದರದೇ ಆದ ವಿಶೇಷ ಸ್ಥಾನವಿದೆ. ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ಅದು ನನಗೆ ಸಿಕ್ಕಿದ್ದು ನನ್ನ ಪುಣ್ಯ." ಎನ್ನುತ್ತಾರೆ ಹೀರೊ ತೇಜ್.
'ರಾಮಾಚಾರಿ 2.0' ವಿಭಿನ್ನ ಸ್ಟೋರಿ ಲೈನ್ ಇರುವ ಸಿನಿಮಾ. ಈ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್ ಇವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದು ವಿಭಿನ್ನವಾಗಿತ್ತು. ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ.

"ತೇಜ್ ನನಗೆ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ಈ ಸಿನಿಮಾದಲ್ಲಿ ನಾನು ತೇಜ್ ಅವರ ತಂದೆಯಾಗಿ ನಟಿಸಿದ್ದೇನೆ." ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್. ಅಂದ್ಹಾಗೆ 'ರಾಮಾಚಾರಿ 2.0' ಸಿನಿಮಾವನ್ನು ಅವರೇ ನಟಿಸಿ, ನಿರ್ದೇಶನ ಕೂಡ ಮಾಡಿದ್ದಾರೆ. ಸಿನಿಮಾದಲ್ಲಿ ಕೌಸ್ತುಭ, ಚಂದನ, ವಿಜಯ್ ಚೆಂಡೂರ್, ಮುನಿಕೃಷ್ಣ ಸ್ಪರ್ಶ ರೇಖಾ, ಸ್ವಾತಿ ಕೂಡ ನಟಿಸಿದ್ದಾರೆ.


Click it and Unblock the Notifications











