ಡಾ.ರಾಜ್​ಕುಮಾರ್ ಅಕಾಡೆಮಿಯಿಂದ 8 ಮಂದಿ ಯುಪಿಎಸ್‌ಸಿ ಪಾಸ್: ಯಾರ ರ್‍ಯಾಂಕ್ ಎಷ್ಟು?

ಕೇಂದ್ರ ಲೋಕಸೇವಾ ಆಯೋಗ (UPSC) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಪರೀಕ್ಷೆಯನ್ನು ನಡೆಸಿತ್ತು. 2021ನೇ ಸಾಲಿನ ಈ ಪರೀಕ್ಷೆಯ ಫಲಿತಾಂಶ ಇಂದು ( ಮೇ 30) ಪ್ರಕಟವಾಗಿದೆ. ಈ ಅತ್ಯುನ್ನತ ಪರೀಕ್ಷೆಯಲ್ಲಿ ದೇಶದ ಸುಮಾರು 685 ಮಂದಿ ತೇರ್ಗಡೆಯಾಗಿದ್ದಾರೆ.

2021ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದ 27 ಮಂದಿ ತೇರ್ಗಡೆಯಾಗಿದ್ದರ ಬಗ್ಗೆ ಇದೂವರೆಗೂ ಮಾಹಿತಿ ಸಿಕ್ಕಿದೆ. ವಿಶೇಷ ಅಂದರೆ ಇವರಲ್ಲಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಕೂಡ ಸೇರಿಕೊಂಡಿದ್ದಾರೆ.

ಯುಪಿಎಸ್‌ಸಿಗೆ ಡಾ.ರಾಜ್‌ಕುಮಾರ್ ಅಕಾಡೆಮಿ ತರಬೇತಿ

ಡಾ.ರಾಜ್​ಕುಮಾರ್ ಅಕಾಡೆಮಿ ಹಲವು ವರ್ಷಗಳಿಂದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಅಕಾಡೆಮಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಈ ಅಕಾಡೆಮಿಯಿಂದ ಹಲವು ಮಂದಿ ಉತ್ತಮ ರ್‍ಯಾಂಕ್ ಪಡೆದು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಅದರಂತೆ, ಈ ಬಾರಿ ಕೂಡ 8 ಮಂದಿ ಇದೇ ಅಕಾಡೆಮಿಯಿಂದ ತೇರ್ಗಡೆಯಾಗಿದ್ದಾರೆ.

Raghavendra Rajkumars Dr Rajkumar Civil Services Academy 8 Candidate Clear Upsc Exam

ಇದೇ ಈ ಬಾರಿ ಕೂಡ ಹಲವು ಮಂದಿ ಈ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ ತೇರ್ಗಡೆಯಾದ 8 ಮಂದಿಯ ಲಿಸ್ಟ್ ಇಲ್ಲಿದೆ.

Raghavendra Rajkumars Dr Rajkumar Civil Services Academy 8 Candidate Clear Upsc Exam

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ ತೇರ್ಗಡೆಯಾದವರ ಪಟ್ಟಿ

ಬೇನಕ ಪ್ರಸಾದ್ 92ನೇ ರ್‍ಯಾಂಕ್
ಮೇಘನಾ ಕೆ ಟಿ 425ನೇ ರ್‍ಯಾಂಕ್
ರಾಜೇಶ್ ಪೊನ್ನಪ್ಪ 222ನೇ ರ್‍ಯಾಂಕ್
ಪ್ರೀತಿ ಪಂಚಾಲ್ 449ನೇ ರ್‍ಯಾಂಕ್
ಪ್ರಶಾಂತ್ ಕುಮಾರ್ ಬಿಓ 641 ನೇ ರ್‍ಯಾಂಕ್
ರವಿನಂದನ್ ಬಿಎಂ 455ನೇ ರ್‍ಯಾಂಕ್
ನಿಖಿಲ್ ಬಿ ಪಾಟೀಲ್ 139ನೇ ರ್‍ಯಾಂಕ್
ದೀಪಕ್ ಆರ್ ಸೇಟ್ 311ನೇ ರ್‍ಯಾಂಕ್

ದೃಷ್ಟಿ ಸಮಸ್ಯೆಯ ಮೇಘನಾ 2ನೇ ಬಾರಿನೂ ಪಾಸ್

ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ ಯುಪಿಎಸ್​ಸಿ ಪಾಸ್ ಆದವರಲ್ಲಿ ಮೇಘನಾ ಎಂಬುವವರಿಗೆ ಪೂರ್ಣ ಪ್ರಮಾಣದಲ್ಲಿ ಕಣ್ಣುಕಾಣುವುದಿಲ್ಲ. ಇವರು 425ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಈ ಹಿಂದೆ ಕೂಡ ಇದೇ ಅಕಾಡೆಮಿಯಲ್ಲಿ ಪರೀಕ್ಷೆ ಬರೆದು 465ನೇ ರ್‍ಯಾಂಕ್ ಪಡೆದಿದ್ದರು. ಮೇಘನಾ ಮೂಲತಃ ಮೈಸೂರು ಜಿಲ್ಲೆಯ ಪರಿಯಾಪಟ್ಟಣದವರಾದ ಮೇಘನಾ ದೃಷ್ಟಿ ಸಮಸ್ಯೆಯ ಹೊರತಾಗಿಯೂ ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.

Recommended Video

Dr Rajkumar Academy ಸೌಲಭ್ಯದ ಬಗ್ಗೆ ಮೆಚ್ಚುಗೆ ಮಾತನಾಡಿದ ವಿಧ್ಯಾರ್ಥಿಗಳು | Raghavendra Rajkumar

2021ನೇ ಸಾಲಿನಲ್ಲಿ ದೇಶಾದ್ಯಂತ ಸುಮಾರು 749 ಹುದ್ದೆಗಳಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 685 ಮಂದಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ಐಎಎಸ್‌ ಕೇಡರ್‌ಗೆ 180 ಹುದ್ದೆ,ಐಎಫ್‌ಎಸ್‌ ಕೇಡರ್‌ಗೆ 37 ಹುದ್ದೆ, ಐಪಿಎಸ್‌ ಕೇಡರ್‌ಗೆ 200 ಹುದ್ದೆ ಹಾಗೂ ಸೆಂಟ್ರಲ್ ಸರ್ವೀಸ್ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಕೇಡರ್‌ಗೆ 242 ಮಂದಿಯನ್ನುಆಯ್ಕೆ ಮಾಡಲಾಗುತ್ತದೆ. ಸದ್ಯ ಪ್ರಾಥಮಿಕ ಪಟ್ಟಿ ರಿಲೀಸ್ ಆಗಿದ್ದು, ತೇರ್ಗಡೆಯಾದವರ ಲಿಸ್ಟ್ ಇನ್ನೂ ಅಪ್‌ಡೇಟ್ ಆಗಲಿದೆ.

More from Filmibeat

English summary
Raghavendra Rajkumar's Dr Rajkumar Civil Services Academy 8 Candidate Clear Upsc Exam, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X