ನೋವಿನಲ್ಲೂ ಅಪ್ಪು ಹಾಡಿದ ಕೊನೆಯ ಹಾಡನ್ನು ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್

ನಟ ಪುನೀತ್‌ ರಾಜ್‌ಕುಮಾರ್ ಸಾವಿನಿಂದ ಅವರ ಅಭಿಮಾನಿಗಳು ಅಘಾತಕ್ಕೆ ಒಳಗಾಗಿದ್ದಾರೆ. ದಿಢೀರನೇ ಸಿಕ್ಕ ಶಾಕ್‌ನಿಂದ ಅಪ್ಪು ಅಭಿಮಾನಿಗಳು ಹೊರಬರಲಾರದೆ ಮಂಕಾಗಿದ್ದಾರೆ. ಅಭಿಮಾನಿ ಸ್ಥಿತಿನೇ ಹೀಗಿರಬೇಕಾದರೆ ಇನ್ನು ಅವರ ಕುಟಂಬದ ಸ್ಥಿತಿ ಹೇಗಿರಬಹುದು ಊಹಿಸಿಕೊಳ್ಳಿ. ಒಡಹುಟ್ಟಿದ ಅಣ್ಣ ತಮ್ಮಂದಿರ ಪರಿಸ್ಥಿತಿ ಹೇಗಿರಬೇಡ. ಒಂದೇ ತಟ್ಟೆಯಲ್ಲಿ ಉಂಡು ಬೆಳೆದ ಸಹೋದರ ದಿಢೀರನೇ ಈ ಲೋಕ ಬಿಟ್ಟು ಹೋದರೆ ಅವರ ಮನಸ್ಸಿನ ಮೇಲೆ ಆದ ಆಘಾತ ಹೇಗಿರಬೇಡ. ಅಪ್ಪು ಸಾವಿನ ಬಳಿಕ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಸದಾ ತಮ್ಮನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ತಮ್ಮನೊಟ್ಟಿಗೆ ಹಾಡಿದ ಆ ಮಧುರ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ತಮ್ಮ ಪುನೀತ್ ಜೊತೆಗಿನ ಕೊನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಕೊನೆಯ ವೀಡಿಯೊದಲ್ಲಿ ಅಪ್ಪು ಲವಲವಿಕೆಯಿಂದ ಹಾಡಿದ್ದಾರೆ. ಕೇಕ್ ಕಟ್ ಮಾಡಿದ್ದಾರೆ. ಕುಟುಂಬದೊಂದಿಗೆ ಖುಷಿಯ ಕ್ಷಣಗಳನ್ನು ಸಂಭ್ರಮಿಸಿದ್ದಾರೆ. ಇದೇ ವೀಡಿಯೋವನ್ನು ರಾಘವೇಂದ್ರ ರಾಜ್‌ಕುಮಾರ್ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದು, ತಮ್ಮನೊಂದಿಗೆ ಕಳೆದ ಮರೆಯಲಾಗದ ಕ್ಷಣವೆಂದು ಬರೆದುಕೊಂಡಿದ್ದಾರೆ.

Raghavendra Rajkumar shared Last video of Puneeth Rajkumar singing in family function

ಅಪ್ಪು ಜೊತೆ ಹಾಡಿದ ಕೊನೆಯ ಹಾಡು ಹಂಚಿಕೊಂಡ ರಾಘಣ್ಣ

ಪುನೀತ್ ರಾಜ್‌ಕುಮಾರ್ ಸಾವಿಗೂ ಮುನ್ನ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂದು ಸಂಬಂಧಿಯ ಹುಟ್ಟುಹಬ್ಬವಿತ್ತು. ಈ ಸಮಾರಂಭದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಸಹೋದರಿ ಲಕ್ಷ್ಮಿ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಪುಟ್ಟ ಬಾಲಕನ ಜೊತೆ ಅಪ್ಪು ಮಗುವಾಗಿ ಸಂಭ್ರಮಿಸಿದ್ದರು. ಬಾಲಕನ ಹುಟ್ಟುಹಬ್ಬದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಆ ಪೋರನಿಗಾಗಿ ಅಣ್ಣಾವ್ರು ನಟಿಸಿದ ನಾ ನಿನ್ನ ಮರೆಯಲಾರೆ ಚಿತ್ರದ ಎಲ್ಲೆಲ್ಲಿ ನೋಡಲಿ ಹಾಡನ್ನು ಹಾಡಿದ್ದರು. ಈ ಸಂಭ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ಭಾಗಿಯಾಗಿ ಸಂಭ್ರಮಿಸಿದ್ದರು.

ಅಂದು ರಾಘಣ್ಣ ಹಾಗೂ ಕುಟುಂಬದೊಂದಿಗೆ ಪುನೀತ್ ರಾಜ್‌ಕುಮಾರ್ ಕಳೆದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಆ ವೀಡಿಯೋವನ್ನೇ ರಾಘವೇಂದ್ರ ರಾಜ್‌ಕುಮಾರ್ ಈಗ ಶೇರ್ ಮಾಡಿದ್ದಾರೆ. ಅಪ್ಪು ವೀಡಿಯೊ ಶೇರ್ ಆಗುತ್ತಿದ್ದಂತೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ರಾಘಣ್ಣನಿಗೆ ಸಮಾಧಾನ ಮಾಡುತ್ತಿದ್ದಾರೆ. ಕೆಲ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನಿಂದ ಇನ್ನೂ ಹೊರಬಂದಿಲ್ಲ.

Raghavendra Rajkumar shared Last video of Puneeth Rajkumar singing in family function

'ನೀವು ಹಾಕಿರುವ ವೀಡಿಯೋ ನೋಡಿದ್ರೆ ದು:ಖ ಆಗುತ್ತೆ': ಅಭಿಮಾನಿಗಳು ಭಾವುಕ

ರಾಘಣ್ಣ ಹಾಕಿದ ವೀಡಿಯೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. "ಇವತ್ತು ನಮ್ಮ ನಿಮ್ಮನ್ನು ಬಿಟ್ಟು ನಮ್ಮ ಬಾಸ್ ಹೋಗಿರಬಹುದು ಆದರೆ ಅವರು ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತಾರೆ. ಅವರು ಇಲ್ಲ ಅನ್ನೋ ಫೀಲಿಂಗ್ ನಮ್ಮಲ್ಲಿ ಬರಬಾರದು. ಆತರ ನಾವು ನೋಡ್ಕೋತೀವಿ. ಅಪ್ಪು ಬಾಸ್ ಯಾವಾಗಲೂ ನಮ್ಮ ಜೊತೆ ಇರುತ್ತಾರೆ" ಅಂತ ಅಭಿಮಾನಿಯೊಬ್ಬ ನೋವು ತೋಡಿಕೊಂಡಿದ್ದಾನೆ. ಮತ್ತೊಬ್ಬ ಅಪ್ಪು ಅಭಿಮಾನಿ " ರಾಜಕುಮಾರ್ ಅಭಿಮಾನಿಯಾಗಿ, ನೀವು ಹಾಕಿರುವ ಫೋಟೊ-ವಿಡಿಯೋ ನೋಡಿದ್ರೆ, ನಮಗೆ ತುಂಬಾ ದುಃಖ ಆಗುತ್ತೆ. ನಿಮಗೆ ಇನ್ನು ಹೇಗೆ ಇರಬೇಡ." ಅಂತ ರಾಘಣ್ಣನ ಮೇಲೆ ಕನಿಕರ ವ್ಯಕ್ತಪಡಿಸಿದ್ದಾನೆ.

ಪುನೀತ್ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಕಂಗಾಲಾಗಿದ್ದಾರೆ. ಪ್ರತಿ ಕ್ಷಣವೂ ಅಪ್ಪು ಧ್ಯಾನ ಮಾಡುತ್ತಿದ್ದಾರೆ. ಕೆಲವ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಈ ನೋವಿನಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಇರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
After Puneeth Rajkumar Death brother Raghavendra Rajkumar shared last video of Puneeth Rajkumar singing along with him in a family function.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X