Ragini-Vrushabha: ಮೋಹನ್‌ಲಾಲ್ ಸಿನಿಮಾದಲ್ಲಿ ರಾಗಿಣಿ ಸಖತ್ ಚಿಲ್.. 'ವೃಷಭ' ಫಸ್ಟ್ ಶೆಡ್ಯೂಲ್ ಶೂಟ್ ಫಿನಿಶ್!

ಸ್ಯಾಂಡಲ್‌ವುಡ್‌ನಲ್ಲಿ 'ರನ್ನ', 'ಪೊಗರು' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ನಂದ ಕಿಶೋರ್ ಮಲಯಾಳಂ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಅದೂ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಸಿನಿಮಾಗೆ ನಂದ ಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆ ಸಿನಿಮಾವೇ 'ವೃಷಭ'.

ಮಲಯಾಳಂ ಸಿನಿಮಾ 'ವೃಷಭ' ಮೈಸೂರಿನಲ್ಲಿ ಶೂಟಿಂಗ್ ಆರಂಭ ಆಗಿತ್ತು. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ದಿಗ್ಗಜರೇ ನಟಿಸುತ್ತರೋದು ವಿಶೇಷ. ಅದರಲ್ಲೂ ಕನ್ನಡದ ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ragini-dwivedi-mohanlal-vrushabha-movie

ನಂದ ಕಿಶೋರ್ ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ದೊಡ್ಡ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ಪ್ರಡ್ಯೂಸ್ ಮಾಡುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ನಿರ್ದೇಶಕ ನಂದ ಕಿಶೋರ್ 'ವೃಷಭ' ಸಿನಿಮಾವನ್ನು ತುಂಬಾನೇ ವೇಗವಾಗಿ ಮುಗಿಸುತ್ತಿದ್ದಾರೆ ಅನ್ನೋ ಸುಳಿವು ಸಿಕ್ಕಿದೆ. ಇದೇ ವೇಳೆ ರಾಗಿಣಿ ದ್ವಿವೇದಿ ಶೂಟಿಂಗ್ ಸೆಟ್ಟಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

'ವೃಷಭ' ಸೆಟ್ಟಿನಲ್ಲಿ ರಾಗಿಣಿ ಫುಲ್ ಚಿಲ್!

ರಾಗಿಣಿ ದ್ವಿವೇದಿ ಈಗಾಗಲೇ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂನಲ್ಲಿ 'ಶೀಲಾ' ಸಿನಿಮಾ ರಿಲೀಸ್ ಆಗಿತ್ತು. ಇದು ಕನ್ನಡದಲ್ಲೂ ಬಿಡುಗಡೆಯಾಗಿತ್ತು. ಈಗ ಬಿಗ್ ಬಜೆಟ್ ಸಿನಿಮಾ 'ವೃಷಭ'ದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಮೋಹನ್‌ಲಾಲ್ ಹಾಗೂ ತಂಡದೊಂದಿಗೆ ಖುಷಿ ಖುಷಿಯಾಗಿ ಶೂಟಿಂಗ್ ಮಾಡಿದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಮೊದಲ ಹಂತದ ಚಿತ್ರೀಕರಣ ಮುಗಿಸಿರೋ ಖುಷಿಯನ್ನು ಹಂಚಿಕೊಂಡಿದ್ದಾರೆ.

ragini-dwivedi-mohanlal-vrushabha-movie

ಮೋಹನ್‌ಲಾಲ್ ಜೊತೆ 2ನೇ ಸಿನಿಮಾ

ಸಿನಿಮಾರಂಗದಲ್ಲಿ ರಾಗಿಣಿ ದ್ವಿವೇದಿ ಸೆಕೆಂಡ್ ಇನ್ನಿಂಗ್ಸ್ ಗ್ರ್ಯಾಂಡ್ ಆಗಿ ಶುರುವಾಗಿದೆ. ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ರಾಗಿಣಿಯನ್ನು ಹುಡುಕಿಕೊಂಡು ಬರುತ್ತಿವೆ. ಇದರಲ್ಲಿ 'ವೃಷಭ' ಸಿನಿಮಾ ಕೂಡ ಒಂದು. ಅಂದ್ಹಾಗೆ, ಮೋಹನ್‌ಲಾಲ್ ಜೊತೆ ರಾಗಿಣಿ ನಟಿಸುತ್ತಿರುವ ಮೊದಲ ಸಿನಿಮಾವೇನಲ್ಲ. ಈ ಹಿಂದೆ 'ಕಂದಹಾರ್' ಅನ್ನೋ ಸಿನಿಮಾದಲ್ಲಿ ಮೋಹನ್‌ಲಾಲ್‌ ಜೊತೆ ರಾಗಿಣಿ ನಟಿಸಿದ್ದರು. ಮಲಯಾಳಂ ಸೂಪರ್‌ಸ್ಟಾರ್ ಜೊತೆ ಇದು ಅವರ ಎರಡನೇ ಸಿನಿಮಾ.

2024ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್

'ವೃಷಭ' ಸಿನಿಮಾದಲ್ಲಿ ಅದ್ದೂರಿ ಆಕ್ಷನ್ ಸೀನ್‌ಗಳು ಇರುತ್ತವೆ ಎಂದು ಚಿತ್ರತಂಡ ಈಗಾಗಲೇ ಹೇಳಿದೆ. ಮೋಹನ್‌ಲಾಲ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2024ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ. ಸುಮಾರು 4500 ಚಿತ್ರಮಂದಿರಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ ಈ ಸಿನಿಮಾ ಮೇಲೆ ದೇಶಾದ್ಯಂತ ಎಲ್ಲರ ಕಣ್ಣಿದೆ.

ಕೈ ಜೋಡಿಸಿರೋ ಬಾಲಿವುಡ್ ನಿರ್ಮಾಣ ಸಂಸ್ಥೆ

'ವೃಷಭ' ಸಿನಿಮಾವನ್ನು ಬಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ ಜಂಟಿಯಾಗಿ ಎವಿಸ್ ಸ್ಟುಡಿಯೋ ಸಹಯೋಗದೊಂದಿಗೆ ನಿರ್ಮಾಣ ಮಾಡುತ್ತಿದೆ. ನಿರ್ಮಾಪಕಿ ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಸೇರಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

More from Filmibeat

English summary
Ragini Dwivedi and Mohanlal Movie Vrushabha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X