'ಸಂಜು ವೆಡ್ಸ್ ಗೀತಾ 2' ಗೆ ವಿಲನ್ ರಾಗಿಣಿ ದ್ವಿವೇದಿ; ಸಂಜು-ಗೀತಾ ಮಧ್ಯೆ ರಾಗಿಣಿ ಎಂಟ್ರಿ

ಸುಮಾರು 13 ವರ್ಷಗಳ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕ್‌ನಿಂದಲೇ ಮೋಡಿ ಮಾಡಿದ್ದ ಸಿನಿಮಾ 'ಸಂಜು ವೆಡ್ಸ್ ಗೀತಾ'. ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯಾ ಲೀಡ್‌ ರೋಲ್‌ನಲ್ಲಿ ನಟಿಸಿದ್ದರು. ನಾಗಶೇಖರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. 2011ರಲ್ಲಿ ತೆರೆಕಂಡಿದ್ದ ಸಿನಿಮಾ ಮ್ಯೂಸಿಕಲ್ ಹಿಟ್ ಆಗಿತ್ತು.

ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಕಾಂಬಿನೇಷನ್ ಸಿನಿ ಪ್ರೇಮಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈಗ 13 ವರ್ಷಗಳ ಬಳಿಕ 'ಸಂಜು ವೆಡ್ಸ್ ಗೀತಾ' ಸಿನಿಮಾ ಸೀಕ್ವೆಲ್ ರೆಡಿಯಾಗಿದೆ. ಇದೇ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ. ಆದರೆ, ಸ್ಟಾರ್‌ ಕಾಸ್ಟ್‌ನಲ್ಲಿ ಕೊಂಚ ಬದಲಾವಣೆಯಾಗಿದೆ. ನಾಯಕನಾಗಿ ಶ್ರೀನಗರ ಕಿಟ್ಟಿನೇ ಇದ್ದರೆ, ರಮ್ಯಾ ಜಾಗಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬಂದಿದ್ದಾರೆ. ಹೀಗಾಗಿ ಈ ಹೊಸ ಕಾಂಬಿನೇಷನ್ ತೆರೆ ಮೇಲೆ ಹೇಗೆ ಮೋಡಿ ಮಾಡುತ್ತೆ ಅನ್ನೋ ಕುತೂಹಲವಿದೆ.

Ragini Dwivedi become villain for Srinagara Kitty Rachita Ram movie Sanju Weds Geetha 2

ಈ ಸಿನಿಮಾ ಮತ್ತೊಂದು ಅಚ್ಚರಿ ಪಾತ್ರ ಅಂದರೆ, ಅದು ರಾಗಿಣಿ ದ್ವಿವೇದಿ. ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿ 'ಸಂಜು ವೆಡ್ಸ್ ಗೀತಾ 2'ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುಶ: ಕನ್ನಡದಲ್ಲಿ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಸಂಜು ಮತ್ತು ಗೀತಾ' ಇಬ್ಬರ ಮಧ್ಯೆ ರಾಗಿಣಿ ದ್ವಿವೇದಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರೋದು ಸಿನಿಪ್ರಿಯರ ಸರ್ಪ್ರೈಸಿಂಗ್ ಪ್ಯಾಕೇಜ್. ಸಹಜವಾಗಿ ಚಿತ್ರರಂಗ ಇಂತಹ ಪ್ರಮುಖವಾದ ಅಂಶವನ್ನು ರಹಸ್ಯವಾಗಿ ಇಡುತ್ತೆ. ಆದರೆ ಇಲ್ಲಿ ರಾಗಿಣಿ ಪಾತ್ರವನ್ನು ರಿವೀಲ್ ಮಾಡಿರುವುದು ಮತ್ತಷ್ಟು ಸರ್ಪ್ರೈಸಿಂಗ್ ಆಗಿದೆ. ಶ್ರೀನಗರ ಕಿಟ್ಟಿ, ರಚಿತಾ ರಾಮ್ ಹಾಗೂ ರಾಗಿಣಿ ದ್ವಿವೇದಿ ಈ ಮೂವರ ಪಾತ್ರಗಳು ಹೇಗೆಲ್ಲ ಮೋಡಿ ಮಾಡಬಹುದು? ಅನ್ನೋದು ಸಿನಿಮಾ ಬಿಡುಗಡೆ ವೇಳೆನೇ ಗೊತ್ತಾಗುತ್ತೆ.

Ragini Dwivedi become villain for Srinagara Kitty Rachita Ram movie Sanju Weds Geetha 2

"ಸಂಜು ವೆಡ್ಸ್ ಗೀತಾ 2 ಈ ಸಿನಿಮಾದಲ್ಲಿ ನಾನು ಖಳನಾಯಕಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳುವುದಕ್ಕೆ ಖುಷಿಯಾಗುತ್ತಿದೆ. ಎಂತಹ ಅದ್ಭುತ ಪಾತ್ರ. ಕೆಲವೊಮ್ಮೆ ಕೆಟ್ಟವರಾಗಿರುವುದೇ ಉತ್ತಮ. ಎಂತಹ ಅದ್ಭುತ ತಂಡ. ಎಂತಹ ಅದ್ಭುತ ಕಥೆ. ಈ ಕಥೆ ಹಲವು ಆಯಾಮಗಳಲ್ಲಿ ಸುಂದರ ಅಂತ ಅನಿಸುತ್ತೆ. ನಿಮ್ಮಲ್ಲಿ ನಗುವನ್ನು ತರಿಸುತ್ತೆ. ಅಗಳುವನ್ನು ತರಿಸುತ್ತೆ. ನಿಮಗೆ ಕೋಪ ತರಿಸುತ್ತೆ. ಎಲ್ಲರೊಂದಿಗೆ ಶೂಟಿಂಗ್‌ನಲ್ಲಿ ಭಾಗಿಯಾಗುವುದು ಖುಷಿ ಕೊಟ್ಟಿದೆ." ಎಂದು ರಾಗಿಣಿ ದ್ವಿವೇದಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ಸಂಜು ವೆಡ್ಸ್ ಗೀತಾ 2' ಸೀಕ್ವೆಲ್‌ಗಾಗಿ ಕಾಯುತ್ತಿರುವವರಿಗೆ ಮಾಡಿದ ಸಿನಿಮಾವಿದು. ಈಗಾಗಲೇ ವಿದೇಶದಲ್ಲಿಯೂ ಸಿನಿಮಾವನ್ನು ಶೂಟಿಂಗ್ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಕಂಪೋಸ್ ಮಾಡಿದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಕೇವಲ ಆಡಿಯೋವನ್ನಷ್ಟೇ ಬಿಟ್ಟಿರುವ ಈ ತಂಡ ಇನ್ನೂ ವಿಡಿಯೋ ಸಾಂಗ್ ಬಿಟ್ಟರೆ ಮತ್ತಷ್ಟು ಸದ್ದು ಮಾಡಬಹುದು. ಮೆಲೋಡಿ ಹಾಡಿಗಳಿಗೆ ಫೇಮಸ್ ಆಗಿರುವ ಶ್ರೀಧರ್ ವಿ ಸಂಭ್ರಮ್ ಇಲ್ಲೂ ಸುಮಧುರ ಹಾಡುಗಳನ್ನು ನೀಡಿದ್ದಾರೆ.

ಹಾಗಂತ ಕೇವಲ ಲವ್ ಸ್ಟೋರಿ ಅಷ್ಟೇ ಅಲ್ಲ. ಇಲ್ಲಿ ಆಕ್ಷನ್ ಸೀಕ್ವೆನ್ಸ್ ಕೂಡ ಇವೆ. ಹೀಗಾಗಿ ರಾಗಿಣಿ ಕೂಡ ಈ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗವಹಿಸಬಹುದೇ? ಅನ್ನೋ ಸಣ್ಣ ಕುತೂಹಲವಿದೆ. ಇನ್ನು ಹಿರಿಯ ನಟ ಸಂಪತ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಇರುವುದರಿಂದ 'ಸಂಜು ವೆಡ್ಸ್ ಗೀತಾ 2' ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.

More from Filmibeat

English summary
Actress Ragini become villain for Sanju Weds Geetha 2.
Read more about: ragini rachita ram filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X