"ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನು ನೋಡುತ್ತಿದ್ದರು."; ಆ ಫೋಟೊ ಬಗ್ಗೆ ರಾಗಿಣಿ ದ್ವಿವೇದಿ ಹೇಳಿದ್ದೇನು?

'ವೀರ ಮದಕರಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ರಾಗಿಣಿ ದ್ವಿವೇದಿ ಈಗ ಸ್ಟಾರ್ ನಟಿ. ಕನ್ನಡದ ಹಲವು ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡ ಅಷ್ಟೇ ಅಲ್ಲ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಅಲ್ಲಿನ ಅಭಿಮಾನಿಗಳ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

ಲೈಫ್‌ನಲ್ಲಿ ಎಲ್ಲವೂ ಸರಿಯಿದೆ ಅನ್ನುವಾಗಲೇ ರಾಗಿಣಿ ದ್ವಿವೇದಿ ಡ್ರಗ್ಸ್ ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಇದು ರಾಗಿಣಿಯ ಯಶಸ್ಸಿನ ವೇಗಕ್ಕೆ ಕಡಿವಾಣ ಹಾಕಿತ್ತು. ಒಂದಿಷ್ಟು ದಿನ ಜೈಲಿನಲ್ಲಿಯೂ ಇರಬೇಕಾಗಿತ್ತು. ಆ ವಿವಾದದ ಬಳಿಕ ಈ ನಟಿ ಕಥೆಯೇ ಮುಗೀತು ಅಂತ ಭವಿಷ್ಯ ನುಡಿದಿದ್ದರು. ಆದರೆ, ರಾಗಿಣಿ ಅದೆಲ್ಲವನ್ನೂ ತಲೆಕೆಳಗೆ ಮಾಡಿದ್ದರು.

Ragini Dwivedi said Virat Kohli was looking my legs and revealed missing movies with Darshan

ರಾಗಿಣಿ ಕೈಯಲ್ಲಿ ಕೇವಲ ಕನ್ನಡ ಅಷ್ಟೇ ಅಲ್ಲ. ಪರಭಾಷೆಯ ಸಿನಿಮಾಗಳು ಕೂಡ ಇವೆ. ಇದೇ ವೇಳೆ ರಾಗಿಣಿಯ ಸಂದರ್ಶನದ ಒಂದು ತುಣುಕು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಗಿಣಿ ಭಾರತ ಸ್ಪೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ದರ್ಶನ್ ಮೂರು ಸಿನಿಮಾಗಳಿಗೆ ಮಾಡಿದ್ದ ಸಹಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಹಾಗೂ ರಾಗಿಣಿ ದ್ವಿವೇದಿಯ ಒಂದು ಫೋಟೊ ವೈರಲ್ ಆಗಿತ್ತು. ಆ ಫೋಟೊ ಬಗ್ಗೆ ಈಗ ನೀಡಿದ ಸಂದರ್ಶನದಲ್ಲಿ ರಾಗಿಣಿ ದ್ವಿವೇದಿ ಓಪನ್ ಆಗಿ ಮಾತಾಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ರಾಗಿಣಿ ಸಂದರ್ಶನ ಕೊಟ್ಟಿದ್ದಾರೆ. ಅದರ ಪ್ರೋಮೊ ರಿಲೀಸ್‌ ಆಗಿದ್ದು, ಇಂಟ್ರೆಸ್ಟಿಂಗ್ ಆಗಿದೆ.

ಐಪಿಎಲ್ 6 ವೇಳೆ ರಾಗಿಣಿ ದ್ವಿವೇದಿ ಹಾಗೂ ವಿರಾಟ್ ಕೊಹ್ಲಿಯ ಫೋಟೊ ಒಂದು ವೈರಲ್ ಆಗಿತ್ತು. ಪಂದ್ಯವೊಂದರ ವೇಳೆ ವಿರಾಟ್ ಕೊಹ್ಲಿಯ ಹಿಂದೆ ರಾಗಿಣಿ ಶಾರ್ಟ್ ಡ್ರೆಸ್ ತೊಟ್ಟು ನಿಂತಿದ್ದರು. ಆ ವೇಳೆ ರಾಗಿಣಿಯ ಕಾಲುಗಳನ್ನು ವಿರಾಟ್ ಕೊಹ್ಲಿ ನೋಡುತ್ತಿರುವ ವೇಳೆನೇ ಫೋಟೊ ಕ್ಲಿಕ್ ಮಾಡಲಾಗಿತ್ತು. ಆ ಫೋಟೊ ಎಲ್ಲೆಡೆ ವೈರಲ್ ಆಗಿತ್ತು.

Ragini Dwivedi said Virat Kohli was looking my legs and revealed missing movies with Darshan

ಈ ಬಗ್ಗೆ ನಿರೂಪಕ ಆರ್‌ಜೆ ರಾಜೇಶ್ ಪ್ರಶ್ನೆ ಮಾಡಿದ್ದರು. ಅದಕ್ಕೆ ರಾಗಿಣಿ ಕೊಟ್ಟ ಉತ್ತರವನ್ನು ಚಿಕ್ಕದಾಗಿ ಕಟ್ ಮಾಡಿ ಪ್ರೋಮೊದಲ್ಲಿ ಬಳಸಿದ್ದಾರೆ. ಅದರಲ್ಲಿ ರಾಗಿಣಿ ಹೀಗೆಂದಿದ್ದಾರೆ. "ಅದು ಎರಡು ಮೂರು ನಿಮಿಷ ಅಚಾನಕ್ ನೋಡಿರಬೇಕಷ್ಟೆ. ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನು ನೋಡುತ್ತಿದ್ದರು." ಎಂದು ರಾಗಿಣಿ ಆ ಪ್ರೋಮೊದಲ್ಲಿ ಹೇಳಿಕೊಂಡಿದ್ದಾರೆ.

ಇದೇ ಪ್ರೋಮೊದಲ್ಲಿ ದರ್ಶನ್ ಜೊತೆ ಮೂರು ಸಿನಿಮಾಗೆ ಸಹಿ ಮಾಡಿದ್ದೆ ಎಂದು ರಾಗಿಣಿ ದ್ವಿವೇದಿ ಹೇಳಿಕೊಂಡಿದ್ದಾರೆ. ಅದೂ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ದರ್ಶನ್ ಅವರ ಜೊತೆ ಮೂರು ಸಿನಿಮಾ ಸಹಿ ಮಾಡಿ, ಶೂಟ್ ಮಾಡಿಲ್ಲ." ಎಂದು ಹೇಳುತ್ತಾರೆ. ಬಳಿಕ ಇದಕ್ಕೆ "ಒಳಗಿನ ಪಾಲಿಟಿಕ್ಸ್ ಅನ್ನೋ ಪದವನ್ನು ಬಳಸಬಹುದು" ಎನ್ನುತ್ತಾರೆ. ಇದು ದರ್ಶನ್ ಸಿನಿಮಾ ಕೈ ತಪ್ಪಿದ್ದಕ್ಕೆ ಹೇಳಿದ್ದಾರಾ? ಅಥವಾ ಬೇರೆಯಂದು ಪ್ರಶ್ನೆಗೆ ಹೇಳಿರುವುದಾ? ಅನ್ನೋದನ್ನು ಎಪಿಸೋಡ್ ರಿಲೀಸ್ ಆದಾಗಲೇ ನೋಡಬೇಕು.

ಇದೇ ಪ್ರೋಮೊದಲ್ಲಿ "ವೀರಮದಕರಿ ದೊಡ್ಡ ಹಿಟ್ ಆದರೂ, ನನಗೆ ಆರು ತಿಂಗಳು ಕೆಲಸವಿರಲಿಲ್ಲ. ನಾನು ದಕ್ಷಿಣ ಭಾರತದ ಎತ್ತರದ ನಟಿಯಾಗಿದ್ದೆ. ತುಂಬಾ ಉದ್ದ ಇದ್ದಾರೆ. ಹೀರೊಗಳ ಜೊತೆ ಕೆಲಸ ಮಾಡುವುದಕ್ಕೆ ಆಗಲ್ಲ ಎಂದಿದ್ದರು. ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೂ ಯಾಕೆ ಅವಕಾಶಗಳು ಸಿಗುತ್ತಿಲ್ಲ." ಅಂತನೂ ಹೇಳಿಕೊಂಡಿದ್ದಾರೆ.

More from Filmibeat

English summary
Ragini Dwivedi about Darshan and Virat Kohli. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X