"ಬದಲಾವಣೆಗೆ ಇದೇ ಚಾನ್ಸ್" ಎಂದು ಮತ ಹಾಕಿದ ರಾಗಿಣಿ: ವೋಟ್ ಮಾಡಿ ಸಂಭ್ರಮಿಸಿದ ಸುಂದರಿಯರು!

ಮೇ 10 ಕರ್ನಾಟಕದಲ್ಲಿ ವೋಟಿಂಗ್ ಡೇ. ರಾಜ್ಯದ ಮೂಲೆ ಮೂಲೆಯಲ್ಲಿ ಮತದಾನ ಪ್ರತಿಕ್ರಿಯೆ ನಡೆಯುತ್ತಲೇ ಇದೆ. ಬೆಳಗ್ಗೆಯಿಂದಲೂ ಸ್ಯಾಂಡಲ್‌ವುಡ್ ತಾರೆಯರು ಕೂಡ ಸರದಿಯಲ್ಲಿ ನಿಂತಿ ವೋಟ್ ಮಾಡುತ್ತಿದ್ದಾರೆ.

ವೋಟ್ ಮಾಡಿದ ಬಳಿಕ ಆ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ನಿನ್ನೆ(ಮೇ 9) ವೋಟ್ ಮಾಡಿ ಎಂದು ವಿಡಿಯೋ ಮೂಲಕ ಮಾಡಿಕೊಂಡಿದ್ದರು. ಇಂದು ತಪ್ಪದೇ ವೋಟ್ ಮಾಡಿ ಬಂದಿದ್ದಾರೆ.

ಬದಲಾವಣೆ ತರುವುದಕ್ಕೆ ಇದೊಂದು ಚಾನ್ಸ್

ನಿನ್ನೆ (ಮೇ 9) ರಾಗಿಣಿ ದ್ವಿವೇದಿ ತಮ್ಮ ಅಭಿಮಾನಿಗಳಲ್ಲಿ ವೋಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. "ವೋಟ್ ಮಾಡೋದು ನಮ್ಮ ಮೂಲಭೂತ ಹಕ್ಕು ಅಷ್ಟೇ ಅಲ್ಲದೆ, ನಮ್ಮ ಕರ್ತವ್ಯ ಕೂಡ ಹೌದು. ನಾವು ಯಾವಾಗಲೂ ನಮ್ಮ ಪಕ್ಕದಲ್ಲಿ ಚೆನ್ನಾಗಿಲ್ಲ ಅಂತ ರಾಜಕೀಯ ವ್ಯಕ್ತಿಗಳ ಮೇಲೆ ದೂರುತ್ತಲೇ ಇರುತ್ತೇವೆ. ಈಗ ನಮ್ಮ ಬಳಿ ಬದಲಾವಣೆ ತರುವುದಕ್ಕೆ ಒಂದು ಚಾನ್ಸ್ ಇದೆ. ನಾನು ವೋಟ್ ಮಾಡುತ್ತಿದ್ದೇನೆ. 18 ದಾಟಿದ ಪ್ರತಿಯೊಬ್ಬರೂ, ವೋಟ್ ಮಾಡಬೇಕು. ನಾನು ಯಾವುದೇ ಪಾರ್ಟಿ ಪರವಾಗಿ ಮಾತಾಡುತ್ತಿಲ್ಲ. ಒಬ್ಬ ಸಿಟಿಜನ್ ಆಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಹೋಗಿ ನಿಮ್ಮ ವೋಟ್ ಹಾಕಿ. ಎಲೆಕ್ಷನ್ ಅಂದ್ರೆ, ಜನರಿಂದ, ಜನರಿಗಾಗಿ, ಜನರಿಗೋಸ್ಕರ," ಎಂದು ರಾಗಿಣಿ ದ್ವಿವೇದಿ ಹೇಳಿದ್ದರು.

ಇಂದು (ಮೇ 10) ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಯಲಹಂಕ ಕ್ಷೇತ್ರದ ಜುಡಿಷಿಯಲ್ ಲೇಔಟ್‌ನ ಜೆಡಿಬಿ ಸ್ಕೂಲ್‌ನಲ್ಲಿ ಮತ ಚಲಾಯಿಸಿದ್ದಾರೆ. ಜೊತೆ ಆ ಫೋಟೊವನ್ನು ಹಂಚಿಕೊಂಡಿದ್ದಾರೆ.

'ಕಾಂತಾರ' ನಟಿ ಸಪ್ತಮಿಗೌಡ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಸಿನಿಮಾದ ನಟಿ ಸಪ್ತಮಿಗೌಡ ವೋಟ್ ಮಾಡಿ ಸಂಭ್ರಮಿಸಿದ್ದಾರೆ. ಇವರೂ ಕೂಡ ಮತ ಚಲಾಯಿಸಿದ ಫೋಟೊ ಶೇರ್ ಮಾಡಿದ್ದು, ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

Ragini Dwivedi, Sapthami Gowda, Harshika Poonacha, Amrutha Iyengar And others casted Vote

ಹರ್ಷಿಕಾ ಪೂಣಚ್ಚ

ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಟಿ ಹರ್ಷಿಕಾ ಪೂಣಚ್ಚ ರಾಮಮೂರ್ತಿ ನಗರದಲ್ಲಿ ಮತಚಲಾಯಿಸಿದ್ದಾರೆ. ಇಲ್ಲಿನ ಪೂಣ್ಯಭೂಮಿ ಲೇಔಟ್‌ನ ಕೆಲ್ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತಚಲಾಯಿಸಿದ್ದಾರೆ. ಬಳಿಕ ಫೋಟೊ ಶೇರ್ ಮಾಡಿ ವೋಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Ragini Dwivedi, Sapthami Gowda, Harshika Poonacha, Amrutha Iyengar And others casted Vote

ಅಮೃತಾ ಅಯ್ಯಂಗಾರ್

ಬಡವ ರಾಸ್ಕಲ್, ಗುರುದೇವ್ ಹೊಯ್ಸಳ ಸಿನಿಮಾ ಮೂಲಕ ಜನಪ್ರಿಯರಾಗಿರುವ ಅಮೃತಾ ಅಯ್ಯಂಗಾರ್ ವೋಟ್ ಮಾಡಿದ್ದಾರೆ. ಮೂಲ ಮೈಸೂರು ಆಗಿರೋದ್ರಿಂದ ಅಲ್ಲೇ ಮತ ಹಾಕಿ, ಬಳಿಕ ಆ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.

Ragini Dwivedi, Sapthami Gowda, Harshika Poonacha, Amrutha Iyengar And others casted Vote

ಮತ ಹಾಕಿದವರು ಯಾರೆಲ್ಲ?

ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ನಟಿ, ಭದ್ರಾವತಿ ಮೂಲದ ಆಶಾ ಭಟ್ ವೋಟ್ ಮಾಡಿ, ಮತ ಚಲಾಯಿಸಿದ್ದಾರೆ. 'ಲವ್ ಮಾಕ್ಟೇಲ್' ಖ್ಯಾತಿಯ ಮಿಲನ ನಾಗರಾಜ್, ಅಮೂಲ್ಯ, ಮೇಘನಾ ಗಾಂವ್ಕರ್, ಹರಿಪ್ರಿಯ ಸೇರಿದಂತೆ ನಟಿಯರು ಮತಚಲಾಯಿಸಿದ್ದಾರೆ.

Ragini Dwivedi, Sapthami Gowda, Harshika Poonacha, Amrutha Iyengar And others casted Vote

More from Filmibeat

English summary
Ragini Dwivedi, Sapthami Gowda, Harshika Poonacha, Amrutha Iyengar And others casted Vote
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X