'ಶೀಲ' ಲುಕ್‌ನಲ್ಲಿ ಏಕಕಾಲಕ್ಕೆ ಕನ್ನಡ-ಮಲಯಾಳಂಗೆ ರಾಗಿಣಿ ಎಂಟ್ರಿ: ರಿಲೀಸ್ ಯಾವಾಗ?

ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಗ್ರ್ಯಾಂಡ್ ಕಮ್‌ಬ್ಯಾಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲ. ಈ ಬಾರಿಗೆ ಮಲಯಾಳಂಗೂ ಎಂಟ್ರಿ ಕೊಡುತ್ತಿರೋದು ಗೊತ್ತೇ ಇದೆ.

ರಾಗಿಣಿ 'ಶೀಲ' ಅವತಾರವೆತ್ತಿ ಸ್ಯಾಂಡಲ್‌ವುಡ್ ಹಾಗೂ ಮಲಯಾಳಂನಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಹಾಗೂ ಪೋಸ್ಟರ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ. ಅಂದ್ಹಾಗೆ 'ಶೀಲ' ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ಶೂಟ್ ಮಾಡಲಾಗಿದೆ.

Ragini Dwivedi Movie Sheela July Release

ಈ ದ್ವಿಭಾಷಾ ಸಿನಿಮಾ ಬಗ್ಗೆ ಕೆಲವೇ ದಿನಗಳ ಹಿಂದಷ್ಟೇ ರಾಗಿಣಿ ಸುಳಿವು ನೀಡಿದ್ದರು. ಅಲ್ಲದೆ ಫೋಟೊಗಳನ್ನೂ ರಿಲೀಸ್ ಮಾಡಿದ್ದರು. ಆದ್ರೀಗ, ಈ ಸಿನಿಮಾವನ್ನು ಇನ್ನೊಂದು ಹಂತಕ್ಕೆ ತಗೆದುಕೊಂಡು ಹೋಗುವುದಕ್ಕೆ ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ರಿಲೀಸ್ ಮಾಡೋಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

'ಶೀಲ' ಝಲಕ್ ನೋಡಿ ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಕುತೂಹಲವಿತ್ತು. ಅದಕ್ಕೀಗ ಸ್ವತ: ರಾಗಿಣಿ ಹಾಗೂ ಸಿನಿಮಾ ನಿರ್ಮಾಪಕರೇ ಚಿಕ್ಕದೊಂದು ಸುಳಿವು ಕೊಟ್ಟಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಶೀಲ' ಸಿನಿಮಾ ಜುಲೈ ತಿಂಗಳ ಕೊನೆಗೆ ತೆರೆ ಕಾಣಲಿದೆ. ಕನ್ನಡ ಹಾಗೂ ಮಲೆಯಾಳಂನಲ್ಲಿ ನಿರ್ಮಾಣವಾಗಿದೆ. ಈ ಕುರಿತು ಮಾಹಿತಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ಮೇಕಿಂಗ್ ವಿಡಿಯೋ ಹಾಗೂ ಹಾಡೊಂದನ್ನು ತೋರಿಸಲಾಗಿದೆ.

'ಶೀಲ' ಮಹಿಳಾ ಪ್ರಧಾನ ಸಿನಿಮಾ. ಈ ಬಗ್ಗೆ ರಾಗಿಣಿ ದ್ವಿವೇದಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಪ್ರಸ್ತುತ ಹೆಣ್ಣು ಮಕ್ಕಳು ದಿನ ನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಹೆಣ್ಣು ಮನಸ್ಸು ಮಾಡಿದರೆ, ತನ್ನಗೆ ಎದುರಾಗುವ ಸಮಸ್ಯೆಯನ್ನು ತಾನೇ ಹೇಗೆ ಬಗೆಹರಿಸಿಕೊಳ್ಳಬಹುದು‌ ಎಂಬುದನ್ನು ಕೂಡ ಈ ಚಿತ್ರದಲ್ಲಿ ತೋರಿಸಿದ್ದೇವೆ. ಹೆಣ್ಣು ಲಕ್ಷ್ಮೀ ಸ್ವರೂಪವೂ ಹೌದು. ಕಾಳಿ ಸ್ವರೂಪಳು ಹೌದು. ನಿರ್ದೇಶಕ ಬಾಲು ನಾರಾಯಣನ್ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ." ಎಂದು ರಾಗಿಣಿ ಹೇಳಿದ್ದಾರೆ.

ಈ ಸಿನಿಮಾವನ್ನು ಕೇರಳ ಹಾಗೂ ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಹಾಗೂ ಮಲೆಯಾಳಂ ಎರಡೂ ಭಾಷೆಗಳಲ್ಲೂ ಚಿತ್ರೀಕರಣವಾಗಿದ್ದು ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇಲ್ಲಿ ಸಿಗುವ ಪ್ರತಿಕ್ರಿಯೆ ನೋಡಿ ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಸಾಧ್ಯತೆಯಿದೆ.

Ragini Dwivedi Movie Sheela July Release

"ನಾನು ಮೂಲತಃ ಉದ್ಯಮಿ. ಕಳೆದ ಮೂವತ್ತೈದು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇವೆ‌. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ಕಥೆ ಚೆನ್ನಾಗಿದೆ . ಜುಲೈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುತ್ತೇವೆ. ನೋಡಿ, ಪ್ರೋತ್ಸಾಹಿಸಿ" ಎಂದಿದ್ದಾರೆ ನಿರ್ಮಾಪಕ ಡಿ.ಎಂ.ಪಿಳ್ಳೈ.

ಬಾಲು ನಾರಾಯಣನ್ 'ಶೀಲ' ಸಿನಿಮಾ ನಿರ್ದೇಶಕ. ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಜೊತೆಗೆ ನಟ ಅವಿನಾಶ್, ಶೋಭ್‌ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಹಲವು ಮಂದಿ ನಟಿಸಿದ್ದಾರೆ.

More from Filmibeat

English summary
Ragini Dwivedi's Kannada-Malayalam movie Sheela releasing on July end, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X